‘ಏಕಲವ್ಯ’ ವೆಬ್ ಸರಣಿ ಘೋಷಣೆ; ಎಐನಲ್ಲಿ ಮೂಡಿ ಬರಲಿದೆ ಸೀರಿಸ್

ಮಹಾಭಾರತದ ವೀರ ಏಕಲವ್ಯನ ಕಥೆ ಈಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವೆಬ್ ಸರಣಿಯಾಗಿ ಮೂಡಿಬರುತ್ತಿದೆ. ಲಯನ್ಸ್‌ಗೇಟ್ ಪ್ಲೇ ಈ ಸರಣಿಯನ್ನು ಘೋಷಿಸಿದ್ದು, ಯುಗ್ ಆರ್.ಎಐ ಎಂಬ ಎಐ ನಟ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಭು ಪುರಿ ನಿರ್ದೇಶನದ ಈ ಸರಣಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

‘ಏಕಲವ್ಯ’ ವೆಬ್ ಸರಣಿ ಘೋಷಣೆ; ಎಐನಲ್ಲಿ ಮೂಡಿ ಬರಲಿದೆ ಸೀರಿಸ್
ಏಕಲವ್ಯ
Edited By:

Updated on: Nov 26, 2026 | 10:42 AM

ಮುಖ್ಯಾಂಶಗಳು

  • ಬಜೆಟ್ ಮಿತಿಗೆ ಬ್ರೇಕ್ ಹಾಕಿದ ಎಐ ತಂತ್ರಜ್ಞಾನ
  • ಯುಗ್ ಆರ್.ಎಐ ಫಸ್ಟ್ ಲುಕ್‌ಗೆ ಪ್ರೇಕ್ಷಕರು ಫಿದಾ
  • ಮುಂದಿನ ವರ್ಷ ಜಾಗತಿಕ ಮಟ್ಟದಲ್ಲಿ ಏಕಲವ್ಯನ ದರ್ಬಾರ್

ಪೌರಾಣಿಕ ಕಥೆಗಳ ಲೋಕದಲ್ಲಿ ಈಗ ಕೃತಕ ಬುದ್ಧಿಮತ್ತೆಯ ಹೊಸ ಕ್ರಾಂತಿ ಶುರುವಾಗಿದೆ. ಮಹಾಭಾರತದ ಅಪ್ರತಿಮ ಬಿಲ್ಗಾರ ಏಕಲವ್ಯನ ರೋಚಕ ಕಥೆ ಈಗ ತೆರೆಯ ಮೇಲೆ ಬರಲು ಸಜ್ಜಾಗಿದೆ. ವಿಶೇಷವೆಂದರೆ ಈ ಸಂಪೂರ್ಣ ಸರಣಿಯನ್ನು ಎಐ ತಂತ್ರಜ್ಞಾನದ ಮೂಲಕವೇ ನಿರ್ಮಿಸಲಾಗುತ್ತಿದೆ. ಲಯನ್ಸ್‌ಗೇಟ್ ಪ್ಲೇ ಈ ಬೃಹತ್ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದೆ.

ಈ ಸರಣಿಯಲ್ಲಿ ಏಕಲವ್ಯನ ಪಾತ್ರಕ್ಕೆ ‘ಯುಗ್ ಆರ್.ಎಐ’ ಎಂಬ ಎಐ ನಟನನ್ನು ಆಯ್ಕೆ ಮಾಡಲಾಗಿದೆ. ಸೂರ್ಯನ ಬೆಳಕಿನ ಹಿನ್ನೆಲೆಯಲ್ಲಿ ಬಿಲ್ಲು ಮತ್ತು ಬಾಣಗಳನ್ನು ಹಿಡಿದಿರುವ ಯುಗ್ ಅವರ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ. ಇದು ಎಂಟು ಕಂತುಗಳ ಮೊದಲ ಸೀಸನ್ ಆಗಿರಲಿದೆ. ಮುಂದಿನ ದಿನಗಳಲ್ಲಿ ಇದನ್ನು ಬಹು-ಸೀಸನ್ ಫ್ರಾಂಚೈಸಿಯಾಗಿ ಬೆಳೆಸುವ ಗುರಿಯನ್ನು ಸಂಸ್ಥೆ ಹೊಂದಿದೆ.

Loading...

ಪೌರಾಣಿಕ ಕಥೆಗಳು ತುಂಬಾ ವಿಶಾಲವಾಗಿರುತ್ತವೆ. ಆದರೆ ಬಜೆಟ್ ಮಿತಿಯಿಂದಾಗಿ ಅವುಗಳನ್ನು ಟಿವಿ ಅಥವಾ ಒಟಿಟಿ ಪರದೆಗೆ ತರುವಾಗ ಕತ್ತರಿ ಹಾಕಲಾಗುತ್ತಿತ್ತು. ಈ ಸಮಸ್ಯೆಗೆ ಎಐ ತಂತ್ರಜ್ಞಾನವು ಹೊಸ ಪರಿಹಾರ ನೀಡಲಿದೆ ಎಂದು ಲಯನ್ಸ್‌ಗೇಟ್ ಪ್ಲೇ ಸಿಇಒ ರೋಹಿತ್ ಜೈನ್ ಹೇಳಿದ್ದಾರೆ. ಈ ಬೃಹತ್ ಯೋಜನೆಗಾಗಿ ಸಂಸ್ಥೆಯು ಗೂಗಲ್ ಕ್ಲೌಡ್ ಜೊತೆಗೆ ದೀರ್ಘಕಾಲದ ಒಪ್ಪಂದ ಮಾಡಿಕೊಂಡಿದೆ.

ಖ್ಯಾತ ನಿರ್ದೇಶಕ ವಿಭು ಪುರಿ ಈ ಸರಣಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗುರು ದ್ರೋಣಾಚಾರ್ಯರಿಂದ ತಿರಸ್ಕೃತಗೊಂಡು ಸ್ವಂತ ಪರಿಶ್ರಮದಿಂದ ಬಿಲ್ವಿದ್ಯೆ ಕಲಿತ ಏಕಲವ್ಯನ ಪಯಣವನ್ನು ಅವರು ತಮ್ಮ ನಿರ್ದೇಶನದ ಅನುಭವಕ್ಕೆ ಹೋಲಿಸಿದ್ದಾರೆ. ಬಜೆಟ್ ಮತ್ತು ಸಮಯದ ಮಿತಿಯಿಲ್ಲದೆ ಕಲ್ಪನೆಗೆ ತಕ್ಕಂತೆ ದೃಶ್ಯಗಳನ್ನು ಕಟ್ಟಿಕೊಡಲು ಎಐ ನೆರವಾಗಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಸದ್ಯ ಈ ಸರಣಿಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಮುಂದಿನ ವರ್ಷ ಲಯನ್ಸ್‌ಗೇಟ್ ಪ್ಲೇಯ ಹಿಂದಿ ಮತ್ತು ಪಂಜಾಬಿ ವಿಭಾಗವಾದ ‘ಟೈಗರ್ ಟಿವಿ’ಯಲ್ಲಿ ಇದು ಪ್ರೀಮಿಯರ್ ಆಗಲಿದೆ. ಇದರ ಜೊತೆಗೆ ಯುಕೆ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಿಗೂ ಈ ಸೇವೆಯನ್ನು ವಿಸ್ತರಿಸಲು ಸಂಸ್ಥೆ ಸಿದ್ಧತೆ ನಡೆಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us