Anchor Anasuya: ನಿರೂಪಕಿ ಅನುಸೂಯ ಬಟ್ಟೆ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ನಟ ಕೋಟ ಶ್ರೀನಿವಾಸ ರಾವ್​

Kota Srinivasa Rao: ಇತ್ತೀಚೆಗೆ ಜಾತಿ ಬಗ್ಗೆ ಮಾತನಾಡಿ ವಿವಾದ ಮಾಡಿಕೊಂಡಿದ್ದ ಹಿರಿಯ ನಟ ಕೋಟ ಶ್ರೀನಿವಾಸ ರಾವ್​ ಅವರು ಈಗ ನಿರೂಪಕಿ ಅನುಸೂಯ ಧರಿಸಿದ್ದ ಬಟ್ಟೆ ಬಗ್ಗೆ ಮಾತನಾಡಿದ್ದಾರೆ. ಅದು ಮತ್ತೆ ವಿವಾದಕ್ಕೆ ಕಾರಣ ಆಗಿದೆ.

Anchor Anasuya: ನಿರೂಪಕಿ ಅನುಸೂಯ ಬಟ್ಟೆ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ನಟ ಕೋಟ ಶ್ರೀನಿವಾಸ ರಾವ್​
ಕೋಟ ಶ್ರೀನಿವಾಸ ರಾವ್, ಅನುಸೂಯ
Edited By:

Updated on: Oct 19, 2021 | 9:15 AM

ಟಾಲಿವುಡ್​ನ ಹಿರಿಯ ನಟ ಕೋಟ ಶ್ರೀನಿವಾಸ ರಾವ್​ ಅವರು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಡೆದ ಮಾ ಚುನಾವಣೆ ಬಗ್ಗೆ ಮಾತನಾಡುತ್ತಿರುವಾಗ ಅವರು ಜಾತಿ ವಿಚಾರವನ್ನು ಎಳೆದುತಂದು ವಿವಾದ ಮಾಡಿಕೊಂಡಿದ್ದರು. ಈಗ ಅವರು ನಿರೂಪಕಿ ಕಮ್​ ನಟಿ ಅನುಸೂಯ ಧರಿಸಿದ್ದ ಬಟ್ಟೆ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಿವೆ. ತಮ್ಮ ಬಗ್ಗೆ ಕೋಟ ಶ್ರೀನಿವಾಸ​ ರಾವ್​ ಹೇಳಿದ ಮಾತುಗಳಿಗೆ ನಿರೂಪಕಿ ಅನುಸೂಯ ಕೊಂಚ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮನರಂಜನಾ ವಾಹಿನಿಗಳು ಯಾವ ರೀತಿ ಹಾಸ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ ಎಂಬ ಬಗ್ಗೆ ಕೋಟ ಶ್ರೀನಿವಾಸ ರಾವ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತೆಲುಗು ‘ಈಟಿವಿ’ ವಾಹಿನಿಯ ‘ಜಬರ್ದಸ್ತ್​’ ಶೋ ಬಗ್ಗೆ ಅವರು ಮಾತನಾಡಿದರು. ಆ ಶೋ ನಿರೂಪಿಸುತ್ತಿರುವುದು ಖ್ಯಾತ ನಿರೂಪಕಿ ಅನುಸೂಯ ಭಾರದ್ವಾಜ್​. ಅವರ ಡ್ರೆಸ್ಸಿಂಗ್​ ಸೆನ್ಸ್​ ಕುರಿತು ಕೋಟ ಶ್ರೀನಿವಾಸ ರಾವ್​ ಮಾತನಾಡಿದ್ದಾರೆ.

‘ಇವು ಕಾಮಿಡಿ ಕಾರ್ಯಕ್ರಮ ಅಲ್ಲ. ಸರ್ಕಸ್​ ರೀತಿ ಕಾಣಿಸುತ್ತವೆ. ಸದ್ಯಕ್ಕೆ ಅದನ್ನು ಜನರು ನೋಡುತ್ತಿರಬಹುದು. ಆದರೆ ಹೆಚ್ಚು ಕಾಲ ನೋಡುವುದಿಲ್ಲ. ಅನುಸೂಯ ಒಳ್ಳೆಯ ನಟಿ, ನಿರೂಪಕಿ. ಅವರಲ್ಲಿ ಪ್ರತಿಭೆ ಇದೆ. ಆದರೆ ವೈಯಕ್ತಿಕವಾಗಿ ನನಗೆ ಅವರ ಡ್ರೆಸ್​ ಇಷ್ಟ ಆಗುವುದಿಲ್ಲ’ ಎಂದು ಕೋಟ ಶ್ರೀನಿವಾಸ ರಾವ್​ ಹೇಳಿದ್ದಾರೆ.

ಈ ಸಂದರ್ಶನವನ್ನು ನೋಡಿರುವ ಅನುಸೂಯ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಡ್ರೆಸ್​ ಆಯ್ಕೆಯ ವಿಚಾರ ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತದೆ ಎಂಬುದು ಖುಷಿಯ ಸಂಗತಿ. ಆದರೆ ಅಂಥ ಅನುಭವಿ ನಟರು ಈ ರೀತಿ ಕೆಳಮಟ್ಟದ ಕಮೆಂಟ್​ ಮಾಡಿದಾಗ ಬೇಸರ ಎನಿಸುತ್ತದೆ. ಯಾವ ರೀತಿ ಬಟ್ಟೆ ಧರಿಸಬೇಕು ಎಂಬುದು ಎಲ್ಲರ ವೈಯಕ್ತಿಕ ಆಯ್ಕೆ. ಮದುವೆ-ಮಕ್ಕಳು ಆಗಿರುವ ನಟರೆಲ್ಲ ಶರ್ಟ್​ ಬಿಚ್ಚಿಕೊಂಡು ತೆರೆಮೇಲೆ ನಟಿಯರ ಜೊತೆ ರೊಮ್ಯಾನ್ಸ್​ ಮಾಡುವುದನ್ನು ಯಾಕೆ ಯಾರೂ ಕೂಡ ಪ್ರಶ್ನೆ ಮಾಡಿಲ್ಲ’ ಎಂದು ಅನುಸೂಯ ಖಡಕ್​ ತಿರುಗೇಟು ನೀಡಿದ್ದಾರೆ. ಎಲ್ಲಿಯೂ ಅವರು ಕೋಟ ಶ್ರೀನಿವಾಸ ರಾವ್​ ಹೆಸರನ್ನು ಅವರು ಪ್ರಸ್ತಾಪಿಸಿಲ್ಲ.

ಇದನ್ನೂ ಓದಿ:

Sri Reddy: ‘ಆತ ಸಲಿಂಗಕಾಮಿ, ಅಂಥ ವ್ಯಕ್ತಿ ಜತೆ ಸಮಂತಾ ಸಂಬಂಧ ಬೆಳೆಸಲ್ಲ’; ನಟಿ ಶ್ರೀರೆಡ್ಡಿ ಶಾಕಿಂಗ್​ ಹೇಳಿಕೆ

ಯಶ್​, ಪ್ರಭಾಸ್​, ಸಮಂತಾರನ್ನೂ ಹಿಂದಿಕ್ಕಿ ರಶ್ಮಿಕಾ ನಂ.1, ದೇವರಕೊಂಡ ನಂ.2: ಇಲ್ಲಿದೆ ಫೋರ್ಬ್ಸ್​ ಪಟ್ಟಿ

Web contact

TV9 Kannada

Read More
Follow Us