ರಣಬೀರ್ ಕಪೂರ್ (Ranbir Kapoor) ಹಾಗೂ ಕತ್ರಿನಾ ಕೈಫ್ ಒಂದು ಕಾಲದಲ್ಲಿ ಪರಸ್ಪರ ಡೇಟ್ ಮಾಡುತ್ತಿದ್ದರು. ಆ ಬಳಿಕ ಇವರು ಬೇರೆ ಆದರು. ವಿಶೇಷ ಎಂದರೆ ಈಗ ಇಬ್ಬರೂ ಸಿನಿಮಾ ರಂಗದಲ್ಲಿ ಇರುವವರನ್ನೇ ಮದುವೆ ಆಗಿದ್ದಾರೆ. ರಣಬೀರ್-ಕತ್ರಿನಾ ಒಟ್ಟಾಗಿ ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ (2009), ‘ರಾಜ್ನೀತಿ’ (2019) ಹಾಗೂ ‘ಜಗ್ಗಾ ಜಾಸೂಸ್’ (2017) ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇಬ್ಬರೂ ಮತ್ತೊಮ್ಮೆ ಒಟ್ಟಾಗಿ ನಟಿಸಲ್ಲ ಎಂದು ಕತ್ರಿನಾ ಕ್ಲಿಯರ್ ಆ್ಯಂಡ್ ಕಟ್ ಆಗಿ ಹೇಳಿದ್ದರು. ಆದರೆ, ಈ ವಿಚಾರ ಸುಳ್ಳಾಗಿದೆ. ಇಬ್ಬರೂ ಈಗ ಮತ್ತೆ ಒಂದಾಗಿದ್ದಾರೆ.
2017ರಲ್ಲಿ ಕತ್ರಿನಾ ಕೈಫ್ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ರಣಬೀರ್ ಜೊತೆ ಮತ್ತೆ ಒಂದಾಗಿರೋದು ಹೇಗೆ ಅನಿಸುತ್ತಿದೆ’ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಕತ್ರಿನಾ, ‘ಇದು ತುಂಬಾನೇ ಕಷ್ಟವಾಗಿತ್ತು. ನಾವು ಇನ್ನುಮುಂದೆ ಒಟ್ಟಾಗಿ ಕೆಲಸ ಮಾಡಲ್ಲ’ ಎಂದು ಕತ್ರಿನಾ ಹೇಳಿದ್ದರು.
ಆದರೆ, ರಣಬೀರ್ ಕಪೂರ್ ಈ ವಿಚಾರದಲ್ಲಿ ಹೇಳೋದೇ ಬೇರೆ. ‘ಅದು ಸುಮ್ಮನೆ ಫನ್ಗೆ ಹೇಳಿದ್ದಾಗಿತ್ತು. ನಾನು ಅವರ ಮೇಲೆ ಜೋಕ್ ಮಾಡಿದೆ, ಅವರು ನನ್ನ ಮೇಲೆ ಜೋಕ್ ಮಾಡಿದರು. ನಾನು ಕತ್ರಿನಾ ಬಳಿಯೂ ಮಾತನಾಡಿದ್ದೇನೆ, ಜೋಕ್ ರೀತಿ ಹೇಳಿದ್ದನ್ನು ಮಾಧ್ಯಮದವರು ಬೇರೆ ರೀತಿ ತೆಗೆದುಕೊಂಡರು, ನಾನು ಆ ಅರ್ಥದಲ್ಲಿ ಹೇಳಿಯೇ ಇರಲಿಲ್ಲ ಎಂದು ಕತ್ರಿನಾ ನನ್ನ ಬಳಿ ಹೇಳಿಕೊಂಡಿದ್ದರು’ ಎಂಬುದಾಗಿ ರಣಬೀರ್ ಹೇಳಿದ್ದರು.
‘ನನ್ನ ಹಾಗೂ ಕತ್ರಿನಾ ಮಧ್ಯೆ ಒಳ್ಳೆಯ ಪಾರ್ಟ್ನರ್ಶಿಪ್ ಇದೆ. ಅವರ ಜೊತೆ ಕೆಲಸ ಮಾಡೋಕೆ ನನಗೆ ಇಷ್ಟ. ನನ್ನ ಸ್ಟಾರ್ಡಂನ ಅವರು ಹೆಚ್ಚಿಸಿದ್ದರು. ಅವರು ನನಗಿಂತ ದೊಡ್ಡ ಸ್ಟಾರ್ ಆಗಿದ್ದರು’ ಎಂದಿದ್ದರು ರಣಬೀರ್ ಕಪೂರ್.
‘ಜಗ್ಗಾ ಜಾಸೂಸ್’ ಸಿನಿಮಾದಲ್ಲಿ ರಣಬೀರ್ ಹೀರೋ ಆಗಿ ನಟಿಸುವುದರ ಜೊತೆಗೆ ಅವರು ನಿರ್ಮಾಣವನ್ನು ಮಾಡಿದ್ದರು. ಈ ಚಿತ್ರವನ್ನು ಅನುರಾಗ್ ಬಸು ಅವರು ನಿರ್ದೇಶನ ಮಾಡಿದ್ದರು. ಆದರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡೋಕೆ ವಿಫಲವಾಯಿತು. ಇದಾದ ಬಳಿಕ ಕತ್ರಿನಾ ಹಾಗೂ ರಣಬೀರ್ ಒಟ್ಟಾಗಿ ತೆರೆ ಹಂಚಿಕೊಂಡಿಲ್ಲ.
ಇದನ್ನೂ ಓದಿ: ರಣಬೀರ್ ಕಪೂರ್ ಒಡೆತನದ 8 ಕೋಟಿ ರೂ. ಕಾರಿನ ಹಿಂದೆ ಬಿದ್ದ ಫ್ಯಾನ್ಸ್; ಅಪ್ಸೆಟ್ ಆದ ನಟ ಮಾಡಿದ್ದೇನು?
ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಅವರು ಸಂಜಯ್ ಲೀಲಾ ಬನ್ಸಾಲಿ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಜನವರಿಯಲ್ಲಿ ಘೋಷಣೆ ಆಗಿದ್ದು 2025ರ ಕ್ರಿಸ್ಮಸ್ಗೆ ತೆರೆಮೇಲೆ ಬರಲಿದೆ. ಈ ವರ್ಷ ನವೆಂಬರ್ನಲ್ಲಿ ಸಿನಿಮಾ ಸೆಟ್ಟೇರಲಿದೆ. ಮತ್ತೊಮ್ಮೆ ಕತ್ರಿನಾ ಹಾಗೂ ರಣಬೀರ್ ಒಟ್ಟಾಗಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ರಣಬೀರ್ ಅವರು ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಮೇರಿ ಕ್ರಿಸ್ಮಸ್’ ಬಳಿಕ ಕತ್ರಿನಾ ಹೊಸ ಸಿನಿಮಾ ಘೋಷಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.