Krithi Shetty: ಇಷ್ಟಪಡುವ ಹುಡುಗ ಹೇಗಿರಬೇಕು? ಗುಣಗಳ ಪಟ್ಟಿ ಬಿಡುಗಡೆ ಮಾಡಿದ ನಟಿ ಕೃತಿ ಶೆಟ್ಟಿ

2019ರಲ್ಲಿ ತೆರೆಗೆ ಬಂದ ಸೂಪರ್​ 30 ಸಿನಿಮಾದಲ್ಲಿ ಕೃತಿ ಶೆಟ್ಟಿ ಚೈಲ್ಡ್​ ಆರ್ಟಿಸ್ಟ್​​ ಆಗಿ ನಟಿಸಿದ್ದರು. ಉಪ್ಪೆನಾ ಸಿನಿಮಾದಲ್ಲಿ ಹೀರೋಯಿನ್​ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು.

Krithi Shetty: ಇಷ್ಟಪಡುವ ಹುಡುಗ ಹೇಗಿರಬೇಕು? ಗುಣಗಳ ಪಟ್ಟಿ ಬಿಡುಗಡೆ ಮಾಡಿದ ನಟಿ ಕೃತಿ ಶೆಟ್ಟಿ
ಕೃತಿ ಶೆಟ್ಟಿ
Edited By:

Updated on: May 22, 2021 | 4:19 PM

ನಟಿ ಕೃತಿ ಶೆಟ್ಟಿ ‘ಉಪ್ಪೆನಾ’ ಸಿನಿಮಾ ಮೂಲಕ ಟಾಲಿವುಡ್​ಗೆ ಕಾಲಿಟ್ಟವರು. ಮೊದಲ ಸಿನಿಮಾದಲ್ಲೇ ಖ್ಯಾತಿ ಪಡೆದುಕೊಂಡ ಅವರು, ಟಾಲಿವುಡ್​ನಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದಾರೆ. ಈ ಸಿನಿಮಾ ತೆರೆಕಂಡ ನಂತರದಲ್ಲಿ ಸಾಲು ಸಾಲು ನಿರ್ಮಾಪಕರು  ಅವರ ಮನೆ ಕದ ತಟ್ಟಿದ್ದಾರೆ. ಅಷ್ಟೇ ಅಲ್ಲ ಅವರ ಹಿಂಬಾಲಕರ ಸಂಖ್ಯೆ ಕೂಡ ಹೆಚ್ಚಿದೆ. ಈಗ ಕೃತಿ ತಾವು ಇಷ್ಟ ಪಡುವ  ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ.

2019ರಲ್ಲಿ ತೆರೆಗೆ ಬಂದ ‘ಸೂಪರ್​ 30’ ಸಿನಿಮಾದಲ್ಲಿ ಕೃತಿ ಶೆಟ್ಟಿ ಚೈಲ್ಡ್​ ಆರ್ಟಿಸ್ಟ್​​ ಆಗಿ ನಟಿಸಿದ್ದರು. ಉಪ್ಪೆನಾ ಸಿನಿಮಾದಲ್ಲಿ ಹೀರೋಯಿನ್​ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ಅವರ ಸ್ಮೈಲ್​, ನಟನೆ ಎಲ್ಲರಿಗೂ ಇಷ್ಟವಾಗಿತ್ತು. ಹೀಗಾಗಿ, ಅವರ ಹಿಂಬಾಲಕರ ಸಂಖ್ಯೆ ದೊಡ್ಡದಾಗಿದೆ. ಈಗ ಹುಡುಗರಲ್ಲಿ ಯಾವ ವಿಚಾರ ಇಷ್ಟ? ಯಾವ ವಿಚಾರ ಇಷ್ಟವಾಗುವುದಿಲ್ಲ ಎಂಬುದನ್ನು ಕೃತಿ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಕೃತಿ, ಯಾರು ಸುಳ್ಳು ಹೇಳುತ್ತಾರೋ ಅಂಥ ಹುಡುಗರನ್ನು ಕಂಡರೆ ನನಗೆ ಇಷ್ಟವಾಗುವುದೇ ಇಲ್ಲ. ಅವರನ್ನು ನಾನು ಹೇಟ್​ ಮಾಡುತ್ತೇನೆ ಎಂದಿದ್ದಾರೆ. ಈ ಮೂಲಕ ಸುಳ್ಳು ಹೇಳುವವರನ್ನು ದೂರ ಇಡುವುದಾಗಿ ಕೃತಿ ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ, ಹುಡುಗರಲ್ಲಿ ಕೃತಿಗೆ ಇಷ್ಟವಾಗುವ ವಿಚಾರಗಳು ಯಾವವು? ಅದಕ್ಕೂ ಅವರೇ ಉತ್ತರ ನೀಡಿದ್ದಾರೆ. ಯಾರು ಪ್ರಾಮಾಣಿಕರಾಗಿರುತ್ತಾರೋ ಅವರನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ಹುಡುಗರು ಯಾವಾಗಲೂ ಬೋಲ್ಡ್​ ಆಗಿರಬೇಕು. ಏನನ್ನಾದರೂ ಧೈರ್ಯದಿಂದ ಹೇಳುವ ವ್ಯಕ್ತಿತ್ವ ಅವನದ್ದಾಗಿರಬೇಕು ಎಂದಿದ್ದಾರೆ ಕೃತಿ.

‘ಶ್ಯಾಮ್​ ಸಿಂಗ್​ ರಾಯ್​’ ಚಿತ್ರದಲ್ಲಿ ನಾನಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಹಾಗೂ ಕೃತಿ ಶೆಟ್ಟಿ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. ರಾಹುಲ್​ ಸಂಕ್ರೀತ್ಯಾನ್​ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೆ, ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾದಲ್ಲೂ ಕೃತಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಸುಧೀರ್​ ಬಾಬು ಚಿತ್ರದ ಹೀರೋ.

ಇದನ್ನೂ ಓದಿ: Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ