ಗುಟ್ಟಾಗಿ ಮದುವೆ ಆದರೇ ಶ್ರೀಲೀಲಾ? ಇವು ಅರಿಶಿಣ ಶಾಸ್ತ್ರದ ಚಿತ್ರಗಳಾ?
Sreeleela: ಇತ್ತೀಚೆಗಷ್ಟೆ ಬಾಲಿವುಡ್ಗೆ ಕಾಲಿರಿಸಿರುವ ಶ್ರೀಲೀಲಾ ಹೆಸರು ನಟ ಕಾರ್ತಿಕ್ ಆರ್ಯನ್ ಜೊತೆ ಕೇಳಿ ಬರುತ್ತಿದೆ. ಕಾರ್ತಿಕ್ ಆರ್ಯನ್ ಕುಟುಂಬದೊಡನೆ ಶ್ರೀಲೀಲಾ ಬಲು ಆಪ್ತವಾಗಿದ್ದಾರೆ. ಇದೀಗ ಶ್ರೀಲೀಲಾ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದು, ಚಿತ್ರ ನೋಡಿದ ಹಲವರು ಶ್ರೀಲೀಲಾ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ನಟಿ ಶ್ರೀಲೀಲಾ (Sreeleela) ಇತ್ತೀಚೆಗಷ್ಟೆ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಅಲ್ಲಿನ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಜೊತೆಗೆ ‘ಆಶಿಖಿ 3’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಇದರ ನಡುವೆ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ನಡುವೆ ಡೇಟಿಂಗ್ ರೂಮರ್ಗಳು ಸಹ ಹಬ್ಬಿವೆ. ಕಾರ್ತಿಕ್ ಆರ್ಯನ್ ಮನೆಯಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು, ಕಾರ್ತಿಕ್ ಆರ್ಯನ್ ತಾಯಿ ಸಹ, ನಮಗೆ ಡಾಕ್ಟರ್ ಸೊಸೆ ಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಹೇಳಿದ್ದರು. ಇದೆಲ್ಲದರ ನಡುವೆ ಇದೀಗ ಶ್ರೀಲೀಲಾ ಹಂಚಿಕೊಂಡಿರುವ ಚಿತ್ರಗಳು, ಅನುಮಾನಗಳಿಗೆ ಭಾರಿ ಪುಷ್ಠಿ ನೀಡಿವೆ.
ಶ್ರೀಲೀಲಾ, ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ. ಶ್ರೀಲೀಲಾಗೆ ಕೆಲವು ಮುತ್ತೈದೆಯರು ಅರಿಶಿಣ ಹಚ್ಚುತ್ತಿರುವ ಚಿತ್ರಗಳು ಅವಾಗಿವೆ. ಮೂರು ಚಿತ್ರಗಳನ್ನು ಶ್ರೀಲೀಲಾ ಹಂಚಿಕೊಂಡಿದ್ದು, ಇವು ಅರಿಶಿಣ ಶಾಸ್ತ್ರದ ಅಥವಾ ನಿಶ್ಚಿತಾರ್ಥ ಶಾಸ್ತ್ರದ ಚಿತ್ರಗಳಂತೆ ಕಾಣುತ್ತಿವೆ. ಚಿತ್ರಗಳಲ್ಲಿ ಶ್ರೀಲೀಲಾರ ಕೆನ್ನೆ ಮೇಲೆ ಢಾಳಾಗಿ ಅರಿಶಿಣ ಹಚ್ಚಲಾಗಿದೆ. ಅವರ ಭುಜದ ಮೇಲೂ ಅರಿಶಿಣ ಹಚ್ಚಲಾಗಿದೆ. ಅರಿಶಿನ ಹಚ್ಚುತ್ತಿರುವ ಮಹಿಳೆಯರ ಕೈಯಲ್ಲಿ ಅರಿಶಿಣ-ಕುಂಕುಮದ ಬಟ್ಟನಿನ ಜೊತೆಗೆ ವಿಳ್ಯೆದ ಎಲೆ, ಬಳೆಗಳು ಸಹ ಕಾಣುತ್ತಿವೆ.
ಇನ್ನು ಶ್ರೀಲೀಲಾಗೆ ಅರಿಶಿಣ ಹಂಚುತ್ತಿರುವ ಮಹಿಳೆಯರು ನಟಿಯರಂತೂ ಅಲ್ಲ ಎಂಬುದು ಸಹ ಗೊತ್ತಾಗುತ್ತಿದೆ. ಇದು ಸಿನಿಮಾ ಶೂಟಿಂಗ್ ಚಿತ್ರಗಳಲ್ಲ ಎಂದು ಅಂದಾಜಿಸಬಹುದಾಗಿದೆ. ಹಾಗಿದ್ದರೆ ಇದು ಯಾವ ಶಾಸ್ತ್ರ? ನೆಟ್ಟಿಗರಂತೂ ಶ್ರೀಲೀಲಾರ ನಿಶ್ಚಿತಾರ್ಥ ಶಾಸ್ತ್ರದ ಚಿತ್ರಗಳೇ ಇವೆಂದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಮದುವೆಗೆ ಮುಂಚೆ ನಡೆಯುವ ಅರಿಶಿಣ ಶಾಸ್ತ್ರ ಎನ್ನುತ್ತಿದ್ದಾರೆ. ಇನ್ನು ಕೆಲವರು ಶ್ರೀಲೀಲಾ, ಇಷ್ಟು ಬೇಗ ಮದುವೆ ಆಗುವುದಿಲ್ಲ, ಯಾವುದೋ ವಿಶೇಷ ಪೂಜೆಯ ಶಾಸ್ತ್ರವಿರಬೇಕು ಎಂದು ಸಹ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾಕ್ಕಾಗಿ ಇತರೆ ಸಿನಿಮಾಗಳ ಬದಿಗೊತ್ತಿದ ಶ್ರೀಲೀಲಾ
ಶ್ರೀಲೀಲಾ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಎಂಬಿಬಿಎಸ್ ಮುಗಿಸಿರುವ ಈ ನಟಿ, ಸಂಪೂರ್ಣವಾಗಿ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾಲಿವುಡ್ನ ಮೂರು ಸಿನಿಮಾಗಳಿಗೆ ಈಗಾಗಲೇ ಸಹಿ ಮಾಡಿದ್ದಾರೆ. ‘ಆಶಿಖಿ 3’, ಸೈಫ್ ಅಲಿ ಖಾನ್ ಪುತ್ರನ ಮುಂದಿನ ಸಿನಿಮಾ ಹಾಗೂ ಕರಣ್ ಜೋಹರ್ ನಿರ್ಮಾಣ ಮಾಡುತ್ತಿರುವ ‘ದೋಸ್ತಾನ 2’ ಸಿನಿಮಾನಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಇನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆಗೆ ಒಂದು ಸಿನಿಮಾ, ರವಿತೇಜ ಜೊತೆಗೆ ಹೊಸ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಶಿವಕಾರ್ತಿಕೇಯನ್ ನಟಿಸಿ ಸುಧಾ ಕೊಂಗರ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಇಷ್ಟೋಂದು ಸಿನಿಮಾಗಳು ಕೈಯಲ್ಲಿದ್ದು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಈ ಸಮಯದಲ್ಲಿ ಶ್ರೀಲೀಲಾ ಈಗ ಮದುವೆ ಆಗುತ್ತಾರೆಯೇ ಎಂಬ ಅನುಮಾನವೂ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




