ನಮ್ಮ ಪ್ರೊಡಕ್ಷನ್​ ಹೌಸ್​​ನಲ್ಲಿ ನಿನಗೆ ಅವಕಾಶ ಇಲ್ಲ; ಸ್ಟಾರ್​ ನಟನನ್ನೇ ಹೊರ ದಬ್ಬಿದ ಕರಣ್​ ಜೋಹರ್

ಕಾರ್ತಿಕ್​ ಆರಂಭದಲ್ಲಿ ಡೇಟ್ಸ್​ ಸಮಸ್ಯೆ ಎಂದು ಶೂಟಿಂಗ್​ಗೆ ಬರುತ್ತಿರಲಿಲ್ಲ. ನಂತರ ಕತೆ ವಿಚಾರಕ್ಕೆ ನಿರ್ಮಾಪಕರಿಗೂ ಹಾಗೂ ಕಾರ್ತಿಕ್​ಗೆ ಭಿನ್ನಾಭಿಪ್ರಾಯಗಳು ಮೂಡಲು ಆರಂಭವಾದವು.

ನಮ್ಮ ಪ್ರೊಡಕ್ಷನ್​ ಹೌಸ್​​ನಲ್ಲಿ ನಿನಗೆ ಅವಕಾಶ ಇಲ್ಲ; ಸ್ಟಾರ್​ ನಟನನ್ನೇ ಹೊರ ದಬ್ಬಿದ ಕರಣ್​ ಜೋಹರ್
ಕರಣ್​ ಜೋಹರ್

ನಿರ್ಮಾಪಕರು ಹಾಗೂ ನಟರ ನಡುವೆ ಮನಸ್ತಾಪಗಳು ಮೂಡೋದು ಸಹಜ. ಕೆಲವೊಂದು ಜಗಳಗಳು ಇಂಡಸ್ಟ್ರಿಯಲ್ಲೇ ಹುಟ್ಟಿ, ಅಲ್ಲಿಯೇ ಕಾಣೆಯಾಗುತ್ತವೆ. ಆದರೆ, ಕೆಲವು ಮನಸ್ತಾಪಗಳು ಮಾತ್ರ ಬಟಾಬಯಲಾಗುತ್ತವೆ. ಈಗ ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ಹಾಗೂ ಬಾಲಿವುಡ್​ನ ಖ್ಯಾತ ನಟನ ನಡುವೆ ಸಂಘರ್ಷ ಏರ್ಪಟ್ಟಿದೆ. ಇದು ಮಿತಿಮೀರಿದ್ದು, ಇನ್ನೆಂದಿಗೂ ನಮ್ಮ ಪ್ರೊಡಕ್ಷನ್​ನಲ್ಲಿ ಸ್ಥಾನವಿಲ್ಲ ಎನ್ನುವ ಖಡಕ್​ ಸಂದೇಶವನ್ನು ಕರಣ್​ ರವಾನಿಸಿದ್ದಾರೆ. ಈ ಜಗಳ ಏರ್ಪಟ್ಟಿದ್ದು ಕರಣ್​ ಜೋಹರ್​ ಹಾಗೂ ಕಾರ್ತಿಕ್​ ಆರ್ಯನ್​ ನಡುವೆ. ದೋಸ್ತಾನ 2 ಸಿನಿಮಾಗೆ ಕಾರ್ತಿಕ್​ ಹೀರೋ ಆಗಿದ್ದರು. 2019ರಲ್ಲೇ ಈ ಬಗ್ಗೆ ಘೋಷಣೆ ಆಗಿತ್ತು. ಆದರೆ, ಕೊರೊನಾ ವೈರಸ್​ ಕಾಣಿಸಿಕೊಂಡಿದ್ದರಿಂದ ಸಿನಿಮಾ ಕೆಲಸಗಳು ಮುಂದೂಡಲ್ಪಟ್ಟಿದ್ದವು. ನಂತರ ಕಾರ್ತಿಕ್​ ಸಿನಿಮಾದಿಂದಲೇ ಹೊರ ಬಂದಿದ್ದರು. ಈಗ ಕೇಳಿ ಬರುತ್ತಿರುವ ಮಾಹಿತಿ ಏನೆಂದರೆ, ಕಾರ್ತಿಕ್​ ಆರ್ಯನ್​ ಜತೆ ಕರಣ್​ ಒಡೆತನದ ಧರ್ಮ ಪ್ರೊಡಕ್ಷನ್​ ಇನ್ನೆಂದೂ ಕೆಲಸ ಮಾಡದಿರಲು ನಿರ್ಧರಿಸಿದೆ.

ಕಾರ್ತಿಕ್​ ಆರಂಭದಲ್ಲಿ ಡೇಟ್ಸ್​ ಸಮಸ್ಯೆ ಎಂದು ಶೂಟಿಂಗ್​ಗೆ ಬರುತ್ತಿರಲಿಲ್ಲ. ನಂತರ ಕತೆ ವಿಚಾರಕ್ಕೆ ನಿರ್ಮಾಪಕರಿಗೂ ಹಾಗೂ ಕಾರ್ತಿಕ್​ಗೆ ಭಿನ್ನಾಭಿಪ್ರಾಯಗಳು ಮೂಡಲು ಆರಂಭವಾದವು. ಕಾರ್ತಿಕ್​ ಮೊದಲು ರಾಮ್​ ಮಾಧ್ವಾನಿ ಅವರ ಧಮಾಕಾ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚು ಆಸಕ್ತಿ ತೋರಿದ್ದರು. ಇದು ಕರಣ್ ಕೋಪಕ್ಕೆ ಕಾರಣವಾಗಿದೆ. ಕೊನೆಗೆ ಕಾರ್ತಿಕ್​ ಅವರನ್ನು ಸಿನಿಮಾದಿಂದಲೇ ಕೈ ಬಿಡಲು ನಿರ್ಧರಿಸಲಾಗಿದೆ.

ಕಾರ್ತಿಕ್​ ಆರ್ಯನ್​

ಈ ವಿಚಾರದ ಬಗ್ಗೆ ಕೆಲವು ವಾರಗಳ ಕಾಲ ಕಾರ್ತಿಕ್​ ಹಾಗೂ ಕರಣ್​ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಕೊನೆಗೆ ಇಬ್ಬರ ನಡುವಿನ ಗೆಳೆತನ ಸಂಪೂರ್ಣವಾಗಿ ಮುರಿದು ಬಿದ್ದಿದೆ ಎನ್ನಲಾಗಿದೆ. ಈ ವಿಚಾರ ಸದ್ಯ ಬಾಲಿವುಡ್​ ಅಂಗಳದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ಸೋತು ಸುಣ್ಣವಾಗಿರುವ ಶಾರುಖ್​ ಖಾನ್​ಗೆ ಈಗ ಸಿಗುತ್ತಿರುವ ಸಂಭಾವನೆ ಎಷ್ಟು?

ಕ್ಷಮಿಸಿ, ನಾನು ಸಂಭಾವನೆ ಪಡೆಯಲ್ಲ; ಶಾರುಖ್​ಗಾಗಿ ಸಲ್ಮಾನ್​ ಹೀಗೊಂದು ತ್ಯಾಗ!

Published On - 4:54 pm, Fri, 16 April 21

Click on your DTH Provider to Add TV9 Kannada