Mute Movie: ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಹೊಸ ಸಿನಿಮಾ ಒಟಿಟಿಯಲ್ಲಿ

|

Updated on: Feb 23, 2023 | 8:24 PM

ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ತಾಯಿಯ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಯುವನಟಿ ಅರ್ಚನಾ ಜೋಯಿಸ್ ನಾಯಕಿಯಾಗಿ ನಟಿಸಿರುವ ಹೊಸ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಕಂಡಿದೆ.

Mute Movie: ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಹೊಸ ಸಿನಿಮಾ ಒಟಿಟಿಯಲ್ಲಿ
ಮ್ಯೂಟ್ ಸಿನಿಮಾದಲ್ಲಿ ಅರ್ಚನಾ ಜೋಯಿಸ್
Follow us on

ಕೆಜಿಎಫ್ (KGF) ಸಿನಿಮಾದಲ್ಲಿ ರಾಕಿಭಾಯ್ ತಾಯಿಯ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಯುವನಟಿ ಅರ್ಚನಾ ಜೋಯಿಸ್ (Archana Jois) ನಾಯಕಿಯಾಗಿ ನಟಿಸಿರುವ ಹೊಸ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಕಂಡಿದೆ.

ಮ್ಯೂಟ್ ಹೆಸರಿನ ಥ್ರಿಲ್ಲರ್ ಸಿನಿಮಾದಲ್ಲಿ ಅರ್ಚನಾ ನಟಿಸಿದ್ದು, ಸಿನಿಮಾವು ನಮ್ಮಫ್ಲಿಕ್ಸ್ ಹೆಸರಿನ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಪ್ರಸ್ತುತ ಕನ್ನಡ ಭಾಷೆಯಲ್ಲಿ ಮಾತ್ರವೇ ಸಿನಿಮಾ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳಲ್ಲಿ ವೀಕ್ಷಿಸಲು ಲಭ್ಯವಾಗಲಿದೆ ಎಂದು ಚಿತ್ರತಂಡ ಹೇಳಿದೆ.

ತನ್ನ ನಾಯಿಗೆ ಚಿತ್ರಹಿಂಸೆ ನೀಡುತ್ತಿರುವ ಸೈಕೋ ಕಿಲ್ಲರ್ ಒಬ್ಬನನ್ನು ಸಾಮಾನ್ಯ ಯುವತಿಯೊಬ್ಬಕೆ ಬೆನ್ನಟ್ಟುವ ಥ್ರಿಲ್ಲಿಂಗ್ ಕತೆಯನ್ನು ಹೊಂದಿರುವ ಸಿನಿಮಾ ಇದು. ಸಿನಿಮಾದ ಟ್ರೈಲರ್ ಅನ್ನು ಬಾಲಿವುಡ್ ಬೆಡಗಿ ರವೀನಾ ಟಂಡನ್ ಏಕಕಾಲದಲ್ಲಿ ಕನ್ನಡ, ತೆಲುಗು, ಮಾಲಯಾಳಂ, ತಮಿಳು ಮತ್ತು ಹಿಂದಿ ಐದೂ ಭಾಷೆಗಳಲ್ಲೂ ಈ ಹಿಂದೆ ಬಿಡುಗಡೆ ಮಾಡಿದ್ದರು.

ತಮಿಳಿನ ಪ್ರಖ್ಯಾತ ನಟ ಆಡುಕಲಂ ನರೇನ್ ಸೇರಿದಂತೆ ಸಿದ್ದಾರ್ಥ್ ಮಾಧ್ಯಮಿಕ, ತೇಜಸ್ ವೆಂಕಟೇಶ್ ಇನ್ನೂ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

“ಮ್ಯೂಟ್” ಸಿನಿಮಾವನ್ನು ಜಿ ಗಂಗಾಧರ್ ನಿರ್ಮಾಣ ಮಾಡಿದ್ದ್ದಾರೆ. ‘ಮುಂಗಾರು ಮಳೆ, ಮೊಗ್ಗಿನ ಮನಸು ಚಿತ್ರಗಳಿಗೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಮೊಗ್ಗಿನಮನಸು ಖ್ಯಾತಿಯ ನಿರ್ದೇಶಕ ಶಶಾಂಕ್ ಅವರೊಂದಿಗೆ ಮುಂಗಾರುಮಳೆ-2ರಲ್ಲಿ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ತೇಜಸ್ ಪಬ್ಲಿಕೇಷನ್ ಡಿಜಿಟಲ್ ತಂತ್ರಗಳನ್ನು ರೂಪಿಸಿದ್ದಾರೆ.

ದಿವ್ಯಾ ಎನ್ನುವ ಸ್ವಾವಲಂಬಿ ಮಹಿಳೆ ತನ್ನ ಗಂಡನ ಮೋಸ ಗೊತ್ತಾದಾಗ ಕುಸಿದು ಹೋಗ್ತಾಳೆ. ಆದ್ರೆ ಕಾಸ್ಮೋ ಎಂದು ಹೆಸರು ಇಟ್ಟು ಪ್ರೀತಿಯಿಂದ ಒಂದು ನಾಯಿಯನ್ನು ಸಾಕಿದ ಮೇಲೆ ಅವಳ ಜೀವನ ಬದಲು ಆಗತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲ ಆಗಿರುವ ದಿವ್ಯಾ, ‘ ‘ದಿವ್ಯಾ ಸ್ಟೇಟ್ ಆಫ್ ಮೈಂಡ್ ‘ ಹೆಸರಿನ ಅವಳ ಪೇಜ್ ತುಂಬಾ ಫೇಮಸ್ ಆಗತ್ತೆ. ಹೀಗೆ ಇದ್ದಾಗ ಅವಳ ನಾಯಿ ಕಸ್ಮೋ ಕಳೆದು ಹೋಗುತ್ತೆ. ಆ ನಾಯಿ ಸೈಕೊ ಒಬ್ಬನ ಕೈ ಸೇರುತ್ತದೆ. ಆ ಸೈಕೋ ಅನ್ನು ದಿವ್ಯಾ ಹೇಗೆ ಎದುರಿಸುತ್ತಾಳೆ, ತನ್ನ ನಾಯಿಯನ್ನು ಮರಳಿ ಪಡೆಯುತ್ತಾಳೆಯೇ ಎಂಬುದೇ ಸಿನಿಮಾದ ಕತೆ.

ಮತ್ತಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Thu, 23 February 23