ಬಿಗ್ ಬಾಸ್ ಧಮಾಕಾ; ಒಂದೇ ವೇದಿಕೆಯಲ್ಲಿ ನಾಲ್ಕು ಭಾರತೀಯ ಚಿತ್ರರಂಗದ ದಿಗ್ಗಜರು

ದಕ್ಷಿಣ ಭಾರತದ ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡದ ಸುದೀಪ್, ಮಲಯಾಳಂನ ಮೋಹನ್‌ಲಾಲ್, ತೆಲುಗಿನ ನಾಗಾರ್ಜುನ ಹಾಗೂ ತಮಿಳಿನ ವಿಜಯ್ ಸೇತುಪತಿ ಒಂದೇ ವೇದಿಕೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಜಿಯೋ ಹಾಟ್‌ಸ್ಟಾರ್‌ನ ಈ ಮಹಾ ಬಿಗ್ ಬಾಸ್ ಸಮ್ಮಿಲನವು ಸೆಪ್ಟೆಂಬರ್ 6 ರಿಂದ ಪ್ರಸಾರವಾಗಲಿದ್ದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಬಿಗ್ ಬಾಸ್ ಧಮಾಕಾ; ಒಂದೇ ವೇದಿಕೆಯಲ್ಲಿ ನಾಲ್ಕು ಭಾರತೀಯ ಚಿತ್ರರಂಗದ ದಿಗ್ಗಜರು
ಬಿಗ್ ಬಾಸ್

Updated on: Aug 31, 2026 | 12:59 PM

ಮುಖ್ಯಾಂಶಗಳು

  • ಒಂದೇ ಪ್ರೋಮೋದಲ್ಲಿ ದಕ್ಷಿಣ ಭಾರತದ ನಾಲ್ಕು ಸೂಪರ್‌ಸ್ಟಾರ್‌ಗಳು
  • ಸೆಪ್ಟೆಂಬರ್ 6 ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಹಬ್ಬ ಆರಂಭ
  • ಸುದೀಪ್-ಮೋಹನ್‌ಲಾಲ್-ನಾಗಾರ್ಜುನ-ವಿಜಯ್ ಸೇತುಪತಿ ಕಾಂಬಿನೇಷನ್ ಧಮಾಕಾ

ದಕ್ಷಿಣ ಭಾರತದ ಕಿರುತೆರೆ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಹಾ ಸಂಗಮವೊಂದು ಈಗ ಸಜ್ಜಾಗಿದೆ. ಕನ್ನಡದ ‘ಕಿಚ್ಚ’ ಸುದೀಪ್, ಮಲಯಾಳಂನ ಸೂಪರ್‌ಸ್ಟಾರ್ ಮೋಹನ್‌ಲಾಲ್, ತೆಲುಗಿನ ಅಕ್ಕಿನೇನಿ ನಾಗಾರ್ಜುನ ಹಾಗೂ ತಮಿಳಿನ ನಟ ವಿಜಯ್ ಸೇತುಪತಿ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಈ ನಾಲ್ವರು ಮಹಾನಟರು ಒಂದೇ ಪ್ರೋಮೋದಲ್ಲಿ ಪ್ರತ್ಯಕ್ಷರಾಗುವ ಮೂಲಕ ದೇಶಾದ್ಯಂತ ಇರುವ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿರುವ ಈ ವಿಶೇಷ ಪ್ರೋಮೋದಲ್ಲಿ, ನಾಲ್ಕೂ ಭಾಷೆಗಳ ನಿರೂಪಕರು ಒಂದೊಂದು ರೂಂನಲ್ಲಿ ಕುಳಿತಿರುತ್ತಾರೆ. ಬೆಳಗಿನ ಉಪಹಾರಕ್ಕೆ ಅವರು ಆರ್ಡರ್ ಮಾಡಿದ ತಿಂಡಿ ಬರೋದೆ ಇಲ್ಲ. ಎಲ್ಲವೂ ಅದಲುಬದಲಾಗುತ್ತದೆ. ತಮ್ಮದೇ ಪ್ರಾದೇಶಿಕ ಖಾದ್ಯದ ಬದಲು ಬೇರೆ ಭಾಷೆಯ ತಿಂಡಿ ಸಿಕ್ಕರೂ, ಅದನ್ನು ಸವಿದು ‘ಇದು ಅತ್ಯದ್ಭುತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ದಕ್ಷಿಣದ ನಾಲ್ಕು ಪ್ರಮುಖ ಭಾಷೆಗಳು, ನಾಲ್ಕು ದೊಡ್ಡ ಬಿಗ್ ಬಾಸ್ ಮನೆಗಳು ಹಾಗೂ ನಾಲ್ವರು ದಕ್ಷಿಣ ಭಾರತದ ನೆಚ್ಚಿನ ನಟರು ಒಂದೇ ಬಾರಿಗೆ ಬಿಗ್ ಬಾಸ್ ನಡೆಸಿಕೊಡುತ್ತಿರುವುದು ಈ ಬಾರಿಯ ವಿಶೇಷ. ಈ ಬೃಹತ್ ದಕ್ಷಿಣ ಭಾರತದ ಬಿಗ್ ಬಾಸ್ ಹಬ್ಬವು ಜಿಯೋ ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸೆಪ್ಟೆಂಬರ್ 6ರಿಂದ ಪ್ರಸಾರವಾಗಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಹೊರಹೋದ ಕುಮಾರಿಗೆ 5 ಲಕ್ಷ ರೂ. ಸಹಾಯಧನ, ದುಬೈನಲ್ಲಿ ಜಾಬ್ ಆಫರ್

ಈ ವಿಶೇಷ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆಯೇ ಪ್ರೇಕ್ಷಕರಲ್ಲಿ ಹಾಗೂ ಆಯಾ ನಟರ ಅಭಿಮಾನಿ ಬಳಗದಲ್ಲಿ ಕಾತರ ಮತ್ತು ಕುತೂಹಲ ದುಪ್ಪಟ್ಟಾಗಿದೆ. ನಾಲ್ಕೂ ಭಾಷೆಗಳ ಬಿಗ್ ಬಾಸ್ ಮನೆಗಳಲ್ಲಿ ಈ ಬಾರಿ ಯಾವ ರೀತಿಯ ಸ್ಪರ್ಧಿಗಳು ಬರಲಿದ್ದಾರೆ ಮತ್ತು ಎಂಥಹ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಸೆಪ್ಟೆಂಬರ್ 6ರಿಂದ ಐದು ಭಾಷೆಗಳಲ್ಲಿ ಬಿಗ್ ಬಾಸ್ ಶುರುವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us