ಕ್ಯಾರವಾನ್​ನಲ್ಲಿ ಸುದೀಪ್​-ಪ್ರಥಮ್ ನಡುವೆ ನಡೆದಿದ್ದೇನು?

| Updated By: ಮದನ್​ ಕುಮಾರ್​

Updated on: Apr 05, 2021 | 4:03 PM

ಏ.10ರಿಂದ ಕುಕ್ಕೂ ವಿತ್​ ಕಿರಿಕ್ಕು ಕಾರ್ಯಕ್ರಮ ಸ್ಟಾರ್​ ಸುವರ್ಣದಲ್ಲಿ ಆರಂಭಗೊಳ್ಳುತ್ತಿದ್ದು, ರಾತ್ರಿ 8:30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಕ್ಯಾರವಾನ್​ನಲ್ಲಿ ಸುದೀಪ್​-ಪ್ರಥಮ್ ನಡುವೆ ನಡೆದಿದ್ದೇನು?
ಪ್ರಥಮ್​ ಜತೆ ಸುದೀಪ್​
Follow us on

ನಟ ಪ್ರಥಮ್​ ಕನ್ನಡ ಬಿಗ್​ ಬಾಸ್​ ಸೀಸನ್​ 4ರ ವಿನ್ನರ್​ ಆಗಿದ್ದರು. ಅವರು ಮನೆಗೆ ಕಾಲಿಟ್ಟು ಸಖತ್​ ಎಂಟರ್​ಟೇನ್​ಮೆಂಟ್​ ನೀಡಿದ್ದರು. ಅಷ್ಟೇ ಅಲ್ಲ ಬಿಗ್​ ಬಾಸ್​ ನಿರೂಪಕ ಕಿಚ್ಚ ಸುದೀಪ್​​ ಅವರನ್ನು ತುಂಬಾನೇ ಗೋಳು ಹೊಯ್ದುಕೊಂಡಿದ್ದರು. ಈಗ  ಕಿಚ್ಚ ಸುದೀಪ್​ ಕುಕ್ಕು ವಿತ್​ ಕಿರಿಕ್ಕು ರಿಯಾಲಿಟಿ ಶೋಗೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇದಕ್ಕೂ ಮೊದಲು ಸುದೀಪ್​ ಹಾಗೂ ಪ್ರಥಮ್​ ನಡುವೆ ರಹಸ್ಯ ಮಾತುಕತೆ ಒಂದು ನಡೆದಿದೆಯಂತೆ!

ಈ ಸಿಕ್ರೆಟ್​ ಮಾತುಕತೆ ಬಗ್ಗೆ ಪ್ರಥಮ್​ ಮಾಹಿತಿ ಹಂಚಿಕೊಂಡಿದ್ದಾರೆ. ಕುಕ್ಕು ವಿತ್​ ಕಿರಿಕ್ಕು ಕಾರ್ಯಕ್ರಮಕ್ಕೂ ಮೊದಲು ನಾನು ಸುದೀಪ್​ ಇದ್ದ ಕ್ಯಾರವಾನ್​ಗೆ ತೆರಳಿದ್ದೆ. ಈ ವೇಳೆ ಅವರು, ವೇದಿಕೆ ಮೇಲೆ ಸಿಗಬಹುದಿತ್ತಲ್ಲ ಎಂದಿದ್ದರು. ಶೋನಲ್ಲಿ ಸ್ಟಾರ್​ಗಳು ಸಿಗ್ತಾರೆ. ಆ್ಯಂಕರ್​ ಸುದೀಪ್​ ಅವರನ್ನು 114 ದಿನ ನಾನು ಬಿಗ್​ ಬಾಸ್​ ವೇದಿಕೆ ಮೇಲೆ ನೋಡಿದ್ದೇನೆ. ಕ್ಯಾರವಾನ್​ನಲ್ಲಿ ಸಿಗೋದು ಸೃಜನಶೀಲ ಸುದೀಪ್​ ಎಂದು ಉತ್ತರಿಸಿದೆ. ಅಷ್ಟೇ ಅಲ್ಲ, ನನ್ನ ನಿರ್ದೇಶನದ ನಟ ಭಯಂಕರ ಸಿನಿಮಾದ ಟ್ರೇಲರ್​ ತೋರಿಸಿದೆ. ಟ್ರೇಲರ್​ ನೋಡಿ ಸುದೀಪ್​ ತುಂಬಾನೇ ಖುಷಿ ಪಟ್ಟರು ಎಂದಿದ್ದಾರೆ ಪ್ರಥಮ್​. 

ಇದೇ ಹತ್ತರಿಂದ ಕುಕ್ಕೂ ವಿತ್​ ಕಿರಿಕ್ಕು ಕಾರ್ಯಕ್ರಮ ಸ್ಟಾರ್​ ಸುವರ್ಣದಲ್ಲಿ ಆರಂಭಗೊಳ್ಳುತ್ತಿದ್ದು, ರಾತ್ರಿ 8:30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಸೆಲೆಬ್ರಿಟಿಗಳು ನಡೆಸಿಕೊಡುವುದು ಮಾತ್ರವಲ್ಲ, ಸಾಕಷ್ಟು ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಿದ್ದಾರೆ.

ಈ ಕಾರ್ಯಕ್ರಮದ ಗ್ರ್ಯಾಂಡ್​ ಓಪನಿಂಗ್​ಗೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ.​ ಈ ವೇಳೆ ಅವರು ಬಿಗ್​ ಬಾಸ್​ ನಾಲ್ಕನೇ ಸೀಸನ್​ ಅನುಭವ ಹಂಚಿಕೊಂಡಿದ್ದಾರೆ. ಪ್ರಥಮ್​ ಒಂದು ಸೀಸನ್​ ನಮ್ಮ ಜತೆಗೆ ಇದ್ರು. ಅವರಿಂದ ತಪ್ಪಿಸಿಕೊಂಡು ಬರೋವರೆಗೆ ಸಾಕು ಸಾಕಾಯಿತು. ಇನ್ನೇನು ಶೋ ಮುಗಿಯುತ್ತದೆ ಎನ್ನುವಾಗ ಅವರು ಕೈ ಎತ್ತುತ್ತಿದ್ದರು. ಆಗ ಮಾತನಾಡೋಕೆ ಆರಂಭಿಸಿದರೆ ನಿಲ್ಲಿಸ್ತಾನೇ ಇರಲಿಲ್ಲ ಎಂದು ಪ್ರಥಮ್​ ಗುಣಗಾನ ಮಾಡಿದ್ದಾರೆ.

‘ಕುಕ್ಕು ವಿಥ್​ ಕಿರಿಕ್ಕು’ ಅಡುಗೆ ಕಾರ್ಯಕ್ರಮ. ಈ ಕಾರ್ಯಕ್ರಮದ ಶೈಲಿ ಸಂಪೂರ್ಣ ಭಿನ್ನವಾಗಿರಲಿದೆ. ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಕೂಡ ಭಾಗವಹಿಸಲಿದ್ದಾರೆ. ಬಗೆಬಗೆಯ ಅಡುಗೆ ಮಾಡುವುದರ ಜೊತೆಗೆ ಸಿಕ್ಕಾಪಟ್ಟೆ ಕಾಮಿಡಿ ಕೂಡ ಈ ಕಾರ್ಯಕ್ರಮದಲ್ಲಿ ಇರಲಿದೆ ಎಂಬುದು ವಿಶೇಷ.

ಈ ಕಾರ್ಯಕ್ರಮದಲ್ಲಿ ಸುದೀಪ್​ ಮಾತ್ರವಲ್ಲದೆ, ಅಕುಲ್​ ಬಾಲಾಜಿ, ಬೊಂಬಾಟ್​ ಬೋಜನ ಕಾರ್ಯಕ್ರಮದ ಮೂಲಕ ಅನೇಕ ಅಡುಗೆಗಳನ್ನು ವೀಕ್ಷಕರಿಗೆ ಪರಿಚಯಿಸಿರುವ ಸಿಹಿ ಕಹಿ ಚಂದ್ರು ಕೂಡ ಇರಲಿದ್ದಾರೆ.

ಒಂದೇ ಶೋನಲ್ಲಿ ಪ್ರಥಮ್​, ಸಿಹಿಕಹಿ ಚಂದ್ರು, ಅಕುಲ್​ ಬಾಲಾಜಿ! ಕಿರುತೆರೆ ಪ್ರೇಕ್ಷಕರಿಗೆ ಮಸ್ತ್​​ ಮನರಂಜನೆ