ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರ ಸಹೋದರ ರಮೇಶ್ ಬಾಬು (Ramesh Babu) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 56 ವರ್ಷ ವಯಸ್ಸಾಗಿತ್ತು. ಲಿವರ್ ಕಾಯಿಲೆಯಿಂದ ಬಳಲುತ್ತಿದ್ದ ರಮೇಶ್, ಶನಿವಾರ ರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಕುಟುಂಬಸ್ಥರು ಗಚ್ಚಿಬೌಲಿಯ ಎಐಜಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಲ್ಲಿಗೆ ತಲುಪಿದಾಗ ವೈದ್ಯರು ರಮೇಶ್ ಅವರ ನಿಧನವನ್ನು ತಿಳಿಸಿದ್ದಾರೆ. ಸೋದರನ ನಿಧನದಿಂದ ಮಹೇಶ್ ಬಾಬು, ಕುಟುಂಬವರ್ಗ ಹಾಗೂ ಅಭಿಮಾನಿಗಳು ಶೋಕದಲ್ಲಿ ಮುಳುಗಿದ್ದಾರೆ.
ತೆಲುಗಿನ ಖ್ಯಾತ ನಟ ಕೃಷ್ಣ ಅವರ ಮಗ ರಮೇಶ್ ಬಾಬು ಬಾಲ್ಯದಿಂದಲೇ ಚಿತ್ರರಂಗದಲ್ಲಿ ಕೆಲಸ ಪ್ರಾರಂಭಿಸಿ, ಬಾಲನಟನಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ಇಂಡಸ್ಟ್ರಿಗೆ ‘ಸಾಮ್ರಾಟ್’ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ‘ನಾ ಇಲ್ಲೆ ನಾ ಸ್ವರ್ಗಂ’, ‘ಅಣ್ಣ ಚೆಲ್ಲುಲು’, ‘ಕಲಿಯುಗ ಕರ್ಣುಡು’, ‘ಮುಗ್ಗುರು ಕೊಡುಕುಲು’, ‘ಚಿನ್ನಿ ಕೃಷ್ಣುಡು’, ‘ಕೃಷ್ಣ ಗಾರಿ ಅಬ್ಬಾಯಿ’, ‘ಬ್ಲಾಕ್ ಟೈಗರ್’, ‘ಕಲಿಯುಗ ಅಭಿಮನ್ಯುಡು’ ಮೊದಲಾದ ಚಿತ್ರಗಳಲ್ಲಿ ರಮೇಶ್ ಬಾಬು ಗಮನಸೆಳೆದಿದ್ದರು. ಆದರೆ, ನಾಯಕನಾಗಿ ಅವರು ಗುರುತಿಸಿಕೊಂಡದ್ದಕ್ಕಿಂತ ಪೋಷಕ ನಟನಾಗಿ ಗುರುತಿಸಿಕೊಂಡಿದ್ದ ಹೆಚ್ಚು. ಮಹೇಶ್ ಬಾಬು ಹಾಗೂ ಕೃಷ್ಣ ಅವರೊಂದಿಗೆ ಹಲವು ಚಿತ್ರಗಳಲ್ಲಿ ರಮೇಶ್ ಬಾಬು ತೆರೆಹಂಚಿಕೊಂಡಿದ್ದಾರೆ.
ಮಹೇಶ್ ಬಾಬು ಅಭಿನಯದ ‘ದೂಕುಡು’ ಚಿತ್ರದಲ್ಲಿ ಕತೆಯ ನಿರೂಪಣೆಯನ್ನು ಮಾಡಿದ್ದು ರಮೇಶ್ ಬಾಬು. 2004ರ ನಂತರ ನಿರ್ಮಾಪಕರಾಗಿ ರಮೇಶ್ ಬಾಬು ಗುರುತಿಸಿಕೊಂಡಿದ್ದರು. ‘ಅರ್ಜುನ್’, ‘ಅತಿಥಿ’ಯಂತಹ ಬ್ಲಾಕ್ಬಸ್ಟರ್ ಚಿತ್ರಗಳನ್ನು ಅವರು ನೀಡಿದ್ದರು. ರಮೇಶ್ ಬಾಬು ನಿಧನದಿಂದ ತೆಲುಗು ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದಂತಾಗಿದ್ದು, ಚಿತ್ರರಂಗ ಕಂಬನಿ ಮಿಡಿದಿದೆ.
ರಮೇಶ್ ಬಾಬು ಅವರ ನಿಧನದ ಕುರಿತು ಕುಟುಂಬದ ಹೇಳಿಕೆ:
It is with deep sorrow that we announce the passing of our beloved Ramesh Babu garu. He will continue to live on in our hearts forever.
We request all our well-wishers to adhere to the COVID norms and avoid gathering at the cremation venue.
– Ghattamaneni Family
— BA Raju’s Team (@baraju_SuperHit) January 8, 2022
Official statement from The Ghattamaneni family. https://t.co/bFWZgUAlNn pic.twitter.com/uUV8d7wh58
— BA Raju’s Team (@baraju_SuperHit) January 8, 2022
ಇದನ್ನೂ ಓದಿ:
‘ಮುಂಗಾರು ಮಳೆ’ ತಂಡದಲ್ಲೂ ಮನಸ್ತಾಪ ಆಗಿತ್ತು; ಸ್ನೇಹದ ಅಸಲಿ ವಿಚಾರ ತೆರೆದಿಟ್ಟ ಗಣೇಶ್
Samantha: ಸಮಂತಾ ಪವರ್ಫುಲ್ ವರ್ಕೌಟ್; ವೈರಲ್ ಆಗುತ್ತಿದೆ ಹೊಸ ವಿಡಿಯೋ
Published On - 8:05 am, Sun, 9 January 22