Exclusive: ಮದುವೆಗಾಗಿ ಸೀರಿಯಲ್​ ಬಿಟ್ಟುಬಂದ ಚಂದನ್​! ಹುಡುಗಿ ಕವಿತಾನಾ ಅಂತ ಕೇಳಿದ್ದಕ್ಕೆ ಅವರು ಹೇಳಿದ್ದೇನು?

‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟ ಚಂದನ್​ ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ. ಮದುವೆ ಸಲುವಾಗಿ ಅವರು ನಟನೆಯಿಂದ ಸ್ವಲ್ಪ ದಿನ ಗ್ಯಾಪ್​ ತೆಗೆದುಕೊಳ್ಳುತ್ತಿದ್ದಾರೆ.

Exclusive: ಮದುವೆಗಾಗಿ ಸೀರಿಯಲ್​ ಬಿಟ್ಟುಬಂದ ಚಂದನ್​! ಹುಡುಗಿ ಕವಿತಾನಾ ಅಂತ ಕೇಳಿದ್ದಕ್ಕೆ ಅವರು ಹೇಳಿದ್ದೇನು?
ಚಂದನ್​ ಕುಮಾರ್​ ಕವಿತಾ ಗೌಡ
Edited By: ಆಯೇಷಾ ಬಾನು

Updated on: Mar 12, 2021 | 8:08 AM

ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಫೇಮಸ್​ ಆಗಿರುವ ನಟ ಚಂದನ್​ ಕುಮಾರ್​ ಅವರು ಈಗೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮದುವೆ ಮತ್ತು ವೈಯಕ್ತಿಕ ಜೀವನದ ಕಾರಣಕ್ಕಾಗಿ ತೆಲುಗಿನ ‘ಸಾವಿತ್ರಮ್ಮಗಾರಿಕಿ ಅಬ್ಬಾಯಿ’ ಸೀರಿಯಲ್​ನಿಂದ ಹೊರಬಂದಿದ್ದಾರೆ!

‘ಸಾವಿತ್ರಮ್ಮಗಾರಿಕಿ ಅಬ್ಬಾಯಿ’ ಧಾರಾವಾಹಿಯ 500ಕ್ಕೂ ಹೆಚ್ಚು ಎಪಿಸೋಡ್​ಗಳಲ್ಲಿ ಚಂದನ್​ ನಟಿಸಿದ್ದಾರೆ. ಆ ಧಾರಾವಾಹಿಯಲ್ಲಿ ಈಗ ಅವರ ಪಾತ್ರ ಅಂತ್ಯವಾಗುತ್ತಿದೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಚಂದನ್​ ಟಿವಿ9 ಕನ್ನಡ ಡಿಜಿಟಲ್​​ಗೆ ಮಾಹಿತಿ ನೀಡಿದ್ದಾರೆ. ಮದುವೆ ಆಗಬೇಕು ಎಂದು ಅವರು ನಿರ್ಧರಿಸಿದ್ದಾರೆ. ಹಾಗಾದರೆ ಅವರನ್ನು ಕೈ ಹಿಡಿಯುವ ಹುಡುಗಿ ಯಾರು ಎಂಬ ಪ್ರಶ್ನೆ ಈಗ ಉದ್ಭವ ಆಗಿದೆ. ನಟಿ ಕವಿತಾ ಗೌಡ ಇರಬಹುದಾ ಎನ್ನುವ ಅನುಮಾನ ಕೂಡ ಮೂಡಿದೆ.

‘ಲಕ್ಷ್ಮೀ ಬಾರಮ್ಮ’ ಸೀರಿಯಲ್​ ಕಾಲದಿಂದಲೂ ಕವಿತಾ ಗೌಡ ಮತ್ತು ಚಂದನ್​ ನಡುವೆ ಸ್ನೇಹ ಬೆಳೆದಿತ್ತು. ಅವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್​ ಕೂಡ ಆಗಾಗ ಕೇಳಿಬರುತ್ತಲೇ ಇತ್ತು. ಒಬ್ಬರು ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದರು. ಇಬ್ಬರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅನೇಕ ಫೋಟೋಗಳು ಇದಕ್ಕೆ ಸಾಕ್ಷಿ ಒದಗಿಸುತ್ತಿವೆ. ಆದರೆ ಯಾವತ್ತೂ ಕೂಡ ಚಂದನ್​ ಮತ್ತು ಕವಿತಾ ಈ ಬಗ್ಗೆ ಅಧಿಕೃತವಾಗಿ ಬಾಯಿ ಬಿಟ್ಟಿರಲಿಲ್ಲ.

ಚಂದನ್​ ಗುರುವಾರ (ಮಾ.11) ತೆಲುಗು ಸೀರಿಯಲ್​ಗೆ ಕೊನೇ ದಿನದ ಶೂಟಿಂಗ್​ ಮುಗಿಸಿಕೊಟ್ಟು ಬಂದಿದ್ದಾರೆ. ಯಾಕೆ ಎಂದು ಕೇಳಿದ್ದಕ್ಕೆ ಅವರು ಮದುವೆ ಮತ್ತು ಪರ್ಸನಲ್​ ಲೈಫ್​ನ ಕಾರಣ ನೀಡಿದ್ದಾರೆ. ‘ನಂಗೆ ಸ್ವಲ್ಪ ಫ್ರೀಡಂ ಬೇಕಾಗಿತ್ತು. ಮದುವೆ ಪ್ಲ್ಯಾನ್​ ಕೂಡ ನಡೆಯುತ್ತಿದೆ. ಪರ್ಸನಲ್​ ಜೀವನದ ಕಡೆಗೆ ಗಮನ ಹರಿಸಬೇಕು. ಇದನ್ನು ನಾನು ಧಾರಾವಾಹಿ ಟೀಮ್​ನವರಿಗೆ ಮೊದಲೇ ಹೇಳಿದ್ದೆ. ಅದಕ್ಕೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡರು’ ಎಂದು ಚಂದನ್ ಹೇಳಿದ್ದಾರೆ.

ಚಂದನ್​ ಲವ್​ ಮ್ಯಾರೇಜ್​ ಆಗುತ್ತಾರಾ? ಕವಿತಾ ಗೌಡ ಜೊತೆ ಹೊಸ ಜೀವನ ಆರಂಭಿಸುತ್ತಾರಾ? ಈ ಪ್ರಶ್ನೆಗಳಿಗೆ ಈಗಲೇ ಉತ್ತರ ಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಂತ ಅವರು ಎಲ್ಲವನ್ನೂ ಖಡಾಖಂಡಿತವಾಗಿ ನಿರಾಕರಿಸಿಲ್ಲ. ‘ಮದುವೆ ಆಗಬೇಕು ಅಂತ ನಿರ್ಧರಿಸಿರುವುದು ನಿಜ. ಸ್ವಲ್ಪ ದಿನ ಮುಂಚೆ ಆರಾಮಾಗಿ, ಸ್ಟೈಲಿಶ್​ ಆಗಿ ಓಡಾಡಿಕೊಂಡು ಇರೋಣ ಅಂದುಕೊಂಡಿದ್ದೇನೆ. ಸೀರಿಯಲ್​ ಮಾಡುವಾಗ ಆ ಪಾತ್ರಕ್ಕೆ ತಕ್ಕಂತೆ ನಾವು ಇರಬೇಕಾಗುತ್ತದೆ. ಅದರಿಂದ ಆಚೆ ಬಂದು ಇನ್ನು ಮೂರು-ನಾಲ್ಕು ತಿಂಗಳು ಆರಾಮಾಗಿದ್ದು, ಹೋಟೆಲ್​ ಬ್ಯುಸಿನೆಸ್​ ಇನ್ನಷ್ಟು ವಿಸ್ತರಿಸಿ, ಆಮೇಲೆ ಸಿನಿಮಾ ಕಡೆಗೆ ಗಮನ ಹರಿಸುತ್ತೇನೆ‘ ಎಂಬುದು ಚಂದನ್​ ಮಾತು.

ತಾವು ಮದುವೆ ಆಗುವ ಹುಡುಗಿ ಕವಿತಾ ಹೌದೋ ಅಲ್ಲವೋ ಎಂಬ ಬಗ್ಗೆ ಚಂದನ್​ ಹೌದು ಎಂದೂ ಹೇಳಿಲ್ಲ, ಅಲ್ಲ ಎಂದೂ ಹೇಳಿಲ್ಲ. ‘ಯೆಸ್​ ಎಂದರೆ ಅದೇ ಸುದ್ದಿ ಹಬ್ಬುತ್ತದೆ. ನೋ ಎಂದರೆ ಮತ್ತಿನ್ಯಾರು ಎಂಬ ಪ್ರಶ್ನೆ ಉದ್ಬವ ಆಗುತ್ತದೆ. ಈ ಎರಡೂ ಬೇಡ’ ಎನ್ನುವ ಮೂಲಕ ಕೌತುಕದ ಕಿಚ್ಚು ಹಚ್ಚಿದ್ದಾರೆ ಚಂದನ್​.

ಇದನ್ನೂ ಓದಿ: Roberrt Kannada Movie Review: ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us