AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಬಳಿಕ ಮತ್ತೆ ನಿರ್ದೇಶಕಿ ಜೊತೆ ಕೆಲಸ ಮಾಡಲಿರುವ ಕಿಯಾರಾ

Kiara Advani and Saif Ali Khan: ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಯಶ್ ಹಾಗೂ ಕಿಯಾರಾ ಅವರ ಜೋಡಿದ ಬಗ್ಗೆ ಸಖತ್ ಚರ್ಚೆ ನಡೆದಿದೆ. ಸಿನಿಮಾನಲ್ಲಿ ಕಿಯಾರಾ ಬಲು ಹಾಟ್ ಆಗಿ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಸಾಕಷ್ಟು ಅನವಶ್ಯಕ ಟೀಕೆ, ನಿಂದನೆಗೂ ಸಹ ಅವರು ಗುರಿಯಾಗಿದ್ದಾರೆ. ಆದರೆ ಸಿನಿಮಾದ ಬಗ್ಗೆ ತಮ್ಮ ನಿರ್ದೇಶಕಿ ಗೀತೂ ಮೋಹನ್​​ದಾಸ್ ಬಗ್ಗೆ ಬಹಳ ಗೌರವ, ನಂಬಿಕೆಗಳು ಇರುವುದಾಗಿ ಹೆಳಿದ್ದರು. ಇದೀಗ ಕಿಯಾರಾ ಅವರು, ‘ಟಾಕ್ಸಿಕ್’ ಬಳಿಕ ಮತ್ತೊಮ್ಮೆ ಮಹಿಳೆ ನಿರ್ದೇಶಿಸಲಿರುವ ಸಿನಿಮಾನಲ್ಲಿ ನಟಿಸಲಿದ್ದಾರೆ.

‘ಟಾಕ್ಸಿಕ್’ ಬಳಿಕ ಮತ್ತೆ ನಿರ್ದೇಶಕಿ ಜೊತೆ ಕೆಲಸ ಮಾಡಲಿರುವ ಕಿಯಾರಾ
Kiara Advani
ಮಂಜುನಾಥ ಸಿ.
|

Updated on: Aug 21, 2026 | 4:30 PM

Share

ಮುಖ್ಯಾಂಶಗಳು

  • ‘ಟಾಕ್ಸಿಕ್’ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.
  • ಟಾಕ್ಸಿಕ್ ಅನ್ನು ಗೀತೂ ಮೋಹನ್ ದಾಸ್ ನಿರ್ದೇಶನ ಮಾಡಿದ್ದರು.
  • ಈಗ ಮತ್ತೊಬ್ಬ ಮಹಿಳೆ ನಿರ್ದೇಶಿಸಲಿರುವ ಸಿನಿಮಾನಲ್ಲಿ ಕಿಯಾರಾ ನಟಿಸಲಿದ್ದಾರೆ.

ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಯಶ್ ಹಾಗೂ ಕಿಯಾರಾ ಅವರ ಜೋಡಿದ ಬಗ್ಗೆ ಸಖತ್ ಚರ್ಚೆ ನಡೆದಿದೆ. ಸಿನಿಮಾನಲ್ಲಿ ಕಿಯಾರಾ ಬಲು ಹಾಟ್ ಆಗಿ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಸಾಕಷ್ಟು ಅನವಶ್ಯಕ ಟೀಕೆ, ನಿಂದನೆಗೂ ಸಹ ಅವರು ಗುರಿಯಾಗಿದ್ದಾರೆ. ಆದರೆ ಸಿನಿಮಾದ ಬಗ್ಗೆ ತಮ್ಮ ನಿರ್ದೇಶಕಿ ಗೀತೂ ಮೋಹನ್​​ದಾಸ್ ಬಗ್ಗೆ ಬಹಳ ಗೌರವ, ನಂಬಿಕೆಗಳು ಇರುವುದಾಗಿ ಹೆಳಿದ್ದರು. ಇದೀಗ ಕಿಯಾರಾ ಅವರು, ‘ಟಾಕ್ಸಿಕ್’ ಬಳಿಕ ಮತ್ತೊಮ್ಮೆ ಮಹಿಳೆ ನಿರ್ದೇಶಿಸಲಿರುವ ಸಿನಿಮಾನಲ್ಲಿ ನಟಿಸಲಿದ್ದಾರೆ.

ಕಿಯಾರಾ ಅಡ್ವಾಣಿ ಅವರು ನಿರ್ದೇಶಕಿ ಕನ್ನಿಕಾ ಡಿಲ್ಲೋನ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಕನ್ನಿಕಾ ಡಿಲ್ಲೋನ್, ಬಾಲಿವುಡ್​​ನಲ್ಲಿ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕತೆ, ಚಿತ್ರಕತೆ, ಸಹಾಯಕ ನಿರ್ದೇಶನಗಳನ್ನು ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅವರು ಸ್ವತಂತ್ರ್ಯ ನಿರ್ದೇಶಕಿ ಆಗಿದ್ದಾರೆ. ತಮ್ಮ ಮೊಟ್ಟ ಮೊದಲ ನಿರ್ದೇಶನದ ಸಿನಿಮಾನಲ್ಲಿ ಕಿಯಾರಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ ಕನ್ನಿಕಾ ಡಿಲ್ಲೋನ್.

‘ಟಾಕ್ಸಿಕ್’ ಸಿನಿಮಾದ ಬಳಿಕ ಇನ್ಯಾವ ಸಿನಿಮಾವನ್ನೂ ಸಹ ಕಿಯಾರಾ ಅಡ್ವಾಣಿ ಒಪ್ಪಿಕೊಂಡಿರಲಿಲ್ಲ. ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದ ವೇಳೆಯಲ್ಲೇ ತಾಯಿಯೂ ಆದರು ಕಿಯಾರಾ. ಹಾಗಾಗಿ ‘ಟಾಕ್ಸಿಕ್’ ಬಳಿಕ ಯಾವ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ. ಇದೀಗ ಸುಮಾರು ಎರಡು-ಮೂರು ವರ್ಷಗಳ ಬಳಿಕ ಕಿಯಾರಾ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ‘ಟಾಕ್ಸಿಕ್’ ಸಿನಿಮಾದ ಅನುಭವದಿಂದಲೋ ಏನೋ ಅವರು ಮತ್ತೊಮ್ಮೆ ಮಹಿಳಾ ನಿರ್ದೇಶಕಿಯ ಸಿನಿಮಾಕ್ಕೆ ಎಸ್ ಹೇಳಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಪ್ರಿ-ರಿಲೀಸ್ ಇವೆಂಟ್ಸ್ ಧಮಾಕಾ; ದೇಶದ ವಿವಿಧ ಕಡೆ ಯಶ್ ಟೂರ್

ಕಿಯಾರಾ ನಟಿಸಲಿರುವ ಹೊಸ ಸಿನಿಮಾನಲ್ಲಿ ಸೈಫ್ ಅಲಿ ಖಾನ್ ನಾಯಕ. ಇದೊಂದು ಹಾರರ್ ಮಾದರಿಯ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾದ ಕತೆಯಲ್ಲಿ ಸೂಪರ್ ನ್ಯಾಚುರಲ್ ಅಂಶಗಳು ಇರಲಿವೆಯಂತೆ. ಈ ಸಿನಿಮಾವನ್ನು ಎಕ್ಸೆಲ್ ಎಂಟರ್ಟೈನ್​​ಮೆಂಟ್ ಸಂಸ್ಥೆಯು ನಿರ್ಮಾಣ ಮಾಡಲಿದೆ. ಫರ್ಹಾನ್ ಅಖ್ತರ್ ಒಡೆತನದ ಈ ನಿರ್ಮಾಣ ಸಂಸ್ಥೆ, ‘ಡಾನ್ 3’ ಸಿನಿಮಾದ ವಿವಾದದ ಕಾರಣಕ್ಕೆ ಸುದ್ದಿಯಾಗಿತ್ತು. ಇದೀಗ ಇದೇ ನಿರ್ಮಾಣ ಸಂಸ್ಥೆ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್