ಕೃತಿ ಶೆಟ್ಟಿಯಿಂದ ನಡೆಯಿತು ತಪ್ಪು; ನಿರ್ದೇಶಕನಿಂದ ಬೈಗುಳ, ಅಭಿಮಾನಿಗಳು ಇದನ್ನು ಸಹಿಸ್ತಾರ?

‘ಉಪ್ಪೆನಾ’ ಸಿನಿಮಾದಲ್ಲಿ ಕೃತಿ ನಟನೆ ಎಲ್ಲರಿಗೂ ಇಷ್ಟವಾಗಿತ್ತು. ವಯಸ್ಸು ಚಿಕ್ಕದಿದ್ದರೂ ನಟನೆಯಲ್ಲಿ ಅವರಿಗೆ ಒಂದು ಪ್ರಬುದ್ಧತೆ ಬಂದಿದೆ. ಈ ಕಾರಣಕ್ಕೆ ಅವರಿಗೆ ಆಫರ್​ಗಳು ಹೆಚ್ಚುತ್ತಲೇ ಇವೆ.

ಕೃತಿ ಶೆಟ್ಟಿಯಿಂದ ನಡೆಯಿತು ತಪ್ಪು; ನಿರ್ದೇಶಕನಿಂದ ಬೈಗುಳ, ಅಭಿಮಾನಿಗಳು ಇದನ್ನು ಸಹಿಸ್ತಾರ?
ಕೃತಿ ಶೆಟ್ಟಿ
Edited By:

Updated on: Aug 12, 2021 | 2:10 PM

ಕೃತಿ ಶೆಟ್ಟಿ ತುಂಬಾ ಸಣ್ಣ ವಯಸ್ಸಿಗೆ ದೊಡ್ಡಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡರು. ತೆಲುಗಿನ ‘ಉಪ್ಪೆನಾ’ ಸಿನಿಮಾ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತ್ತು. 18 ವರ್ಷ ತುಂಬುವುದರೊಳಗೆ ಚಿತ್ರರಂಗಕ್ಕೆ ಕಾಲಿಟ್ಟ ಅವರಿಗೆ ಅಪಾರ ಅಭಿಮಾನಿ ಬಳಗ ಹುಟ್ಟಿಕೊಂಡಿತು. ಆದರೆ, ಈಗ ಅವರ ಅಭಿಮಾನಿಗಳಿಗೆ ಬೇಸರವಾಗುವಂತಹ ಘಟನೆ ನಡೆದಿದೆ. ಇದನ್ನು ಅವರ ಫ್ಯಾನ್ಸ್​ ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

‘ಉಪ್ಪೆನಾ’ ಸಿನಿಮಾದಲ್ಲಿ ಕೃತಿ ನಟನೆ ಎಲ್ಲರಿಗೂ ಇಷ್ಟವಾಗಿತ್ತು. ವಯಸ್ಸು ಚಿಕ್ಕದಿದ್ದರೂ ನಟನೆಯಲ್ಲಿ ಅವರಿಗೆ ಒಂದು ಪ್ರಬುದ್ಧತೆ ಬಂದಿದೆ. ಈ ಕಾರಣಕ್ಕೆ ಅವರಿಗೆ ಆಫರ್​ಗಳು ಹೆಚ್ಚುತ್ತಲೇ ಇವೆ. ಸದ್ಯ, ಅವರ ಕೈಯಲ್ಲಿ ಮೂರು ಸಿನಿಮಾಗಳಿದ್ದು, ಮೂರು ಚಿತ್ರದ ಶೂಟಿಂಗ್​ ಭರದಿಂದ ಸಾಗುತ್ತಿದೆ. ರಾಮ್​ ಪೋತಿನೇನಿ ಅವರ 19ನೇ ಸಿನಿಮಾಗೆ ಕೃತಿ ನಾಯಕಿ. ಈ ಚಿತ್ರದ ಶೂಟಿಂಗ್​ ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿದೆ. ಈ ವೇಳೆ ಕೃತಿ ಕಡೆಯಿಂದ ತಪ್ಪೊಂದು ನಡೆದಿದೆ.

ಎನ್​. ಲಿಂಗಸ್ವಾಮಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್​ ವೇಳೆ ನಡೆದ ಘಟನೆ ಕುರಿತು ಸುದ್ದಿ ಒಂದು ಹಬ್ಬಿದೆ. ಈ ಚಿತ್ರದ ಶೂಟಿಂಗ್​ ವೇಳೆ ಕೃತಿ ದೃಶ್ಯದಲ್ಲಿ ನಿರ್ದಿಷ್ಟ ಭಾವನೆಯನ್ನು ಹೊರತೆಗೆಯಲು ಹೆಣಗಾಡಿದ್ದರು. ಒಂದು ದೃಶ್ಯದ ಶೂಟ್​ ಒಂದು ಗಂಟೆ ಕಾಲ ನಡೆದಿತ್ತು. ಹಲವು ರೀಟೇಕ್​ಗಳು ಕೂಡ ತೆಗೆದುಕೊಳ್ಳಲಾಯಿತು. ಕೃತಿ ಎದುರು ಹಿರಿಯ ನಟ ನಾಸರ್​ ಇದ್ದರು. ಶಾಟ್​ ಸರಿಯಾಗಿ ಬರದ ಕಾರಣ ನಾಸರ್​ ಅಸಮಾಧಾನ ಹೊರ ಹಾಕಿದ್ದರು. ಈ ಕಾರಣಕ್ಕೆ ಲಿಂಗಸ್ವಾಮಿ ಅವರು ಕೃತಿಗೆ ನೇರವಾಗಿ ಬೈದಿದ್ದಾರೆ ಎನ್ನಲಾಗಿದೆ.

ಈ ವಿಚಾರ ಸದ್ಯ, ಅವರ ಅಭಿಮಾನಿಗಳ ಕಿವಿಗೂ ಬಿದ್ದಿದೆ. ಕೃತಿ ಒಂದು ಟೇಕ್​ಗೆ ಇಷ್ಟೊಂದು ಹೆಣಗಾಡಿದ್ದಾರೆ ಎನ್ನುವ ವಿಚಾರ ಫ್ಯಾನ್ಸ್​ಗೆ ಬೇಸರ ತರಿಸಿದೆ. ಇದರ ಜತೆಗೆ ನಿರ್ದೇಶಕರಿಂದ ಅವರು ಬೈಸಿಕೊಂಡಿದ್ದಾರೆ ಎಂಬುದು ಕೂಡ ಫ್ಯಾನ್ಸ್​ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Krithi Shetty: ಇಷ್ಟಪಡುವ ಹುಡುಗ ಹೇಗಿರಬೇಕು? ಗುಣಗಳ ಪಟ್ಟಿ ಬಿಡುಗಡೆ ಮಾಡಿದ ನಟಿ ಕೃತಿ ಶೆಟ್ಟಿ