ಈವರೆಗೆ ಮಿಸ್ ವರ್ಲ್ಡ್ ಆದ ಭಾರತದ ಆರು ಮಂದಿ ಇವರೇ ನೋಡಿ

Miss World: ಈ ವರ್ಷದ ಮಿಸ್​ ವರ್ಲ್ಡ್​ 2025 ಅನ್ನು ಭಾರತದಲ್ಲಿ ಆಯೋಜನೆ ಮಾಡಲಾಗಿದೆ. ಹೈದರಾಬಾದ್​ನಲ್ಲಿ ಸ್ಪರ್ಧೆ ನಡೆಯುತ್ತಿದೆ. ಇಂದು (ಮೇ 31) ಹೈದರಾಬಾದ್​ನಲ್ಲಿ ಫಿನಾಲೆ ನಡೆಯಲಿದೆ. ಈ ಬಾರಿ ಭಾರತದ ಸ್ಪರ್ಧಿ ಗೆದ್ದರೆ ದಾಖಲೆ ನಿರ್ಮಾಣ ಆಗಲಿದೆ. ಏಕೆಂದರೆ ಭಾರತ ಮತ್ತು ವೆನೆಜ್ಯುವೆಲಾ ತಲಾ ಆರು ಬಾರಿ ಗೆಲುವು ಕಂಡಿದೆ. ಈ ಬಾರಿ ಭಾರತ ಗೆದ್ದರೆ ಏಳು ಬಾರಿ ವಿನ್ ಆದಂತೆ ಆಗಲಿದೆ. ಹಾಗಾದರೆ ಭಾರತ ಗೆದ್ದ ಸ್ಪರ್ಧಿಗಳ ಪಟ್ಟಿಯನ್ನು ನೋಡೋಣ.

ಈವರೆಗೆ ಮಿಸ್ ವರ್ಲ್ಡ್ ಆದ ಭಾರತದ ಆರು ಮಂದಿ ಇವರೇ ನೋಡಿ
Miss World India
Updated By: ರಾಜೇಶ್ ದುಗ್ಗುಮನೆ

Updated on: Jun 01, 2025 | 3:24 PM

ಭಾರತವು ಮಿಸ್​ ವರ್ಲ್ಡ್​ 2025ನ ಹೋಸ್ಟ್ ಮಾಡುತ್ತಿದೆ. ಹೈದರಾಬಾದ್​ನಲ್ಲಿ ಸ್ಪರ್ಧೆ ನಡೆಯುತ್ತಿದೆ. ಇಂದು (ಮೇ 31) ಹೈದರಾಬಾದ್​ನಲ್ಲಿ ಫಿನಾಲೆ ನಡೆಯಲಿದೆ. ಈ ಬಾರಿ ಭಾರತ ಗೆದ್ದರೆ ದಾಖಲೆ ನಿರ್ಮಾಣ ಆಗಲಿದೆ. ಏಕೆಂದರೆ ಭಾರತ ಮತ್ತು ವೆನೆಜ್ಯುವೆಲಾ ತಲಾ ಆರು ಬಾರಿ ಗೆಲುವು ಕಂಡಿದೆ. ಈ ಬಾರಿ ಭಾರತ ಗೆದ್ದರೆ ಏಳು ಬಾರಿ ವಿನ್ ಆದಂತೆ ಆಗಲಿದೆ. ಹಾಗಾದರೆ ಭಾರತ ಗೆದ್ದ ಸ್ಪರ್ಧಿಗಳ ಪಟ್ಟಿಯನ್ನು ನೋಡೋಣ.

ವಿಶ್ವ ಸುಂದರಿ ಸ್ಪರ್ಧೆ 1951ರಲ್ಲಿ ಆರಂಭ ಆಯಿತು. ಭಾರತದ ಮೊದಲ ಬಾರಿಗೆ ವಿನ್ ಆಗಿದ್ದು 1966ರಲ್ಲಿ. ಭಾರತದ ರೀಟಾ ಫಾರಿಯಾ ಪೊವೆಲ್ ಅವರು ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಗೆದ್ದು ದಾಖಲೆ ಬರೆದರು. ಅವರು ಆಗ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದರು. ಈಗ ಅವರು ವೈದ್ಯರಾಗಿದ್ದಾರೆ.

ಆ ಬಳಿಕ 1994ರಲ್ಲಿ ಐಶ್ವರ್ಯಾ ರೈ ಅವರು ಮಿಸ್ ವರ್ಲ್ಡ್ ಆದರು. ಈ ಪಟ್ಟ ಅಲಂಕರಿಸಿದ ಭಾರತದ ಎರಡನೇ ಮಹಿಳೆ ಇವರು. ಮೊದಲ ಕಿರೀಟ್ ಬಂದು ಎರಡನೇ ಕಿರೀಟ ಬರಲು 28 ವರ್ಷಗಳ ಗ್ಯಾಪ್ ಆಯಿತು. ಹೀಗಾಗಿ, ಇಡೀ ದೇಶದಲ್ಲಿ ಹಬ್ಬದ ವಾತಾವರಣ ಇತ್ತು.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ವಿಶ್ವ ಸುಂದರಿ ಫೈನಲ್; ಗೆದ್ದವರಿಗೆ ಬಂಪರ್ ಆಫರ್

ಡಿಯಾನಾ ಹೇಡನ್ ಅವರು ಭಾರತದಿಂದ ಮಿಸ್​ ವರ್ಲ್ಡ್ ಆದ ಮೂರನೆ ಯುವತಿ. 1997ರಲ್ಲಿ ಇವರು ವಿನ್ ಆದರು. ಇವರು ಕ್ಲಾಸಿಕಲ್ ಡ್ಯಾನ್ಸರ್. ವೃತ್ತಿಯಲ್ಲಿ ಸಿವಿಲ್ ಇಂಜಿನಯರ್ ಆಗಿದ್ದರು. ಗೆದ್ದ ಬಳಿಕ ಅವರು ಟಿವಿ ಹಾಗೂ ಸಿನಿಮಾಗಳಲ್ಲಿ ನಟಿಸಿದರು. 1999ರಲ್ಲಿ ನಟಿ ಯುಕ್ತಾಗೆ ಈ ಪಟ್ಟ ಸಿಕ್ಕಿತು. 2000ನೇ ಇಸ್ವಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ವಿಶ್ವ ಸುಂದರಿ ಆದರು. ಆಗ ಅವರಿಗೆ ಇನ್ನೂ 18 ವರ್ಷ.

2017ರಲ್ಲಿ ಮಾನುಷಿ ಚಿಲ್ಲರ್ ಅವರು ಆರನೇ ಭಾರತೀಯಳಾಗಿ ಈ ಪಟ್ಟವನ್ನು ಅಲಂಕರಿಸಿದರು. ಈಗ ಅವರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ‘ಯಾವ ಕೆಲಸಕ್ಕೆ ಹೆಚ್ಚು ಸಂಬಳ ನೀಡಬೇಕು’ ಎಂದು ಕೇಳಿದಾಗ ಅವರು ‘ತಾಯಿ’ ಎಂದು ಹೇಳುವ ಮೂಲಕ ಎಲ್ಲರ ಮನ ಗೆದ್ದರು.

ಅಂದಹಾಗೆ, ಈ ಅವಾರ್ಡ್ ಸ್ಪರ್ಧೆಯಲ್ಲಿ ಕೇವಲ ಸೌಂದರ್ಯಕ್ಕೆ ಮಾತ್ರ ಬೆಲೆ ಕೊಡಲಾಗುವುದಿಲ್ಲ. ಯಾರು ಎಷ್ಟು ಚಾಣಾಕ್ಯತೆಯಿಂದ ಉತ್ತರಿಸುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Sat, 31 May 25