ಕಳೆದ ವರ್ಷದ ಟಾಪ್ ಸಿನಿಮಾ ಪಟ್ಟಿಯಲ್ಲಿ ಕಡ್ಡಾಯವಾಗಿ ಕೇಳಿ ಬರುವ ಎರಡು ಸಿನಿಮಾಗಳೆಂದರೆ ಮಲಯಾಳಂನ ‘ಮಂಜ್ಞುಮೆಲ್ ಬಾಯ್ಸ್’ ಮತ್ತು ಫಹಾದ್ ಫಾಸಿಲ್ ನಟಿಸಿದ್ದ ‘ಆವೇಶಂ’. 2024ರ ಮೊದಲಾರ್ಧದಲ್ಲಿ ಬಾಕ್ಸ್ ಆಫೀಸ್ನಲ್ಲಿ ಹಲ್ ಚಲ್ ಎಬ್ಬಿಸಿದ್ದ ಸಿನಿಮಾಗಳಿವು. ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ ವಿಮರ್ಶಕರ ಮನಸ್ಸನ್ನೂ ಗೆದ್ದಿದ್ದವು ಈ ಸಿನಿಮಾಗಳು. ಇದೀಗ ಈ ಎರಡು ಸಿನಿಮಾಗಳ ನಿರ್ದೇಶಕರನ್ನು ಒಂದೇ ಸಿನಿಮಾಕ್ಕೆ ಒಟ್ಟಿಗೆ ಸೇರಿಸಿದ್ದಾರೆ ‘ಟಾಕ್ಸಿಕ್’ ಸಿನಿಮಾದ ಮೇಕರ್ಸ್.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಕ್ಕೆ ಬಂಡವಾಳ ಹೂಡಿರುವ ಕೆವಿಎನ್ ಪ್ರೊಡಕ್ಷನ್ಸ್ ಹೊಸ ಮಲಯಾಳಂ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಈ ಸಿನಿಮಾಕ್ಕೆ ‘ಮಂಜ್ಞುಮೆಲ್ ಬಾಯ್ಸ್’ ಹಾಗೂ ‘ಆವೇಶಂ’ ಸಿನಿಮಾದ ನಿರ್ದೇಶಕರು ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಸಿನಿಮಾ ನಿರ್ದೇಶನ ಮಾಡಲಿರುವುದು ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ದೇಶಕ ಚಿದಂಬರಂ ಆದರೆ ಸಿನಿಮಾದ ಕತೆ ಮತ್ತು ಚಿತ್ರಕತೆ ಬರೆದಿರುವುದು ‘ಆವೇಶಂ’ ಸಿನಿಮಾದ ನಿರ್ದೇಶಕ ಜೀತು ಮಾಧವನ್.
KVN Productions and Thespian Films join forces with Mavericks Chidambaram and Jithu Madhavan to create a Malayalam masterpiece. Big names, bigger vision!@KvnProductions @thespianfilms_ @ShailajaD #SatishFenn @SUPRITH_87 @chidaakasham #JithuMadhavan #ShijuKhalid #SushinShyam… pic.twitter.com/zB129JlBMQ
— KVN Productions (@KvnProductions) January 2, 2025
ಈ ಸಿನಿಮಾಕ್ಕೆ ತೆಸ್ಪಿಯನ್ ಫಿಲಮ್ಸ್ ಬಂಡವಾಳ ಹೂಡಿದ್ದು, ಕೆವಿಎನ್ ಸಹ ಈ ಪ್ರಾಜೆಕ್ಟ್ಗೆ ಕೈಜೋಡಿಸಿದೆ. ಕೆವಿಎನ್ ಕೈ ಜೋಡಿಸಿರುವ ಕಾರಣ ಪ್ರಾಜೆಕ್ಟ್ ದೊಡ್ಡದಾಗಿಯೇ ಆಗುವ ನಿರೀಕ್ಷೆ ಇದ್ದು, ಸಿನಿಮಾ ಮಲಯಾಳಂ ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಸಿನಿಮಾದ ಪೋಸ್ಟರ್ ಅಷ್ಟೆ ಇದೀಗ ಬಿಡುಗಡೆ ಆಗಿದ್ದು, ದೂರದಲ್ಲಿ ನಡೆದು ಹೋಗುತ್ತಿರುವ ತಾಯಿಯನ್ನು ನೋಡುತ್ತಿರುವ ಮಗನ ಚಿತ್ರವನ್ನು ಪೋಸ್ಟರ್ ಒಳಗೊಂಡಿದೆ. ಸಿನಿಮಾದ ಪಾತ್ರವರ್ಗ ಇನ್ನಷ್ಟೆ ಗೊತ್ತಾಗಬೇಕಿದೆ.
ಇದನ್ನೂ ಓದಿ:ಯಶ್ಗೆ ಇದೆ ನುಗ್ಗಿ ನಡೆಯೋ ಗುಣ; ‘ಕೆಜಿಎಫ್’ ಚಿತ್ರ ಕಾಡ್ಗಿಚ್ಚಾಗಲು ಕಿಡಿ ಹಚ್ಚಿದ್ದೇ ಇವರು
ಕೆವಿಎನ್ ಪಾಲಿಗೆ ಇದು ಮೊದಲ ಮಲಯಾಳಂ ಸಿನಿಮಾ. ಕನ್ನಡದಲ್ಲಿ ‘ಕೆಡಿ’, ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಳ ಮೇಲೆ ಬಂಡವಾಳ ಹೂಡಿರುವ ಕೆವಿಎನ್ ಪ್ರೊಡಕ್ಷನ್ಸ್ ತಮಿಳಿನಲ್ಲಿ ವಿಜಯ್ ನಟನೆಯ ಕೊನೆಯ ಸಿನಿಮಾದ ನಿರ್ಮಾಣದಲ್ಲಿಯೂ ತೊಡಗಿಕೊಂಡಿದೆ. ಪ್ರೇಮ್ ನಿರ್ದೇಶಿಸಿ, ದರ್ಶನ್ ನಟಿಸಬೇಕಿರುವ ಸಿನಿಮಾಕ್ಕೂ ಕೆವಿಎನ್ ಬಂಡವಾಳ ಹೂಡಲಿದೆ.
ತೆಸ್ಪಿಯನ್ ಫಿಲ್ಮ್ಸ್ ನ ಶ್ರೀಮತಿ ಶೈಲಜಾ ದೇಸಾಯಿ, ಕೆವಿಎನ್ ಪ್ರೊಡಕ್ಷನ್ಸ್ ನ ಸಂಸ್ಥಾಪಕ ವೆಂಕಟ ಕೆ ನಾರಾಯಣ ಅವರುಗಳು ನಿರ್ಮಾಣ ಹಾಗೂ ವಿತರಣೆ ಜವಾಬಬ್ದಾರಿ ತೆಗೆದುಕೊಂಡಿದ್ದರೆ, ಛಾಯಾಗ್ರಹಣಕ್ಕೆ ಶೈಜು ಖಾಲೆದ್, ಸಂಗೀತ ನೀಡಲು ಸುಶಿನ್ ಶ್ಯಾಮ್ ಆಯ್ಕೆಯಾದರೆ ಎಡಿಟಿಂಗ್ ಜವಾಬ್ದಾರಿ ವಿವೇಕ್ ಹರ್ಷನ್ ಹೆಗಲಿಗೇರಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Fri, 3 January 25