ಅಬ್ಬಬ್ಬಾ.. ಖ್ಯಾತ ಕಾಮಿಡಿಯನ್ ಯೋಗಿ ಬಾಬು ದಿನ ಒಂದಕ್ಕೆ ಪಡೆಯುವ ಸಂಭಾವನೆ ಇಷ್ಟೊಂದಾ?

Yogi Babu: 2009ರಲ್ಲಿ ಯೋಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಯೋಗಿ ಅವರ ಸಂಭಾವನೆ ಯಾವುದೇ ಸ್ಟಾರ್ ಹೀರೋಗೂ ಕಡಿಮೆ ಇಲ್ಲ ಅನ್ನೋದು ವಿಶೇಷ.  

ಅಬ್ಬಬ್ಬಾ.. ಖ್ಯಾತ ಕಾಮಿಡಿಯನ್ ಯೋಗಿ ಬಾಬು ದಿನ ಒಂದಕ್ಕೆ ಪಡೆಯುವ ಸಂಭಾವನೆ ಇಷ್ಟೊಂದಾ?
ಯೋಗಿ ಬಾಬು
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Jun 30, 2023 | 12:30 PM

ಚಿತ್ರರಂಗದಲ್ಲಿ ಅನೇಕರು ತಮ್ಮ ಪ್ರತಿಭೆ ಮೂಲಕ ಸ್ಥಾನ ಗುರುತಿಸಿಕೊಂಡಿದ್ದಾರೆ. ಈ ಸಾಲಿನಲ್ಲಿ ಯೋಗಿ ಬಾಬು ಕೂಡ ಒಬ್ಬರು. ಯೋಗಿಬಾಬು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಕಾಮಿಡಿಯನ್ ಆಗಿ ಮಿಂಚುತ್ತಿದ್ದಾರೆ. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಯೋಗಿ ಬಾಬು (Yogi Babu) ಅವರು ಕಾಮಿಡಿಯನ್ ಆಗಿ ನಟಿಸುತ್ತಾರೆ. ನಿರ್ದೇಶಕರು ಅವರಿಗಾಗಿಯೇ ಕಥೆಯಲ್ಲಿ ಕಾಮಿಡಿ ಟ್ರ್ಯಾಕ್ ಬರೆಯುತ್ತಾರೆ. ಅವರ ಒಂದು ದಿನದ ಸಂಭಾವನೆ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

ಯೋಗಿ ಬಾಬು ಅವರು ದಳಪತಿ ವಿಜಯ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ‘ವಾರಿಸು’ ಚಿತ್ರದಲ್ಲಿ ಅವರ ಪಂಚಿಂಗ್ ಸಖತ್ ವರ್ಕೌಟ್ ಆಗಿತ್ತು. 2009ರಲ್ಲಿ ಯೋಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರ ಹಲವು ಚಿತ್ರಗಳು ತೆಲುಗಿಗೆ ಡಬ್ ಆಗಿವೆ. ಯೋಗಿ ಅವರ ಸಂಭಾವನೆ ಯಾವುದೇ ಸ್ಟಾರ್ ಹೀರೋಗೂ ಕಡಿಮೆ ಇಲ್ಲ ಅನ್ನೋದು ವಿಶೇಷ.

ಯೋಗಿ ಬಾಬು ಅವರು ಕಾಲ್​ಶೀಟ್ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಅವರು ಒಂದು ದಿನಕ್ಕೆ ಚಾರ್ಜ್​ ಮಾಡೋದು ಬರೋಬ್ಬರಿ 18 ಲಕ್ಷ ರೂಪಾಯಿ. ಹೀಗಾಗಿ ಪ್ರತಿ ತಿಂಗಳು ಅವರ ಸಂಭಾವನೆ ಕೋಟಿ ರೂಪಾಯಿ ಮೀರಿದೆ. ಈ ವಿಚಾರ ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ.

ಯೋಗಿ ಬಾಬು ಜೊತೆ ಸಾಧು ಕೋಕಿಲ ಮಗನ ಚಿತ್ರ

ಖ್ಯಾತ ನಟ ಸಾಧು ಕೋಕಿಲ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟನೆ, ನಿರ್ದೇಶನ ಮತ್ತು ಸಂಗೀತ ಕ್ಷೇತ್ರದಲ್ಲಿ ಅವರಿಗೆ ಹಿಡಿತ ಇದೆ. ಅವರ ಮಗ ಸುರಾಗ್​ ಕೂಡ ನಿರ್ದೇಶಕನಾಗುತ್ತಿದ್ದಾರೆ. ಯೋಗಿ ಬಾಬು ಜೊತೆ ಸುರಾಗ್​ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: Yogi Babu: ಕಾಲಿವುಡ್​ ಸ್ಟಾರ್​ ಕಾಮಿಡಿಯನ್​ ಯೋಗಿ ಬಾಬು ಸಿನಿಮಾಗೆ ಸಾಧು ಕೋಕಿಲ ಪುತ್ರನ ನಿರ್ದೇಶನ

ಚಿತ್ರರಂಗದಲ್ಲಿ ನಿರ್ದೇಶಕರಾಗಬೇಕು ಎಂದು ಸುರಾಗ್ ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದರು. ಈಗ ಅವರ ಕನಸು ನನಸಾಗುತ್ತಿದೆ. ಈ ಚಿತ್ರದಲ್ಲಿ ಯೋಗಿ ಬಾಬು ಜೊತೆ ದಕ್ಷಿಣ ಭಾರತದ ಇಬ್ಬರು ಸ್ಟಾರ್​ ಕಲಾವಿದರು ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣ ಆರಂಭ ಆಗಿದೆ. ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣ ಇನ್ನಷ್ಟೇ ಆರಂಭ ಆಗಬೇಕಿದೆ. ಸಾಧು ಕೋಕಿಲ ಅವರ ‘ಲೂಪ್​ ಎಂಟರ್​ಟೇನ್ಮೆಂಟ್​’ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸಾಧು ಕೋಕಿಲ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:17 pm, Fri, 30 June 23

ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
ಪತ್ನಿ ಗೀತಾ ನೀಡಿದ ಬೆಂಬಲದ ಬಗ್ಗೆ ಶಿವಣ್ಣ ಭಾವುಕ ಮಾತು
ಪತ್ನಿ ಗೀತಾ ನೀಡಿದ ಬೆಂಬಲದ ಬಗ್ಗೆ ಶಿವಣ್ಣ ಭಾವುಕ ಮಾತು
ಶಿವಣ್ಣನಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಶಿವಣ್ಣನಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಗಣರಾಜ್ಯೋತ್ಸವ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ
ಗಣರಾಜ್ಯೋತ್ಸವ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ
ಸೇಬಿನ ಹಾರ ಹಾಕಿ ಶಿವಣ್ಣನನ್ನು ಅದ್ಧೂರಿ ಸ್ವಾಗತಿಸಿದ ಅಭಿಮಾನಿಗಳು
ಸೇಬಿನ ಹಾರ ಹಾಕಿ ಶಿವಣ್ಣನನ್ನು ಅದ್ಧೂರಿ ಸ್ವಾಗತಿಸಿದ ಅಭಿಮಾನಿಗಳು
Video: ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ಪ್ರಧಾನಿ ಮೋದಿ ನಮನ
Video: ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ಪ್ರಧಾನಿ ಮೋದಿ ನಮನ