ಕನ್ನಡ ಬಿಗ್ ಬಾಸ್ನ 7 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕಿಚ್ಚ ಸುದೀಪ್ 8ನೇ ಸೀಸನ್ಗೆ ಕಾಲಿಟ್ಟಿದ್ದಾರೆ. ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಕೂಡ. ಒಂದೇ ಒಂದು ವಾರ ಕೂಡ ಅವರು ಬಿಗ್ ಬಾಸ್ ತಪ್ಪಿಸಿಲ್ಲ. ಆದರೆ, ಇದೇ ಮೊದಲ ಬಾರಿಗೆ ಅವರು ಬಿಗ್ ಬಾಸ್ನಿಂದ ದೂರ ಉಳಿಯುತ್ತಿದ್ದಾರೆ. ಈ ಬಗ್ಗೆ ಸುದೀಪ್ ಅಧಿಕೃತ ಘೋಷಣೆ ಮಾಡಿದ್ದಾರೆ.
ಸಿನಿಮಾ ಕೆಲಸಗಳಿಗೆ ಸುದೀಪ್ ಬೇರೆ ಬೇರೆ ಕಡೆಗಳಿಗೆ ತೆರಳುತ್ತಾರೆ. ಆದಾಗ್ಯೂ ಅವರು ವೀಕೆಂಡ್ನಲ್ಲಿ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ಇದು 8 ವರ್ಷಗಳಿಂದಲೂ ನಡೆದುಕೊಂಡೇ ಬಂದಿದೆ. ಆದರೆ, ಈ ಬಾರಿ ಅನಾರೋಗ್ಯದ ಕಾರಣದಿಂದ ಅವರು ನಿರೂಪಣೆ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಈ ವಿಚಾರವನ್ನು ಸುದೀಪ್ ಅಧಿಕೃತಗೊಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ನನಗೆ ಅನಾರೋಗ್ಯ ಕಾಡುತ್ತಿದೆ. ಈ ವಾರಾಂತ್ಯಕ್ಕೆ ನಾನು ಗುಣಮುಖನಾಗುವ ನಿರೀಕ್ಷೆ ಇದೆ. ಆದರೆ, ವೈದ್ಯರ ಸೂಚನೆಯಂತೆ ನಾನು ಕೆಲ ದಿನ ರೆಸ್ಟ್ ಮಾಡುತ್ತಿದ್ದೇನೆ. ಹೀಗಾಗಿ, ಈ ವಾರದ ಬಿಗ್ ಬಾಸ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ವಾರದ ಎಲಿಮಿನೇಷನ್ಗೆ ಯಾವ ಪ್ಲ್ಯಾನ್ ಮೂಲಕ ತಂಡ ಬರುತ್ತದೆ ಎನ್ನುವ ಕುತೂಹಲ ನನ್ನದು ಎಂದಿದ್ದಾರೆ ಸುದೀಪ್.
Been unwell n was hoping to recover bfr the weekend. But on my docs advice I need to gv myself a bit more rest n hence Will be missing this weekends episode of BB.
Curious to know the innovative plan which the creative team’ll come out with, for this week’s elimination. ???— Kichcha Sudeepa (@KicchaSudeep) April 16, 2021
ಈ ವಾರ ಶೋ ಯಾರು ನಡೆಸಿಕೊಡುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಏಳನೇ ವಾರದ ವೀಕೆಂಡ್ ಎಪಿಸೋಡ್ಗಳನ್ನು ಸಮರ್ಥವಾಗಿ ನಡೆಸಿಕೊಡಬಲ್ಲ ನಿರೂಪಕರಿಗಾಗಿ ವಾಹಿನಿ ಹುಡುಕಾಟ ನಡೆಸುತ್ತಿದೆ ಎನ್ನಲಾಗಿದೆ.
ಬೇರೆ ಭಾಷೆಯ ಬಿಗ್ ಬಾಸ್ ಕಾರ್ಯಕ್ರಮಗಳಲ್ಲಿ ಇಂಥ ಪರಿಸ್ಥಿತಿ ಈ ಹಿಂದೆ ಎದುರಾಗಿತ್ತು. ಅಕ್ಕಿನೇನಿ ನಾಗಾರ್ಜುನ ಅವರ ಅನುಪಸ್ಥಿತಿಯಲ್ಲಿ ಅವರ ಸೊಸೆ ಸಮಂತಾ ಅವರು ತೆಲುಗು ಬಿಗ್ ಬಾಸ್ ನಿರೂಪಣೆ ಮಾಡಿದ್ದರು. ಹಿರಿಯ ನಟಿ ರಮ್ಯಾ ಕೃಷ್ಣ ಅವರ ಹೆಗಲಿಗೂ ಒಮ್ಮೆ ಈ ಜವಾಬ್ದಾರಿ ಹೋಗಿತ್ತು. ಹಿಂದಿಯಲ್ಲಿ ಸಲ್ಮಾನ್ ಖಾನ್ ಬದಲಿಗೆ ಬಿಗ್ ಬಾಸ್ 13ನೇ ಸೀಸನ್ ವಿನ್ನರ್ ಸಿದ್ದಾರ್ಥ್ ಶುಕ್ಲಾ ನಡೆಸಿಕೊಟ್ಟಿದ್ದರು. ಕನ್ನಡದಲ್ಲಿ ಯಾರಿಗೆ ಈ ಚಾನ್ಸ್ ಸಿಗಲಿದೆ ಎಂಬ ಕೌತುಕ ಮನೆ ಮಾಡಿದೆ.
ಇದನ್ನೂ ಓದಿ: Kichcha Sudeep: ಇದೇ ಮೊದಲ ಬಾರಿಗೆ ಬಿಗ್ ಬಾಸ್ ನಿರೂಪಣೆ ತಪ್ಪಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ್?