ಸ್ಪಿರಿಟ್’ ವಿವಾದ: ಸಂದೀಪ್ ರೆಡ್ಡಿ ವಂಗ ಬಳಿಕ ತಮ್ಮ ವರ್ಷನ್ ಹೇಳಿದ ದೀಪಿಕಾ ಪಡುಕೋಣೆ
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಮುಂಬರುವ ಚಿತ್ರ 'ಸ್ಪಿರಿಟ್' ನಲ್ಲಿ ನಾಯಕಿಯಾಗಿ ಮೊದಲು ಆಯ್ಕೆಯಾಗಿದ್ದ ದೀಪಿಕಾ ಪಡುಕೋಣೆ ಹೊರ ನಡೆದಿದ್ದಾರೆ. ಚಿತ್ರದ ಕಥಾವಸ್ತು ಸೋರಿಕೆಯಾದ ಆರೋಪದ ಬಗ್ಗೆ ದೀಪಿಕಾ ಮತ್ತು ಸಂದೀಪ್ ವಿಭಿನ್ನ ಆವೃತ್ತಿಗಳನ್ನು ಹೇಳಿದ್ದಾರೆ. ಈಗ ತೃಪ್ತಿ ದಿಮ್ರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಪ್ಯಾನ್ ಇಂಡಿಯಾ (Pan India) ಸ್ಟಾರ್ ಪ್ರಭಾಸ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ‘ಸ್ಪಿರಿಟ್’ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕಿ ಆಯ್ಕೆ ವಿಚಾರ ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾಗೆ ಮೊದಲು ದೀಪಿಕಾ ಆಯ್ಕೆ ಆಗಿದ್ದರು ಮತ್ತು ಚಿತ್ರದಿಂದ ಹೊರ ನಡೆದರು. ಆ ಬಳಿಕ ಕಥೆ ಲೀಕ್ ಮಾಡಿದ ಆರೋಪ ಇದೆ. ಇದು ಸಂದೀಪ್ ರೆಡ್ಡಿ ವಂಗ ವರ್ಷನ್. ಈಗ ದೀಪಿಕಾ ಪಡುಕೋಣೆಯ ವರ್ಷನ್ ಸಿಕ್ಕಿದೆ. ಅವರು ಇತ್ತೀಚೆಗೆ ಮಾತನಾಡಿ ತಮ್ಮ ವರ್ಷನ್ ಹೇಳಿದ್ದಾರೆ.
ಸಂದೀಪ್ ಅವರ ಮುಂಬರುವ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ಮೊದಲ ಬಾರಿಗೆ ಪ್ರಭಾಸ್ ಪವರ್‌ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಅಭಿಮಾನಿಗಳು ‘ಸ್ಪಿರಿಟ್’ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಚಿತ್ರ ಇನ್ನೂ ಸೆಟ್ಟೇರಿಲ್ಲ. ಅದಕ್ಕೂ ಮೊದಲೇ ವಿವಾದ ಶುರುವಾಗಿದೆ. ಚಿತ್ರದಲ್ಲಿ ಪ್ರಭಾಸ್ ಎದುರು ತೃಪ್ತಿ ದಿಮ್ರಿ ನಟಿಸಲಿದ್ದಾರೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಇದು ಈ ಚಿತ್ರದ ನಾಯಕಿಯ ಸುತ್ತಲಿನ ವಿವಾದವನ್ನು ಬೆಳಕಿಗೆ ತಂದಿತು.
ತೃಪ್ತಿ ಅವರನ್ನು ನಾಯಕಿಯಾಗಿ ಘೋಷಿಸಿದ ನಂತರ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಟ್ವೀಟ್ ಸಂಚಲನ ಸೃಷ್ಟಿಸಿತು. ಸ್ಪಿರಿಟ್ ಚಿತ್ರದ ದೃಶ್ಯಗಳ ವಿವರ ಸೋರಿಕೆ ಬಗ್ಗೆ ಸಂದೀಪ್ ರೆಡ್ಡಿ ಗಂಭೀರವಾಗಿ ಹೇಳಿಕೆ ನೀಡಿದ್ದಾರೆ. ಇದು ಡರ್ಟಿ ಪಿಆರ್ ಗೇಮ್ಸ್ ಎಂದು ಕರೆದರು.
ದೀಪಿಕಾ ಹೇಳೋದು ಏನು?
ಈಗ ದೀಪಿಕಾರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ದೀಪಿಕಾ, ‘ಒಬ್ಬ ನಿರ್ದೇಶಕ ನನಗೆ ಒಂದು ಸಿನಿಮಾ ಆಫರ್ ಕೊಟ್ಟರು. ಅದು ನನಗೆ ಸೃಜನಾತ್ಮಕವಾಗಿ ಇಷ್ಟವಾಯಿತು. ಸಂಭಾವನೆಯ ವಿಷಯಕ್ಕೆ ಬಂದಾಗ, ನಾನು ಇಷ್ಟು ಹಣ ತೆಗೆದುಕೊಳ್ಳುತ್ತೇನೆ ಎಂದು ಹೇಳಿದೆ. ಆದರೆ ನಾಯಕನಿಗೆ ಹೆಚ್ಚು ಖರ್ಚು ಮಾಡುತ್ತಿರುವುದರಿಂದ ನಾವು ಅಷ್ಟು ಹಣ ಭರಿಸಲಾಗುವುದಿಲ್ಲ ಎಂದು ಅವರು ಹೇಳಿದರು. ನಾನು ಟಾಟಾ ಎಂದು ವಿದಾಯ ಹೇಳಿದೆ’ ಎಂದಿದ್ದಾರೆ ದೀಪಿಕಾ.
‘ನನ್ನ ಟ್ರ್ಯಾಕ್ ರೆಕಾರ್ಡ್ ನನಗೆ ತಿಳಿದಿದೆ. ನನ್ನ ಮೌಲ್ಯ ನನಗೆ ತಿಳಿದಿದೆ. ಆ ನಾಯಕನ ಚಿತ್ರಗಳು ನನ್ನ ಚಿತ್ರಗಳಷ್ಟು ಹೆಚ್ಚು ಕಲೆಕ್ಷನ್ ಮಾಡುತ್ತಿಲ್ಲ ಎಂದು ನನಗೆ ತಿಳಿದಿದೆ’ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಅಭಿಮಾನಿಗಳು ಈಗ ದೀಪಿಕಾ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಅವರ ಕಾಮೆಂಟ್‌ಗಳಿಗಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಕೆಲವರು ದೀಪಿಕಾ ಪರ ಬ್ಯಾಟ್ ಬೀಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



