ಕಾಲಿವುಡ್ನ ಜನಪ್ರಿಯ ಹಾಸ್ಯ ನಟ ಯೋಗಿ ಬಾಬು (Yogi Babu) ಅವರು ಈಗಾಗಲೇ ಮುಖ್ಯ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಮತ್ತೆ ಹೀರೋ ಆಗಿ ಅವರು ಎಂಟ್ರಿ ನೀಡುತ್ತಿದ್ದಾರೆ. ಕಾಮಿಡಿ ಕಲಾವಿದನಾಗಿ ಮಿಂಚುತ್ತಿದ್ದ ಯೋಗಿ ಬಾಬು ಎಲ್ಲ ರೀತಿಯ ಪಾತ್ರಕ್ಕೂ ನ್ಯಾಯ ಒದಗಿಸುತ್ತಾರೆ. ಅವರು ನಟಿಸಿರುವ ‘ಬೋಟ್’ (Boat) ಸಿನಿಮಾದ ಟೀಸರ್ ಈಗ ಬಿಡುಗಡೆ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ತಂಡಕ್ಕೆ ಕಿಚ್ಚ ಸುದೀಪ್ (Kichcha Sudeep) ಅವರು ಸಾಥ್ ನೀಡಿದ್ದಾರೆ.
ಯೋಗಿ ಬಾಬು ನಟನೆಯ ‘ಬೋಟ್’ ಸಿನಿಮಾ ಕನ್ನಡದ ಜೊತೆ ದಕ್ಷಿಣ ಭಾರತದ ಎಲ್ಲ ಭಾಷೆಯಲ್ಲೂ ಬಿಡುಗಡೆ ಆಗಲಿದೆ. ಈ ಮೂಲಕ ಯೋಗಿ ಬಾಬು ಅವರು ಸ್ಯಾಂಡಲ್ವುಡ್ಗೆ ಕಾಲಿಟ್ಟಂತಾಗುತ್ತಿದೆ. ಅವರಿಗೆ ಕಿಚ್ಚ ಸುದೀಪ್ ಅವರು ಸ್ವಾಗತ ಕೋರಿದ್ದಾರೆ. ‘ಬೋಟ್’ ಸಿನಿಮಾದ ಟೀಸರ್ ಹಂಚಿಕೊಂಡಿರುವ ಸುದೀಪ್ ಅವರು ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿಂಬು ದೇವನ್ ಅವರ ನಿರ್ದೇಶನದಲ್ಲಿ ‘ಬೋಟ್’ ಸಿನಿಮಾ ಮೂಡಿಬಂದಿದೆ. ದೇವನ್ ದಳಪತಿ ವಿಜಯ್ ಅಭಿನಯದ ‘ಪುಲಿ’ ಹಾಗೂ ಇತರೆ ಸಿನಿಮಾಗಳನ್ನು ನೀಡಿದ ಖ್ಯಾತಿ ಚಿಂಬು ಅವರಿಗೆ ಇದೆ. ಈಗ ಅವರು ಯೋಗಿ ಬಾಬು ಜೊತೆ ಸಿನಿಮಾ ಮಾಡಿದ್ದಾರೆ. ಅಚ್ಚರಿ ಏನೆಂದರೆ, ಈ ಸಿನಿಮಾ ಸಂಪೂರ್ಣವಾಗಿ ಸಮುದ್ರದಲ್ಲಿಯೇ ಚಿತ್ರೀಕರಣಗೊಂಡಿದೆ.
Congrats to the Boat team! #BOATTeaser is nice, featuring a unique plot that caught my attention. I’m happy to be a part of this release👍💐https://t.co/HjNUQztTgE#ThoughoutInMidSea @chimbu_deven @iYogibabu @Gourayy @GhibranVaibodha @maaliandmaanvi @Madumkeshprem pic.twitter.com/6itneoKDGL
— Kichcha Sudeepa (@KicchaSudeep) December 16, 2023
‘ಬೋಟ್’ ಸಿನಿಮಾದಲ್ಲಿ ಯೋಗಿ ಬಾಬು, ಗೌರಿ ಜಿ. ಕಿಶನ್ ಮುಂತಾದವರು ನಟಿಸಿದ್ದಾರೆ. ಗಿಬ್ರಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಾದೇಶ್ ಮಾಣಿಕ್ಕಂ ಛಾಯಾಗ್ರಹಣ ಮಾಡಿದ್ದಾರೆ. ದಿನೇಶ್ ಅವರ ಸಂಕಲನ ಹಾಗೂ ಟಿ ಸಂತಾನಂ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ. ಈ ಸಿನಿಮಾವನ್ನು ‘ಮಾಲಿ ಮತ್ತು ಮಾನ್ವಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ಪ್ರಭಾ ಪ್ರೇಮಕುಮಾರ್ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಫೆಬ್ರವರಿಯಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಅಬ್ಬಬ್ಬಾ.. ಖ್ಯಾತ ಕಾಮಿಡಿಯನ್ ಯೋಗಿ ಬಾಬು ದಿನ ಒಂದಕ್ಕೆ ಪಡೆಯುವ ಸಂಭಾವನೆ ಇಷ್ಟೊಂದಾ?
ಚೆನ್ನೈ ಮೇಲೆ ಜಪಾನ್ನವರು ಬಾಂಬ್ ದಾಳಿ ಮಾಡಿದಾಗ ಹತ್ತು ಜನರು ಚಿಕ್ಕ ಬೋಟ್ ಏರಿ ಪರಾರಿ ಆಗುತ್ತಾರೆ. ಆ ಬೋಟ್ನಲ್ಲಿ ಒಂದು ರಂಧ್ರ ಆಗುತ್ತದೆ. ಆ ಬಳಿಕ ಹತ್ತು ಜನರು ಏನೆಲ್ಲ ಸಮಸ್ಯೆ ಎದುರಿಸುತ್ತಾರೆ? ಸಮುದ್ರದಿಂದ ಹೇಗೆ ದಡ ಸೇರುತ್ತಾರೆ ಎಂಬುದೇ ಈ ಸಿನಿಮಾ ತಿರುಳು. ‘ಬೋಟ್’ ಟೀಸರ್ಗೆ ಖ್ಯಾತ ನಿರ್ದೇಶಕ ಗೌತಮ್ ಮೆನನ್ ಅವರು ನಿರೂಪಣೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:06 am, Sun, 17 December 23