ಕಮಲ್ ಹಾಸನ್ ಸಂಸತ್ತಿಗೆ ಹೋಗುವುದನ್ನು ನೋಡಲು ಬಯಸುತ್ತೇನೆ: ಖುಷ್ಬು ಸುಂದರ್

|

Updated on: May 18, 2023 | 8:05 PM

Kushbu Sundar-Kamal Haasan: ತಮಿಳುನಾಡಿನ ಮತದಾರ ಮನಸ್ಸು ಗೆಲ್ಲಬೇಕೆಂದರೆ ಕಷ್ಟಪಟ್ಟು ಕೆಲಸ ಮಾಡಬೇಕು, ಕೇವಲ ಸ್ಟಾರ್ ಆಗಿದ್ದ ಮಾತ್ರಕ್ಕೆ ಆಗುವುದಿಲ್ಲ: ಖುಷ್ಬು ಸುಂದರ್

ಕಮಲ್ ಹಾಸನ್ ಸಂಸತ್ತಿಗೆ ಹೋಗುವುದನ್ನು ನೋಡಲು ಬಯಸುತ್ತೇನೆ: ಖುಷ್ಬು ಸುಂದರ್
ಕಮಲ್ ಹಾಸನ್
Follow us on

ಖುಷ್ಬು ಸುಂದರ್
ಕಮಲ್ ಹಾಸನ್ (Kamal Haasan) ಅವರೊಂದಿಗಿನ ನನ್ನ ಸ್ನೇಹ 30 ವರ್ಷಗಳಷ್ಟು ಹಳೆಯದು. ನಮ್ಮ ಸ್ನೇಹದ ನಡುವೆ ನಾವು ರಾಜಕೀಯವನ್ನು (Politics) ತರುವುದಿಲ್ಲ, ಇದನ್ನು ನಾವು ಹಾಗೆಯೇ ಮುಂದುವರೆಸಲು ಬಯಸುತ್ತೇವೆ. ನಾನು ಬೇಲಿಯ ಇನ್ನೊಂದು ಬದಿಯಲ್ಲಿರಬಹುದು (ಭಾರತೀಯ ಜನತಾ ಪಕ್ಷದ ಸದಸ್ಯನಾಗಿ ಮತ್ತು ರಾಜಕೀಯ ಪ್ರತಿಸ್ಪರ್ಧಿಯಾಗಿ) ಆದರೆ ನಾನು ಕಮಲ್ ಹಾಸನ್ ಬಗ್ಗೆ ಮಾತನಾಡಿಲ್ಲ, ಅದೂ ಅವರು ರಾಜಕೀಯ ಹೇಳಿಕೆ ನೀಡಿದಾಗಲೂ ಸಹ.

ಕಮಲ್, ತಮಿಳುನಾಡಿನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತದ ಜನರಿಗೆ ಮತ್ತು ನನಗೂ ಸಹ ದೊಡ್ಡ ಸ್ಟಾರ್. ನಾನು 12 ವರ್ಷದವಳಾದ್ದಾಗ, ನಾನು ಅವರನ್ನು ಮದುವೆಯಾಗುವ ಆಸೆಯನ್ನು ಹೊಂದಿದ್ದೆ. ಅವರು ‘ಏಕ್ ದುಜೆ ಕೆ ಲಿಯೇ’, ‘ಸನಮ್ ತೇರಿ ಕಸಮ್’ ಮತ್ತು ‘ಸಾಗರ್‌’ ನಂತಹ ಹಿಂದಿ ಚಲನಚಿತ್ರಗಳನ್ನು ಮಾಡುತ್ತಿದ್ದರು. ನಾನು ತಮಿಳು ಚಿತ್ರರಂಗಕ್ಕೆ ಬರುತ್ತೇನೆ, ಅವರೊಂದಿಗೆ ಕೆಲಸ ಮಾಡುತ್ತೇನೆ ಆ ನಂತರ ಅವರ ಸ್ನೇಹವನ್ನು ನಾನು ಸಂಪಾದಿಸುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ನಾನು ಅವರೊಂದಿಗೆ ‘ಮೈಕೆಲ್ ಮದನ ಕಾಮ ರಾಜನ್’ ಮತ್ತು ‘ವೆಟ್ರಿ ವಿಜಯ’ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ.

ರಾಜಕೀಯ ಮತ್ತು ಸಿನಿಮಾರಂಗವನ್ನು ಬ್ಯಾಲೆನ್ಸ್ ಮಾಡುವುದು ಬಹಳ ಕಷ್ಟ. ಕಲೈಂವರ್ (ಎಂ ಕರುಣಾನಿಧಿ), ಎಂಜಿ ರಾಮಚಂದ್ರನ್ ಮತ್ತು ಜಯಲಲಿತಾ ಅವರಂತಹ ಸ್ಟಾರ್​ಗಳು ಸಿನಿಮಾಗಳಿಂದಾಗಿ ರಾಜಕೀಯದಲ್ಲಿ ಪ್ರಭಾವ ಬೀರಿದನ್ನು ನಾವು ನೋಡಿದ್ದೇವೆ. ಆದರೆ ಈಗ ಕಾಲ ಬದಲಾಗಿದೆ. ಎಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಚಿರಂಜೀವಿ ಮತ್ತು ಪವನ್ ಕಲ್ಯಾಣ್​ಗೆ ಏನಾಗಿದೆ ನೋಡಿ.

ಕಮಲ್​ರ ವಿಕ್ರಮ್ ಸಿನಿಮಾ ಯಶಸ್ಸು ಅವರಿಗೆ ರಾಜಕೀಯವಾಗಿ ಎಷ್ಟು ಸಹಾಯ ಮಾಡುತ್ತದೆ ಎಂಬುದನ್ನು ನಾವು 2024 ರಲ್ಲಿ ಗೊತ್ತಾಗಲಿದೆ. ಅವರ ಸಿನಿಮಾ ಯಶಸ್ವಿಯಾಗಿರುವುದು ನನಗೆ ಹೆಚ್ಚು ಖುಷಿ ತಂದಿದೆ. ಅವರ ಸ್ನೇಹಿತೆ ಮತ್ತು ಅಪ್ಪಟ ಅಭಿಮಾನಿಯಾಗಿ, ಅವರು ಬೆಳವಣಿಗೆ, ಯಶಸ್ಸು ಮತ್ತು ಖುಷಿಯಾಗಿರುವುದನ್ನೇ ನಾನು ಬಯಸುತ್ತೇನೆ. ಮುಂದೆ ಅವರು ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಅವರು ಮಾಡುವ ಸಿನಿಮಾ ಅವರ ವ್ಯಕ್ತಿತ್ವವನ್ನು ಜನರಿಗೆ ಪ್ರಚಾರ ಪಡಿಸಬಹುದು ಮತ್ತು 2024 ರ ಚುನಾವಣೆಯಲ್ಲಿ ಜನರು ಅವರಿಗೆ ಮತ ಹಾಕುವಂತೆ ಮಾಡಬಹುದು. ಅವರು ಸಂಸತ್ತಿಗೆ ಹೋಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ಆದರೆ ಅದು ಅವರು ಮಾಡುವ ಕೆಲಸ ಮತ್ತು ಮತದಾರರ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ:Pushpaka Vimana: ‘ಪುಷ್ಪಕ ವಿಮಾನ’ ಚಿತ್ರಕ್ಕೆ 35 ವರ್ಷ; ಭಾವನಾತ್ಮಕ ಪತ್ರ ಬರೆದ ಕಮಲ್ ಹಾಸನ್

ತಮಿಳುನಾಡಿನ ಜನರು ಮತದಾನದ ಬಗ್ಗೆ ತುಂಬಾ ಸ್ಪಷ್ಟವಾಗಿದ್ದಾರೆ. ಸಿನಿಮಾ ಹಿನ್ನೆಲೆಯು ನಿಮಗೆ ಜನಪ್ರಿಯ ವ್ಯಕ್ತಿಯಾಗಿ ಸ್ವಲ್ಪಮಟ್ಟಿನ ಪ್ರಚಾರವನ್ನು ಮಾತ್ರ ನೀಡುತ್ತದೆ. ರಾಜಕೀಯ ಪಕ್ಷ ಕಟ್ಟಿಕೊಂಡು ಚುನಾವಣೆ ಗೆಲ್ಲುತ್ತೇನೆ ಎಂದು ಸುಮ್ಮನೆ ಹೇಳಿಬಿಟ್ಟರೆ ಆಗುವುದಿಲ್ಲ. ಅಭಿಮಾನಿಗಳು ನಟನಿಗೆ ಮತ ಹಾಕಬಹುದು ಆದರೆ ತಮಿಳುನಾಡಿನ ನಿಜವಾದ ಮತದಾರರು ಹಾಕುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನೀವು ನಟರಾಗಿ ನಿಮ್ಮನ್ನು ಸಾಬೀತುಪಡಿಸಿರಬಹುದು, ಆದರೆ ನೀವು ಜನರೊಂದಿಗೆ ಇದ್ದೀರಿ ಮತ್ತು ಅವರಿಗಾಗಿ ಕೆಲಸ ಮಾಡುತ್ತೀರಿ ಎಂದು ಸಾಬೀತುಪಡಿಸಬೇಕು. ಸಂಸತ್ತಿಗೆ ಎಂಟು ತಿಂಗಳ ಮೊದಲು ಕೇವಲ ಘೋಷಣೆ ಮಾಡುವುದರಿಂದ ಗೆದ್ದುಬಿಡುವುದಿಲ್ಲ.

ಕಮಲ್ ಹಾಸನ್ ರಾಜಕೀಯದಲ್ಲೂ ಗೆಲ್ಲುವುದನ್ನು ನೋಡಲು ನಾನು ಬಯಸುತ್ತೇನೆ. ಅವರು ಸರಿಯಾದ ಹಾದಿಯಲ್ಲಿದ್ದಾರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ವೇಗವನ್ನು ತಗ್ಗಿಸಿಕೊಳ್ಳಬಾರದು. ಅವರು ಬುದ್ಧಿವಂತ ವ್ಯಕ್ತಿ ಮತ್ತು ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳುತ್ತಾರೆ. ಅವರು ತುಂಬಾ ವಿನಯವಂತರು ಮತ್ತು ಜನರ ಮನಸ್ಸನ್ನು ತಿಳಿದಿದ್ದಾರೆ. ರಾಜಕೀಯ ಅವರ ಆಯ್ಕೆ, ಅವರದ್ದೇ ಪಕ್ಷ. ಅವರು ತಮ್ಮದೇ ಆದ ರೀತಿಯಲ್ಲಿ ನಾಯಕರಾಗಿದ್ದಾರೆ.

ನೀವು ಎಲ್ಲವನ್ನೂ ಕಳೆದುಕೊಂಡು ನಂತರ ಎಲ್ಲವನ್ನೂ ಮರಳಿ ಪಡೆಯುವ ಸಂದರ್ಭಗಳು ಜೀವನದಲ್ಲಿ ಬರಬಹುದು. ಸೋಲು-ಗೆಲುವು ಕಮಲ್ ಹಾಸನ್ ಅವರಂತಹ ವ್ಯಕ್ತಿಯನ್ನು ನಿರಾಶೆಗೊಳಿಸುವುದಿಲ್ಲ. ಅವರು ವೈಯಕ್ತಿಕವಾಗಿ, ರಾಜಕೀಯವಾಗಿ ಮತ್ತು ವಾಣಿಜ್ಯಿಕವಾಗಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಅವರು ಏನು ಮಾಡುತ್ತಿದ್ದಾನೆಂದು ಅವರಿಗೆ ಚೆನ್ನಾಗಿ ತಿಳಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ