ಸೆಲೆಬ್ರಿಟಿಗಳು ಧರಿಸುವ ದುಬಾರಿ ಬೆಲೆಯ ಬಟ್ಟೆ ಅಭಿಮಾನಿಗಳ ಕಣ್ಣರಳಿಸುತ್ತದೆ. ಸೆಲೆಬ್ರಿಟಿಗಳು ಧರಿಸಿಸೋ ವಾಚ್, ಅವರ ಜಿಮ್ ಸ್ಯೂಟ್, ಮಾಸ್ಕ್ ಹೀಗೆ ಎಲ್ಲದರ ಬೆಲೆಯನ್ನೂ ಅಭಿಮಾನಿಗಳು ಪತ್ತೆ ಹಚ್ಚುತ್ತಾರೆ. ಈಗ ನಟಿ ಮಾಧುರಿ ದೀಕ್ಷಿತ್ ಲೆಹೆಂಗಾ ಚೋಲಿ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಬಟ್ಟೆಯ ಬೆಲೆ ಕೇಳಿದ ಅಭಿಮಾನಿಗಳು ಹೌಹಾರಿದ್ದಾರೆ.
ಮಾಧುರಿ ದೀಕ್ಷಿತ್ ಆಗಸ ನೀಲಿ ಬಣ್ಣದ ಲೆಹೆಂಗಾ ತೊಟ್ಟು ಫೋಟೋಶೂಟ್ ಮಾಡಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು, ಚೆಂದವಾದ ಕ್ಯಾಪ್ಶನ್ ಕೂಡ ನೀಡಿದ್ದಾರೆ. ಕತ್ತಿಗೆ ಒಂದು ಸುಂದರವಾದ ನೆಕ್ಪೀಸ್ ಧರಿಸಿದ್ದಾರೆ. ಇನ್ನು ಅವರ ಇಯರ್ಯಿಂದ, ಬೆರಳಿಗೆ ಹಾಕಿಕೊಂಡಿರುವ ಉಂಗುರವೂ ಅಭಿಮಾನಿಗಳ ಗಮನ ಸೆಳೆದಿದೆ.
ಇನ್ನು ಕೆಲ ಯುವತಿಯರಿಗೆ ಮಾದುರಿ ದೀಕ್ಷಿತ್ ಧರಿಸಿದ ಬಟ್ಟೆ ಮೇಲೆ ಮನಸಾಗಿದೆ. ಕಡಿಮೆ ಬೆಲೆಯದ್ದಾದರೆ ತಾವೂ ಒಂದು ಖರೀದಿಸೋಣ ಎಂದು ಆನ್ಲೈನ್ನಲ್ಲಿ ಇದರ ಬೆಲೆಗಾಗಿ ಹುಡುಕಾಟ ನಡೆಸಿದ್ದಾರೆ. ಆಗ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಈ ಲೆಹೆಂಗಾ ಬೆಲೆ ಒಂದಲ್ಲ, ಎರಡಲ್ಲ ಬರೋಬ್ಬರಿ 72 ಸಾವಿರ ರೂಪಾಯಿ.
ಈ ಬೆಲೆಯನ್ನು ನೋಡಿದ ಅಭಿಮಾನಿಗಳು ಹೌಹಾರಿದ್ದಾರೆ. ಅಷ್ಟೇ ಅಲ್ಲ, ಅನೇಕರು ನಮ್ಮ ಮೂರು ತಿಂಗಳ ವೇತನ ಸೇರಿಸಿದರೂ ಈ ಬಟ್ಟೆ ಖರೀದಿಸೋಕಾಗಲ್ಲ ಎಂದು ಕಮೆಂಟ್ ಮಾಡಿದ್ದಾರೆ.
1984ರಲ್ಲಿ ಅಬೋದ್ ಸಿನಿಮಾ ಮೂಲಕ ಮಾಧುರಿ ದೀಕ್ಷಿತ್ ಅವರು ಬಾಲಿವುಡ್ಗೆ ಕಾಲಿಟ್ಟರು. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದರು. ಆಗ ಮಾಧುರಿ ವಯಸ್ಸು ಕೇವಲ 17. ನಂತರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ‘ತೇಜಾಬ್’ ಸಿನಿಮಾ ಮೂಲಕ. ಆ ಚಿತ್ರದ ‘ಏಕ್ ದೋ ತೀನ್..’ ಹಾಡು ಸೂಪರ್ ಹಿಟ್ ಆಯಿತು. ಆ ಮೂಲಕ ಮಾಧುರಿ ದೀಕ್ಷಿತ್ ದೇಶಾದ್ಯಂತ ಖ್ಯಾತಿ ಗಳಿಸಿದರು. ಡಾನ್ಸ್ ದೀವಾನೆ 3ನಲ್ಲಿ ಅವರು ಜಡ್ಜ್ ಆಗಿದ್ದಾರೆ. 2019ರಲ್ಲಿ ತೆರೆಗೆ ಬಂದ ಕಳಂಕ್ ಅವರ ಕೊನೆಯ ಚಿತ್ರ.
ಇದನ್ನೂ ಓದಿ: Happy Birthday Madhuri Dixit: ಮಾಧುರಿ ದೀಕ್ಷಿತ್ ಜನ್ಮದಿನ; ‘ಏಕ್ ದೋ ತೀನ್’ ಸುಂದರಿಗೆ ಈಗ ಎಷ್ಟು ವರ್ಷ?
Published On - 5:52 pm, Wed, 2 June 21