ರಾಜಮೌಳಿ-ಮಹೇಶ್ ಬಾಬು ಸಿನಿಮಾ ಸೆಟ್ಟೇರುವುದು ಯಾವಾಗ? ರಾಜಮೌಳಿ ತಂದೆ ಕೊಟ್ಟರು ಉತ್ತರ

Mahesh Babu: ಮಹೇಶ್ ಬಾಬು ಹಾಗೂ ರಾಜಮೌಳಿ ಒಟ್ಟಿಗೆ ಸಿನಿಮಾ ಮಾಡುತ್ತಾರೆಂದು ಘೋಷಣೆಯಾಗಿ ವರ್ಷಕ್ಕೂ ಹೆಚ್ಚು ಸಮಯವಾಗಿದೆ ಆದರೆ ಚಿತ್ರೀಕರಣ ಪ್ರಾರಂಭವಾಗಿಲ್ಲ. ಸಿನಿಮಾದ ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆ ಎಂದು ರಾಜಮೌಳಿ ತಂದೆ ಹೇಳಿದ್ದಾರೆ.

ರಾಜಮೌಳಿ-ಮಹೇಶ್ ಬಾಬು ಸಿನಿಮಾ ಸೆಟ್ಟೇರುವುದು ಯಾವಾಗ? ರಾಜಮೌಳಿ ತಂದೆ ಕೊಟ್ಟರು ಉತ್ತರ
ಮಹೇಶ್-ರಾಜಮೌಳಿ
Follow us
ಮಂಜುನಾಥ ಸಿ.
|

Updated on: May 17, 2023 | 10:01 PM

ಆರ್​ಆರ್​ಆರ್ (RRR) ಸಿನಿಮಾ ಬಿಡುಗಡೆ ಆಗುವ ಮುನ್ನವೇ ರಾಜಮೌಳಿ (Rajamouli) ತಮ್ಮ ಮುಂದಿನ ಸಿನಿಮಾ ಮಹೇಶ್ ಬಾಬು (Mahesh Babu) ಜೊತೆಗೆ ಎಂದು ಘೋಷಿಸಿಬಿಟ್ಟಿದ್ದರು. ಆರ್​ಆರ್​ಆರ್ ಸಿನಿಮಾ ಬಿಡುಗಡೆ ಆಗಿ ತುಸುವೇ ದಿನದಲ್ಲಿ ಸಿನಿಮಾದ ಶೂಟಿಂಗ್ ಸಹ ಶುರುವಾಗಲಿಕ್ಕಿತ್ತು ಆದರೆ ಅಷ್ಟರಲ್ಲೆ ಅದ್ಭುತ ನಡೆದು ಆರ್​ಆರ್​ಆರ್ ಸಿನಿಮಾ ಊಹಿಸದ ರೀತಿಯಲ್ಲಿ ಅಂತರಾಷ್ಟ್ರೀಯ ಸಿನಿಮಾ ಆಗಿ ಮಾರ್ಪಟ್ಟಿತು. ತಮ್ಮ ಸಿನಿಮಾವನ್ನು ಜನರಿಗೆ ತಲುಪಿಸುವಲ್ಲಿ ಮಾಸ್ಟರ್ ಆದ ರಾಜಮೌಳಿ ಚಿತ್ರೀಕರಣ ಆರಂಭವನ್ನು ಮುಂದೂಡಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು, ಸಿನಿಮಾವನ್ನು ಆಸ್ಕರ್​ ವೇದಿಕೆ ವರೆಗೂ ಕೊಂಡೊಯ್ದು ಸಿನಿಮಾಕ್ಕೆ ಆಸ್ಕರ್ ಲಭಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಆದರೆ ಈ ನಡುವೆ ಮಹೇಶ್ ಬಾಬು ತೆಲುಗಿನ ಮತ್ತೊಬ್ಬ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಸಿನಿಮಾ ಮಾಡಲು ಆರಂಭಿಸಿದರು. ಇದೀಗ ಆರ್​ಆರ್​ಆರ್ ಸಿನಿಮಾದ ಜ್ವರ ತುಸು ಇಳಿದಿದೆ ಆದರೆ ಮಹೇಶ್ ಬಾಬು ತ್ರಿವಿಕ್ರಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಹಾಗಾಗಿ ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಯಾವಾಗ ಪ್ರಾರಂಭವಾಗುತ್ತದೆ ಎಂಬ ಗೊಂದಲ ಏರ್ಪಟ್ಟಿದೆ. ಆದರೆ ಈ ಎಲ್ಲ ಗೊಂದಲಗಳಿಗೆ ರಾಜಮೌಳಿಯವರ ತಂದೆ, ಕತೆಗಾರ ಕೆ ವಿಜಯೇಂದ್ರ ಪ್ರಸಾದ್ ತೆರೆ ಎಳೆದಿದ್ದಾರೆ.

ಪಿಂಕ್​ವಿಲ್ಲಾ ಜೊತೆಗೆ ಮಾತನಾಡಿರುವ ಕೆ ವಿಜಯೇಂದ್ರ ಪ್ರಸಾದ್, ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಸಿನಿಮಾ ಈ ವರ್ಷಾಂತ್ಯ ತಪ್ಪಿದರೆ ಮುಂದಿನ ವರ್ಷದ ಮೊದಲ ತಿಂಗಳಿನಲ್ಲಿಯೇ ಆರಂಭವಾಗಿಯೇ ತೀರುತ್ತದೆ ಎಂದಿದ್ದಾರೆ. ಮಹೇಶ್ ಬಾಬು-ತ್ರಿವಿಕ್ರಮ್ ಸಿನಿಮಾದ ಚಿತ್ರೀಕರಣ ಕೆಲವೇ ತಿಂಗಳಲ್ಲಿ ಮುಗಿಯಲಿದ್ದು ಅದರ ಬಳಿಕ ಮಹೇಶ್ ಬಾಬು ಸಿನಿಮಾಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ವರ್ಕ್​ಶಾಪ್ ಮುಗಿದ ಕೂಡಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ನಾಯಕಿಯ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲವೆಂದು ಇನ್ನು ಕೆಲವು ತಿಂಗಳಲ್ಲಿ ಅದೂ ಸಹ ತೀರ್ಮಾನವಾಗಲಿದೆ ಎಂದಿದ್ದಾರೆ.

ಮಹೇಶ್ ಬಾಬು ಈ ಹಿಂದೆ ರಾಜಮೌಳಿಯೊಟ್ಟಿಗಿನ ತಮ್ಮ ಸಿನಿಮಾ ಬಗ್ಗೆ ಮಾತನಾಡುತ್ತಾ ”ಇದು ಒಂದು ರೀತಿ ಕನಸು ನನಸಾದಂಥಹಾ ಅನುಭವ. ಈ ಹಿಂದೆ ಹಲವು ಬಾರಿ ನಾನು ಹಾಗೂ ರಾಜಮೌಳಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಚರ್ಚೆ ಮಾಡಿದ್ದೆವು ಆದರೆ ಸಾಧ್ಯವಾಗಿರಲಿಲ್ಲ ಈಗ ಅದು ಸಾಧ್ಯವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ” ಎಂದಿದ್ದರು.

ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತ್ರಿವಿಕ್ರಮ್ ಸಹ ತೆಲುಗಿನ ಟಾಪ್ ನಿರ್ದೇಶಕರಲ್ಲಿ ಒಬ್ಬರು. ಜಲ್ಸಾ, ಜುಲಾಯ್, ಅತ್ತಾರಿಂಟಿಕಿ ದಾರೇದಿ, ಸನ್ ಆಫ್ ಸತ್ಯಮೂರ್ತಿ, ಅರವಿಂದ ಸಮೇತ, ಅಲಾ ವೈಕುಂಟಪುರಂಲೋ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಮಹೇಶ್ ಬಾಬು ಜೊತೆಗೆ ಇದು ಅವರ ಮೂರನೇ ಸಿನಿಮಾ. ಈ ಮೊದಲು ಸೂಪರ್ ಡೂಪರ್ ಹಿಟ್ ಸಿನಿಮಾ ಅತಡು ಹಾಗೂ ಖಲೇಜಾಗಳನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಮಹೇಶ್-ತ್ರಿವಿಕ್ರಮ್ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು