ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​

ಕರಣ್ ಜೋಹರ್ ಹಾಗೂ ನಟ ಕಾರ್ತಿಕ್​ ಆರ್ಯನ್​ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದು ಮಿತಿಮೀರಿದ್ದು, ಇನ್ನೆಂದಿಗೂ ನಮ್ಮ ಪ್ರೊಡಕ್ಷನ್​​ನಲ್ಲಿ ಸ್ಥಾನವಿಲ್ಲ ಎನ್ನುವ ಖಡಕ್ ಸಂದೇಶವನ್ನು ಕರಣ್ ರವಾನಿಸಿದ್ದರು.

ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​
ಕರಣ್​ ಜೋಹರ್

Updated on: Apr 24, 2021 | 8:56 PM

ಬಾಲಿವುಡ್​ನ ಹೆಸರಾಂತ ನಿರ್ಮಾಪಕರ ಸಾಲಿನಲ್ಲಿ ಕರಣ್​ ಜೋಹರ್​ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸ್ಟಾರ್​ ನಟರ ಮಕ್ಕಳ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವ ಸಂಪ್ರದಾಯವನ್ನು ಅವರು ಈ ಮೊದಲಿನಿಂದಲೂ ನಡೆಸಿಕೊಂಡೇ ಬಂದಿದ್ದಾರೆ. ಇತ್ತೀಚೆಗೆ, ಕಾರ್ತಿಕ್​ ಆರ್ಯನ್​ ಅವರ ಜತೆ ಮುಂದೆಂದಿಗೂ ಕೆಲಸ ಮಾಡುವುದಿಲ್ಲ ಎಂದು ಕರಣ್​ ಒಡೆತನದ ಧರ್ಮ ಪ್ರೊಡಕ್ಷನ್​ ಘೋಷಣೆ ಮಾಡಿದೆ ಎನ್ನುವ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ಕರಣ್​​ಗೆ ಶಾಕ್​ ಒಂದು ಎದುರಾಗಿದೆ.

2020ರ ಅಕ್ಟೋಬರ್​ ಸಮಯ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್​ ಬಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿತ್ತು. ಕರಣ್​ ಅವರ ಧರ್ಮ ಪ್ರೊಡಕ್ಷನ್​ ಸಹಯೋಗದೊಂದಿಗೆ ಲೈಕಾ ಬಾಲಿವುಡ್​ಗೆ ಎಂಟ್ರಿ ಕೊಡುವುದರಲ್ಲಿತ್ತು.

ಈ ಮೊದಲು ಧರ್ಮ ಪ್ರೊಡಕ್ಷನ್​ ಫೋಕ್ಸ್​​ ಸ್ಟಾರ್​ ಸ್ಟುಡಿಯೋ ಜತೆ ಸಹಯೋಗ ಹೊಂದಿತ್ತು. ಆದರೆ, ಯಾವಾಗ ಫಾಕ್ಸ್​​ ಸ್ಟಾರ್​ ಸ್ಟುಡಿಯೋವನ್ನು ವಾಲ್ಟ್​​ ಡಿಸ್ನಿ ಖರೀದಿ ಮಾಡಿತ್ತೋ ಆಗ ಕರಣ್​ ಸ್ಟುಡಿಯೋ ಪಾರ್ಟ್ನರ್​ ಹುಡುಕೋಕೆ ಆರಂಭಿಸಿದ್ದರು. ಈ ವೇಳೆ ಸಹಯೋಗಕ್ಕೆ ಮುಂದಾಗಿದ್ದು ಲೈಕಾ.

ಎಲ್ಲವೂ ಅಂತಿಮ ಆಗುವ ಹಂತದಲ್ಲಿತ್ತು. ಆದರೆ, ಕೊನೆಯ ಹಂತದಲ್ಲಿ ಈ ಒಪ್ಪಂದ ಮುರಿದು ಬಿದ್ದಿದೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ, ಭವಿಷ್ಯದಲ್ಲಿ ಈ ಡೀಲ್​ ಆಗುವುದೇ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕರಣ್​ ನಿರ್ಮಾಣದ ಸಾಕಷ್ಟು ಸಿನಿಮಾಗಳು ಶೂಟಿಂಗ್​ ಹಂತದಲ್ಲಿವೆ. ಶೇರ್​ಶಾ, ದೋಸ್ತಾನಾ 2, ಜುಗ್​ ಜುಗ್​ ಜೀಯೋ, ಲೈಗರ್​ ಸೇರಿ ಸಾಕಷ್ಟು ಸಿನಿಮಾಗಳಿಗೆ ಧರ್ಮಾ ಪ್ರೊಡಕ್ಷನ್​ ಬಂಡವಾಳ ಹೂಡುತ್ತಿದೆ. ಇದಕ್ಕೆ ಸ್ಟುಡಿಯೋ ಒಂದರ ಬೆಂಬಲ ಬೇಕೆಬೇಕು. ಹೀಗಾಗಿ, ಧರ್ಮ ಪ್ರೊಡಕ್ಷನ್​ ಯಾರ ಜತೆ ಒಪ್ಪಂದ ಮಾಡಿಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ.

ಕರಣ್ ಜೋಹರ್ ಹಾಗೂ ನಟ ಕಾರ್ತಿಕ್​ ಆರ್ಯನ್​ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದು ಮಿತಿಮೀರಿದ್ದು, ಇನ್ನೆಂದಿಗೂ ನಮ್ಮ ಪ್ರೊಡಕ್ಷನ್​​ನಲ್ಲಿ ಸ್ಥಾನವಿಲ್ಲ ಎನ್ನುವ ಖಡಕ್ ಸಂದೇಶವನ್ನು ಕರಣ್ ರವಾನಿಸಿದ್ದರು. ದೋಸ್ತಾನಾ 2 ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು.

ಇದನ್ನೂ ಓದಿ: ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ

ನಮ್ಮ ಪ್ರೊಡಕ್ಷನ್​ ಹೌಸ್​​ನಲ್ಲಿ ನಿನಗೆ ಅವಕಾಶ ಇಲ್ಲ; ಸ್ಟಾರ್​ ನಟನನ್ನೇ ಹೊರ ದಬ್ಬಿದ ಕರಣ್​ ಜೋಹರ್

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us