ಕೆಜಿಎಫ್ ಬಾಬುಗೆ ಮುಳುವಾಯ್ತು ಅಮಿತಾಭ್, ಆಮಿರ್​ ಬಳಿ ಖರೀದಿಸಿದ ಐಷಾರಾಮಿ ಕಾರುಗಳು

KGF Babu: ಕೆಜಿಎಫ್ ಬಾಬು ಅವರ ಐಷಾರಾಮಿ ಕಾರುಗಳ ಮೇಲೆ RTO ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಬಾಬು ಅವರ ಕಾರುಗಳಲ್ಲಿ ಎಂಎಲ್​ಸಿ ಪಾಸ್ ಕಂಡುಬಂದಿದೆ. ಬಾಬು ತೆರಿಗೆ ಕಟ್ಟಲು ಸಿದ್ಧ ಎಂದು ಹೇಳಿದ್ದಾರೆ

ಕೆಜಿಎಫ್ ಬಾಬುಗೆ ಮುಳುವಾಯ್ತು ಅಮಿತಾಭ್, ಆಮಿರ್​ ಬಳಿ ಖರೀದಿಸಿದ ಐಷಾರಾಮಿ ಕಾರುಗಳು
ಬಾಬು

Updated on: Jul 23, 2025 | 11:12 AM

ತುಂಬಾನೇ ಕಷ್ಟ ಕಂಡಿದ್ದ ಕೆಜಿಎಫ್​​ ಬಾಬು (KGF Babu) ಈಗ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಅವರು ಸಾವಿರಾರು ಕೋಟಿ ರೂಪಾಯಿ ಒಡೆಯ. ಅವರ ಬಳಿ ಆಮಿರ್ ಖಾನ್ ಹಾಗೂ ಅಮಿತಾಭ್ ಬಚ್ಚನ್ ಬಳಿಸಿದ್ದ ಕಾರುಗಳು ಇವೆ. ಈಗ ಇದೇ ಕಾರಿನಿಂದ ಅವರಿಗೆ ಸಂಕಷ್ಟ ಎದುರಾಗಿದೆ. ವಸಂತನಗರದಲ್ಲಿರುವ ರುಕ್ಸಾನಾ ಪ್ಯಾಲೇಸ್ ನಿವಾಸದ​​ ಮೇಲೆ ಆರ್​ಟಿಒ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಕೆಜಿಎಫ್ ಬಾಬುಗೆ ಸೆಲೆಬ್ರಿಟಿಗಳು ಬಳಕೆ ಮಾಡಿದ ಕಾರುಗಳನ್ನು ಖರೀದಿ ಮಾಡುವ ಕ್ರೇಜ್ ಇದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ಕಾರು ಎಂದರೆ ಅವರು ಖರೀದಿಸಿ ತರುತ್ತಾರೆ. ಕೆಜಿಎಫ್ ಬಾಬು ಬಳಿ ಎರಡು ರೋಲ್ಸ್ ರಾಯ್ಸ್ ಕಾರಿದೆ. ಅಮಿತಾಭ್ ಬಚ್ಚನ್ ಬಳಸುತ್ತಿದ್ದ MH 11 AX 1 ಹಾಗೂ ಆಮಿರ್ ಖಾನ್ ಒಂದು ವರ್ಷ ಮಾತ್ರ ಬಳಸಿದ್ದ MH 02 BB 2 ಸಂಖ್ಯೆಯ ಕಾರನ್ನು ಕೆಜಿಎಫ್ ಬಾಬು ಖರೀದಿಸಿ ತಂದಿದ್ದರು.

ಈಗ ಬಾಬು ತೆರಿಗೆ ಕಟ್ಟದ ಕಾರಣ ಆರ್​ಟಿಒ ಜಂಟಿ ಆಯುಕ್ತೆ ಶೋಭಾ ನೇತೃತ್ವದ ತಂಡ ಬಾಬು ಮನೆಯ ಮೇಲೆ ದಾಳಿ ನಡೆಸಿತು. ಈ ವೇಳೆ ಗೇಟ್​ ತೆಗೆಯದೆ ಕೆಜಿಎಫ್ ಬಾಬು ಮೊಂಡಾಟ ಪ್ರದರ್ಶಿಸಿದರು. ಹೀಗಾಗಿ, ಕೆಲ ಹೊತ್ತು ಅವರ ಮನೆ ಮುಂದೆಯೇ ಕಾದು ನಿಲ್ಲಬೇಕಾದ ಪರಿಸ್ಥಿತಿ ಆರ್​ಟಿಒ ಅಧಿಕಾರಿಗಳಿಗೆ ಬಂತು.

ಇದನ್ನೂ ಓದಿ
‘ನಾನು ಒಳ್ಳೆಯ ತಂದೆಯಲ್ಲ’; ಶಾರುಖ್ ಖಾನ್ ಬೇಸರ
ಮಂಗಳವಾರ ಹೇಗಿದೆ ‘ಜೂನಿಯರ್’ ಹಾಗೂ ‘ಎಕ್ಕ’ ಸಿನಿಮಾ ಕಲೆಕ್ಷನ್?
ಮಂಗಳವಾರದ ‘ಸೈಯಾರ’ ಕಲೆಕ್ಷನ್​ಗೆ ‘ಪಠಾಣ್’ ದಾಖಲೆಯೇ ಉಡೀಸ್
ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?

ಇದನ್ನೂ ಓದಿ: ಕೇವಲ 3000 ರೂ.ದಿಂದ 7000 ಕೋಟಿ ದುಡಿದ ಕೆಜಿಎಫ್ ಬಾಬು ಪ್ಯಾಲೇಸ್ ಹೇಗಿದೆ ನೋಡಿ

ಟ್ಯಾಕ್ಸ್ ಕಟ್ಟುತ್ತೇನೆ ಎಂದ ಬಾಬು

ಘಟನೆ ಬಗ್ಗೆ ಬಾಬು ಪ್ರತಿಕ್ರಿಯಿಸಿದ್ದಾರೆ. ‘ನಾನು ಟ್ಯಾಕ್ಸ್ ಕಟ್ಟಲು ಸಿದ್ಧನಿದ್ದೇನೆ. ನನ್ನ ಎರಡು ಕಾರುಗಳಿಗೆ ಮಹಾರಾಷ್ಟ್ರದಲ್ಲಿ ನೋಂದಣಿ ಆಗಿದೆ. 2 ಕಾರುಗಳಿಗೆ ಮಹಾರಾಷ್ಟ್ರದಲ್ಲಿ ಲೈಫ್​ಟೈಮ್ ಟ್ಯಾಕ್ಸ್ ಕಟ್ಟಿದ್ದೇನೆ. ಈಗ RTO ಅಧಿಕಾರಿಗಳು ಕರ್ನಾಟಕ ತೆರಿಗೆ ಕಟ್ಟಿ ಎನ್ನುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಟ್ಯಾಕ್ಸ್ ಕಟ್ಟದೇ ಇರಲ್ಲ. ಆರ್​ಟಿಒ ಈಗ ಅವಕಾಶ ಕೊಟ್ಟರೆ ಈಗಲೇ ತೆರಿಗೆ ಕಟ್ಟುತ್ತೇನೆ’ ಎಂದು ಅವರು ಹೇಳಿದ್ದಾರೆ.

ಎಂಎಲ್​ಸಿ ಪಾಸ್ ಪತ್ತೆ

ಕೆಜಿಎಫ್ ಬಾಬು ಕಾರುಗಳ ಮೇಲೆ ಎಂಎಲ್​ಸಿ ಪಾಸ್ ಪತ್ತೆ ಆಗಿದೆ. ನಜೀರ್ ಅಹ್ಮದ್ ಅವರ ಪಾಸ್ ಅನ್ನು ತಮ್ಮ ಕಾರಿಗೆ ಹಾಕಿಕೊಂಡು ಅವರು ಓಡಾಡುತ್ತಿದ್ದರು. ರೋಲ್ಸ್ ರಾಯ್ಸ್, ಫೋರ್ಡ್ ಕಾರಿನ ಮೇಲೆ ಎಂಎಲ್​ಸಿ ಪಾಸ್ ಕಾಣಿಸಿದೆ. ಮಾಧ್ಯಮದವರು ನೋಡುತ್ತಿದ್ದಂತೆ ಪಾಸ್ ತೆರವು ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:09 am, Wed, 23 July 25