ಮಿತಿಮೀರಿದ ವಯಸ್ಕರ ವಿಷಯ; ಸಿನಿಮಾ ಬ್ಯಾನ್ ಮಾಡಲು ಕೇಳಿಬಂತು ಆಗ್ರಹ

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಹಾಗೂ ಕೀರ್ತಿ ಸುರೇಶ್ ನಟನೆಯ 'ಡೊರೊಥಿ' ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಚಿತ್ರದ ನೈಜ ನಿರೂಪಣೆ ಮತ್ತು ನಟನೆಯನ್ನು ವೀಕ್ಷಕರು ಮೆಚ್ಚಿದ್ದಾರೆ. ಆದರೆ ಎಲ್‌ಜಿಬಿಟಿಕ್ಯೂ ಪಾತ್ರಗಳ ಚಿತ್ರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸಿನಿಮಾ ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ.

ಮಿತಿಮೀರಿದ ವಯಸ್ಕರ ವಿಷಯ; ಸಿನಿಮಾ ಬ್ಯಾನ್ ಮಾಡಲು ಕೇಳಿಬಂತು ಆಗ್ರಹ
ಡೊರೊಥಿ

Updated on: Sep 26, 2026 | 10:56 AM

ಮುಖ್ಯಾಂಶಗಳು

  • ಕೀರ್ತಿ ಸುರೇಶ್ 'ಡೊರೊಥಿ'ಗೆ ಬಿಡುಗಡೆಯಾದ ಬೆನ್ನಲ್ಲೇ ವಿರೋಧ
  • ಬಹಿಷ್ಕಾರಕ್ಕೆ ಎಕ್ಸ್‌ನಲ್ಲಿ ನೆಟ್ಟಿಗರ ಕರೆ
  • ನೈಜ ಕಥೆಗೆ ಸಿಕ್ತು ಮೆಚ್ಚುಗೆ

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ‘ಡೊರೊಥಿ’ ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ನೈಜ ನಿರೂಪಣೆಗೆ ಒಂದೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಮತ್ತೊಂದೆಡೆ ಎಲ್‌ಜಿಬಿಟಿಕ್ಯೂ ವಿಷಯವನ್ನು ತೋರಿಸಿದ ರೀತಿಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಹಿಷ್ಕರಿಸುವಂತೆ ಕರೆ ನೀಡಲಾಗುತ್ತಿದೆ.

ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್ ಸಾಕಷ್ಟು ಹೆಸರು ಮಾಡಿದವರು. ಅವರ ನಿರ್ದೇಶನದ ‘ಡೊರೊಥಿ’ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್, ರಿಷಿಕಾಂತ್ ಮತ್ತು ಸನಂತ್ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ತಕ್ಷಣ ಎಕ್ಸ್ ಖಾತೆಯಲ್ಲಿ ಮಿಶ್ರ ಅನಿಸಿಕೆಗಳು ವ್ಯಕ್ತವಾಗಿವೆ.

‘ಚಿತ್ರದ ಮೊದಲಾರ್ಧ ನಿಧಾನವಾಗಿ ಸಾಗಿದರೂ ಕಥೆ ಗಟ್ಟಿಯಾಗಿದೆ ಎಂದು ವೀಕ್ಷಕರು ಹೇಳಿದ್ದಾರೆ. ಕೀರ್ತಿ ಸುರೇಶ್ ಅವರ ಅಭಿನಯ ಸಣ್ಣದಾಗಿದ್ದರೂ ಪರಿಣಾಮಕಾರಿಯಾಗಿದೆ. ಸಿಂಗಲ್ ಶಾಟ್ ದೃಶ್ಯ ಹಾಗೂ ಇಂಟರ್ವಲ್ ಬ್ಲಾಕ್ ಅದ್ಭುತವಾಗಿ ಮೂಡಿಬಂದಿದೆ. ಇಳಯರಾಜ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ದೊಡ್ಡ ಬಲ ತಂದಿದೆ’ ಎಂಬ ಮಾತು ಕೇಳಿ ಬಂದಿದೆ.

ಮತ್ತೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿದೆ. ಚಿತ್ರದಲ್ಲಿ ಎಲ್‌ಜಿಬಿಟಿಕ್ಯೂ ವಿಷಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದರಿಂದ ಹಲವು ವೀಕ್ಷಕರು ಕಾರ್ತಿಕ್ ಸುಬ್ಬರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಬ್ಬರು ಪುರುಷರು ಕಿಸ್ ಮಾಡುವ ದೃಶ್ಯ ಕೂಡ ಇದ್ದು, ಇದು ಚರ್ಚೆಯ ಕೇಂದ್ರ ಬಿಂದು ಆಗಿದೆ.ಮಿತಿ ಮೀರಿದ ವಯಸ್ಕ ವಿಷಯವಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ: ಲೋಕೇಶ್ ಕನಗರಾಜ್ ಬಳಿಕ ಮತ್ತೊಬ್ಬ ತಮಿಳು ಸ್ಟಾರ್ ನಿರ್ದೇಶಕನ ಸಿನಿಮಾನಲ್ಲಿ ಉಪ್ಪಿ

ಈ ಕಾರಣದಿಂದ ಎಕ್ಸ್ ವೇದಿಕೆಯಲ್ಲಿ #BoycottDorothy ಟ್ರೆಂಡ್ ಮಾಡಲು ಕರೆ ನೀಡಲಾಗಿದೆ. ಇಂತಹ ವಿಷಯಗಳನ್ನು ಬಲವಂತವಾಗಿ ಜನರ ಮೇಲೆ ಹೇರುವುದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಪ್ರತಿಷ್ಠಿತ ನಿರ್ದೇಶಕರಿಂದ ಇಂತಹ ಸಿನಿಮಾವನ್ನು ನಿರೀಕ್ಷಿಸಿರಲಿಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:51 am, Sat, 26 September 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us