ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಕಳಪೆ ಎಂದು ಕೊಟ್ಟ ವಿಚಾರ ಸಾಕಷ್ಟು ವಿಚಾರಗಳಿಗೆ ನಾಂದಿ ಹಾಡಿತ್ತು. ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದಾರೆ. ಈ ಬಗ್ಗೆ ವಾರದ ಪಂಚಾಯ್ತಿಯಲ್ಲಿ ಚರ್ಚೆ ಆಗಿದೆ. ಸುದೀಪ್ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
‘ಬಿಗ್ ಬಾಸ್ ಮನೆಯಲ್ಲಿ ನೀವೇ ಕಳಪೆ ಆಗ್ತೀನಿ ಅಂದ್ರಿ. ಮನೆಯವರೆಲ್ಲರೂ ಕಳಪೆ ಕೊಟ್ಟಾಗ, ನೀವೆ ಇದನ್ನು ವಿರೋಧಿಸಿದ್ರಿ ಏಕೆ’ ಎಂದು ಪ್ರಶ್ನಿಸಿದರು ಸುದೀಪ್. ‘ಕಳಪೆ ಪಟ್ಟ ಕೊಡುವಾಗ ನೀಡುವ ಕಾರಣ ಸರಿಯಾಗಿರಬೇಕು. ಆದರೆ, ಅವರು ನೀಡಿದ ಕಾರಣ ನನಗೆ ಕನ್ವಿನ್ಸ್ ಆಗಿಲ್ಲ. ಹೀಗಾಗಿ, ನಾನು ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ. ಇಲ್ಲಿ ಎಲ್ಲವೂ ಸುಳ್ಳು’ ಎಂದರು ಚಕ್ರವರ್ತಿ.
ಇದಕ್ಕೆ ಉತ್ತರಿಸಿದ ಸುದೀಪ್, ‘ಬಿಗ್ ಬಾಸ್ ಮನೆಯಲ್ಲಿ ಕಳಪೆ ಕೊಡೋದು ಅವರ ಒಪಿನೀಯನ್. ಅದು ಅವರವರಿಗೆ ಬಿಟ್ಟಿದ್ದು. ಒಂದು ವಾರ ಟಾಸ್ಕ್ ಕೊಡಲ್ಲ. ಯಾರು ಯಾರ ಜತೆಯೂ ಮಾತನಾಡುವ ಹಾಗಿಲ್ಲ ಎಂದು ನಿಯಮ ತಂದರೆ ಹೇಗಿರುತ್ತದೆ?’ ಎಂದು ಸುದೀಪ್ ಪ್ರಶ್ನೆ ಮಾಡಿದರು.
‘ಬಿಗ್ ಬಾಸ್ ಮನೆಯಲ್ಲಿ ಅತ್ಯುತ್ತಮ ಎನ್ನುವ ಬಿರುದು ನೀಡುತ್ತಾರೆ. ಆದರೆ, ಅದಕ್ಕೆ ನೀಡಿದ ಕಾರಣ ಸರಿ ಇರಲ್ಲ. ಇದರ ಬಗ್ಗೆ ಯಾರೊಬ್ಬರೂ ಮಾತನಾಡಿಯೇ ಇಲ್ಲ. ಕಳಪೆ ಎಂದಾಗ ಮಾತ್ರ ನೀವು ಈ ರೀತಿ ಮಾಡ್ತೀರಿ. ಜೈಲಿಗೆ ಹೋದ ಕೆಲವರು ತರ್ಲೆ ಮಾಡಿದಾರೆ, ಸಾಕಷ್ಟು ಜನ ಎಂಟರ್ಟೇನ್ ನೀಡಿದ್ದಾರೆ. ಜೈಲು ಬಿಗ್ ಬಾಸ್ನ ಒಂದು ಭಾಗ’ ಅಷ್ಟೇ ಎಂದರು ಸುದೀಪ್.
‘ಕಳಪೆ ಅನ್ನೋದನ್ನು ಮಾತ್ರ ಯಾಕೆ ಅಷ್ಟು ಚರ್ಚೆ ಮಾಡ್ತೀರಾ? ಮನೆಯವರ ಅಭಿಪ್ರಾಯ ತಿಳಿಸೋಕೆ ಇರೋದು ಅದು. ನೀವು ಏನೇ ಮಾಡಿದರು ಅದನ್ನು ಜನರು ನೋಡುತ್ತಿರುತ್ತಾರೆ’ ಎಂದು ಸುದೀಪ್ ಮಾತು ಮುಗಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್?