Lakshana Serial: ಡೆವಿಲ್ ಲೇಡಿ ಸುಳಿವಿಗಾಗಿ ಪ್ರಖ್ಯಾತ್ ಹಿಂದೆ ಬಿದ್ದಿದ್ದಾರೆ ಭೂಪತಿ-ನಕ್ಷತ್ರ

ಜೈಲಿನಲ್ಲಿರುವ ಮೌರ್ಯ ಹೇಳಿದ ಆ ಒಂದು ಮಾತಿನಿಂದ ಭೂಪತಿ ಮತ್ತು ನಕ್ಷತ್ರಳಿಗೆ ಹೊಸ ತಲೆನೋವು ಶುರುವಾಗಿದೆ. ಆ ಡೆವಿಲ್ ಮಹಿಳೆ ಯಾರಿರಬಹುದು, ಆ ಹೆಂಗಸಿಗೆ ಯಾಕೆ ನನ್ನ ತಂದೆಯ ಮೇಲೆ ದ್ವೇಷ ಎಂದು ನಕ್ಷತ್ರ ಮನದಲ್ಲೇ ಯೋಚನೆ ಮಾಡುತ್ತಾಳೆ.

Lakshana Serial: ಡೆವಿಲ್ ಲೇಡಿ ಸುಳಿವಿಗಾಗಿ ಪ್ರಖ್ಯಾತ್ ಹಿಂದೆ ಬಿದ್ದಿದ್ದಾರೆ ಭೂಪತಿ-ನಕ್ಷತ್ರ
Lakshana Serial
Edited By:

Updated on: Oct 11, 2022 | 12:58 PM

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಜೈಲಿನಲ್ಲಿರುವ ಮೌರ್ಯ ಹೇಳಿದ ಆ ಒಂದು ಮಾತಿನಿಂದ ಭೂಪತಿ ಮತ್ತು ನಕ್ಷತ್ರಳಿಗೆ ಹೊಸ ತಲೆನೋವು ಶುರುವಾಗಿದೆ. ಆ ಡೆವಿಲ್ ಮಹಿಳೆ ಯಾರಿರಬಹುದು, ಆ ಹೆಂಗಸಿಗೆ ಯಾಕೆ ನನ್ನ ತಂದೆಯ ಮೇಲೆ ದ್ವೇಷ ಎಂದು ನಕ್ಷತ್ರ ಮನದಲ್ಲೇ ಯೋಚನೆ ಮಾಡುತ್ತಾಳೆ. ಪೋಲಿಸ್ ಸ್ಟೆಷನ್‌ನಿಂದ ಕಾರ್ ಹತ್ತಿ ಮನೆಗೆ ಹೋಗುವ ಹೊತ್ತಿನಲ್ಲೂ ಆಕೆ ಆ ಡೆವಿಲ್ ಮಹಿಳೆ ಯಾರೆಂಬ ಯೋಚನೆಯಲ್ಲಿ ನಿರತಳಾಗಿರುತ್ತಾಳೆ.

ನಕ್ಷತ್ರ ಇದೇ ಯೋಚನೆಯಲ್ಲಿ ಮಗ್ನಳಾಗಿರುವ ಸಮಯದಲ್ಲಿ ಥಟ್ಟನೇ ಶ್ವೇತಾಳ ಸ್ನೇಹಿತ ಪ್ರಖ್ಯಾತ್‌ನ ನೆನಪಾಗುತ್ತದೆ. ಈ ಮೊದಲು ಆತ ಚಂದ್ರಶೇಖರ್ ಅವರನ್ನು ಸಾಯಿಸಲು ಮುಂದಾಗಿದ್ದ ಅದ ಕೂಡಾ ಶ್ವೇತಾಳ ಆದೇಶದ ಮೇರೆಗೆ. ಖಂಡಿತವಾಗಿಯೂ ಆ ಡೆವಿಲ್ ಶ್ವೇತಾನೇ ಆಗಿರುತ್ತಾಳೆ. ಅವಳೇ ತಾನೆ ನನ್ನ ಅಪ್ಪನನ್ನು ಆಸ್ತಿಗಾಗಿ ಸಾಯಿಸಲು ಹೊರಟವಳು, ಹೌದು ಇದು ಅವಳೇ, ಪ್ರಖ್ಯಾತ್‌ನನ್ನು ಹಿಡಿದರೆ ಪಕ್ಕಾ ಅವನು ಶ್ವೇತಾ ವಿಷಯವನ್ನು ಬಾಯಿ ಬಿಡುತ್ತಾನೆ ಅಂತಾ ನಕ್ಷತ್ರ ಮನಸ್ಸಿನಲ್ಲೆ ಮಾತನಾಡಿಕೊಳ್ಳುತ್ತಾಳೆ.

ಇದಾದ ಮೇಲೆ ಪ್ರಖ್ಯಾತ್ ಮೇಲೆ ನನಗೆ ಅನುಮಾನವಿರುವುದಾಗಿ ಭೂಪತಿಯ ಬಳಿಯೂ ಹೇಳುತ್ತಾಳೆ ನಕ್ಷತ್ರ. ಆದರೆ ಭೂಪತಿ ಈ ಕೆಲಸ ಅವನು ಮಾಡಿರಲು ಸಾಧ್ಯನೇ ಇಲ್ಲ. ಅವನಿಗೇನು ಇದರಿಂದ ಲಾಭ ಎಂದು ನಕ್ಷತ್ರಳಿಗೆ ಪ್ರಶ್ನೆ ಮಾಡುತ್ತಾನೆ. ಅದಕ್ಕೆ ನಕ್ಷತ್ರ ಒಂದು ಮಾತು ಹೇಳುತ್ತಾಳೆ ನಿನಗೆ ಅವನ ಬಗ್ಗೆ ಸರಿಯಾಗಿ ಗೊತ್ತಿಲ್ಲ, ಆತ ನನ್ನ ಅಪ್ಪನನ್ನೇ ಸಾಯಿಸೋಕೆ ಹೊರಟವನು, ಅವನಿಗೆ ಆ ಡೆವಿಲ್ ಯಾರೆಂಬುವುದು ಗೊತ್ತಿರುತ್ತದೆ. ನಾನೇ ಅವನನ್ನು ಹುಡುಕುತ್ತೇನೆ ನೀನು ಮನೆಗೆ ಹೋಗು ಎನ್ನುತ್ತಾಳೆ. ಈಕೆಯ ಮಾತಿಗೆ ಭೂಪತಿ ಒಮ್ಮೆ ಶಾಕ್ ಆಗುತ್ತಾನೆ ನಿಜವಾಗಿಯೂ ಆ ಪ್ರಖ್ಯಾತ್ ಈ ಕೆಲಸ ಮಾಡಿದ್ದಾ ಎಂದು. ನಾನು ಕೂಡಾ ನಿನ್ನ ಜೊತೆ ಬರುತ್ತೇನೆ ಇಬ್ಬರು ಸೇರಿ ಅವನನ್ನು ಹುಡುಕೋಣ ಎಂದು ಹೇಳುತ್ತಾನೆ.

ಹೀಗೆ ಮನೆಗೆ ಹೋಗುವವರು ಪ್ರಖ್ಯಾತ್‌ನನ್ನು ಹುಡುಕುವ ಸಲುವಾಗಿ ಪ್ರಖ್ಯಾತ್ ಮನೆಗೆ ಬರುತ್ತಾರೆ ಆದರೆ ಆತ ಮನೆಯಲ್ಲಿರಲಿಲ್ಲ. ಮನೆ ಲಾಕ್ ಆಗಿದೆ ಅವನು ಇಲ್ಲಿ ಇಲ್ಲ ಎಂದು ಭೂಪತಿ ನಕ್ಷತ್ರಳಿಗೆ ಹೇಳುತ್ತಾಳೆ. ಅವನು ಎದುರು ಬಾಗಿಲಿಗೆ ಬೀಗ ಹಾಕಿ ಮನೆಯಲ್ಲಿ ಅಡಗಿಕೊಳ್ಳುವವನು, ಈಗಲೂ ಅದೇ ರೀತಿ ಮಾಡಿರಬಹುದು ಎಂದು ನಕ್ಷತ್ರ ಹೇಳಿದ ಭೂಪತಿ ನಿನಗೆ ಹೇಗೆ ಇದೆಲ್ಲಾ ಗೊತ್ತು ಎಂದು ಕೇಳುತ್ತಾನೆ. ಅವನ ಜಾತಕನೇ ನನಗೆ ಗೊತ್ತು, ಮೊದಲು ಅವನನ್ನು ಹುಡುಕಬೇಕು ಎಂದು ಹೇಳುತ್ತಾಳೆ ನಕ್ಷತ್ರ. ಎಷ್ಟು ಹುಡಿಕಿದರೂ ಆತ ಸಿಗದಿದ್ದಾಗ ಪಕ್ಕದ ಮನೆಯವರಲ್ಲಿ ಅವನೆಲ್ಲಿ ಇರುತ್ತಾನೆ ಎಂದು ಕೇಳಿದಾಗ ಅವನು ಯಾವಾಗಲೂ ಬಾರ್‌ನಲ್ಲಿ ಇರುತ್ತಾನೆ ಅಂತಾ ಪಕ್ಕದ ಮನೆಯ ವ್ಯಕ್ತಿ ಹೇಳುತ್ತಾರೆ.

ತಕ್ಷಣನೇ ಭೂಪತಿ ಮತ್ತು ನಕ್ಷತ್ರ ಅವನಿದ್ದ ಬಾರ್‌ಗೆ ಹೋಗುತ್ತಾರೆ. ಅಲ್ಲಿ ಪ್ರಖ್ಯಾತ್ ಕಂಠ ಪೂರ್ತಿ ಕುಡಿದು ತೂರಾಡಿ ಗಲಾಟೆ ಮಾಡುತ್ತಿದ್ದ. ಅಲ್ಲಿಗೆ ಬಂದವನೇ ಭೂಪತಿ ಪ್ರಖ್ಯಾತ್‌ನ ಕಾಲರ್ ಪಟ್ಟಿ ಹಿಡಿದು ಡೆವಿಲ್ ಯಾರೆಂದು ಖಡಕ್ ಆಗಿ ಕೇಳುತ್ತಾನೆ. ಭೂಪತಿಯ ಈ ಮಾತನ್ನು ಕೇಳಿ ಪ್ರಖ್ಯಾತ್ ಒಂದು ಕ್ಷಣ ದಂದಾಗಿ ಕುಡಿತದ ಅಮಲು ಬಿಟ್ಟಂತಾಗುತ್ತದೆ. ಭೂಪತಿಯ ಭಯದಿಂದಾದರೂ ಪ್ರಖ್ಯಾತ್ ಆ ಡೆವಿಲ್ ಹೆಂಗಸು ಯಾರೆಂದು ಸುಳಿವು ಕೊಡುತ್ತಾನಾ ಎಂದು ಮುಂದೆ ಕಾದು ನೋಡಬೇಕಾಗಿದೆ.
ಮಧುಶ್ರೀ