ದಿವ್ಯಾ ಉರುಡುಗ ಮತ್ತು ಅರವಿಂದ್ ಪ್ರೀತಿ-ಪ್ರಣಯದ ವಿಚಾರಕ್ಕೆ ಸುದೀಪ್​ ಕೊಟ್ರು ಮಸ್ತ್​ ಪಂಚ್​

ಬಿಗ್​ ಬಾಸ್ ಮನೆಯ ಜೋಡಿ ಆಟದಲ್ಲಿ ದಿವ್ಯಾ-ಅರವಿಂದ್​ ಒಟ್ಟಿಗೇ ಇದ್ದರು. ಆಟ ಮುಗಿದರೂ ಇಬ್ಬರೂ ಒಟ್ಟಿಗೇ ಇರುತ್ತಿದ್ದರು. ಇದನ್ನು ನೋಡಿದ ಮನೆ ಮಂದಿ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದಾರೆ.

ದಿವ್ಯಾ ಉರುಡುಗ ಮತ್ತು ಅರವಿಂದ್ ಪ್ರೀತಿ-ಪ್ರಣಯದ ವಿಚಾರಕ್ಕೆ ಸುದೀಪ್​ ಕೊಟ್ರು ಮಸ್ತ್​ ಪಂಚ್​
ದಿವ್ಯಾ-ಅರವಿಂದ್​-ಸುದೀಪ್​

Updated on: Mar 21, 2021 | 4:10 PM

ಜೋಡಿ ಟಾಸ್ಕ್​ನಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆಪಿ ಒಂದಾಗಿದ್ದರು. ಈ ಜೋಡಿ ನೋಡಿದ ಅಭಿಮಾನಿಗಳು ಸಖತ್​ ಖುಷಿ ಆಗಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಭಾರೀ ಚರ್ಚೆ ಆಗಿದೆ. ಅಷ್ಟೇ ಅಲ್ಲ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್​ ಕೂಡ ಈ ಜೋಡಿಗೆ ಸೂಪರ್​ ಟಾಂಗ್​ ನೀಡಿದ್ದಾರೆ.

ಬಿಗ್​ ಬಾಸ್ ಮನೆಯ ಜೋಡಿ ಆಟದಲ್ಲಿ ದಿವ್ಯಾ-ಅರವಿಂದ್​ ಒಟ್ಟಿಗೇ ಇದ್ದರು. ಆಟ ಮುಗಿದರೂ ಇಬ್ಬರೂ ಒಟ್ಟಿಗೇ ಸುತ್ತಾಟ ನಡೆಸುತ್ತಿದ್ದರು. ಇದನ್ನು ನೋಡಿದ ಮನೆ ಮಂದಿ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು, ಈ ಜೋಡಿ ಪ್ರೇಕ್ಷಕರಿಗೂ ಇಷ್ಟವಾಗಿದೆ ಎಂಬುದಕ್ಕೆ ಕಲರ್ಸ್​ ಕನ್ನಡ ವಾಹಿನಿ ಹಾಕಿದ ಪೋಸ್ಟ್​ಗೆ ವೀಕ್ಷಕರು ನೀಡಿದ ಉತ್ತರವೇ ಸಾಕ್ಷಿ. ನಿಮ್ಮ ನೆಚ್ಚಿನ ಜೋಡಿ ಯಾವುದು? ಎಂದು ಕಲರ್ಸ್​ ಕನ್ನಡ ವಾಹಿನಿ ಪೋಸ್ಟ್​ ಒಂದನ್ನು ಹಂಚಿಕೊಂಡಿತ್ತು. ಈ ಪೋಸ್ಟ್​ಗೆ ಬಹುತೇಕರ ಅರವಿಂದ್​-ದಿವ್ಯಾ ಉರುಡುಗ ಎಂದು ಉತ್ತರ ನೀಡಿದ್ದಾರೆ.

ಇನ್ನು ಮತ್ತೊಂದು ಪೋಸ್ಟ್​ನಲ್ಲಿ ಇಂದು ನಡೆಯಲಿರುವ ಸೂಪರ್ ಸಂಡೆ ವಿತ್ ಸುದೀಪ ಬಗ್ಗೆ ಪೋಸ್ಟ್​ ಒಂದನ್ನು ಹಾಕಲಾಗಿದೆ. ಇದರಲ್ಲಿ ಸುದೀಪ್​ ಈ ಜೋಡಿಯ ಕಾಲೆಳೆದಿದ್ದಾರೆ. ಅರವಿಂದ ಹಾಗೂ ದಿವ್ಯಾ ಒಟ್ಟಿಗೆ ಕುಳಿತಿರುವ ಬಗ್ಗೆ ಮಾತನಾಡಿರುವ ಸುದೀಪ್​, ಎಲ್ಲರೂ ಸ್ಥಾನ ಬದಲಾಯಿಸಿಕೊಂಡಿದ್ದಾರೆ. ಆದರೆ, ಅವರಿಬ್ಬರು ಮಾತ್ರ ಸ್ಥಾನ ಬದಲಾಯಿಸಿಲ್ಲ ಎಂದು ಮಾತು ಆರಂಭಿಸಿದ್ದಾರೆ. ಇದಕ್ಕೆ ಮನೆ ಮಂದಿ ಎಲ್ಲ ನಕ್ಕಿದ್ದಾರೆ.

ಇನ್ನು, ಮನೆ ಮಂದಿ ಅವರ ಜತೆ ಮಾತನಾಡಿಲ್ಲ ಎಂದರೆ ದಿವ್ಯಾಗೆ ಬೇಸರವಾಗುತ್ತದೆ ಎಂದು ಅರವಿಂದ್ ಹೇಳಿದ್ದರು. ಇದಕ್ಕೆ ನಗುತ್ತಲೇ ಉತ್ತರಿಸಿರುವ ಸುದೀಪ್​, ಬೇರೆಯವರು ಮಾತಾಡೋಕೂ ನೀವು ಅವಕಾಶ ಮಾಡಿಕೊಡಬೇಕಲ್ಲವೇ ಅರವಿಂದ್​? ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಎದುರು ದಿವ್ಯಾ ಸುರೇಶ್ ಪ್ರೀತಿ ನಾಟಕ ಬಯಲು; ಸ್ವಾರ್ಥಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ?