ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮಹೇಶ್​ ಬಾಬುಗೆ ಇರಲಿದೆ 8 ಗೆಟಪ್​?

|

Updated on: Mar 04, 2024 | 7:26 PM

ಸ್ಟಾರ್​ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಜೊತೆಗಿನ ಸಿನಿಮಾಗಾಗಿ ನಟ ಮಹೇಶ್​ ಬಾಬು ಅವರು ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪ್ರೀ-ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಮಹೇಶ್ ಬಾಬು ಅವರ ಪಾತ್ರಕ್ಕೆ ಲುಕ್​ ಟೆಸ್ಟ್​ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಅವರಿಗೆ ಹಲವು ಗೆಟಪ್​ಗಳು ಇರಲಿವೆ. ಆ ಬಗ್ಗೆ ಟಾಲಿವುಡ್​ ಅಂಗಳದಲ್ಲಿ ಗಾಸಿಪ್​ ಹರಿದಾಡುತ್ತಿವೆ.

ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮಹೇಶ್​ ಬಾಬುಗೆ ಇರಲಿದೆ 8 ಗೆಟಪ್​?
ರಾಜಮೌಳಿ, ಮಹೇಶ್​ ಬಾಬು
Follow us on

ನಟ ಮಹೇಶ್​ ಬಾಬು ಅವರು ‘ಗುಂಟೂರು ಖಾರಂ’ ಸಿನಿಮಾದ ಬಳಿಕ ಮುಂದಿನ ಚಿತ್ರದ ಕಡೆಗೆ ಗಮನ ಹರಿಸಿದ್ದಾರೆ. ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಹಾಗೂ ಮಹೇಶ್​ ಬಾಬು ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಹೊಸ ಚಿತ್ರದ (SSMB 29) ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಸಿನಿಮಾಗಾಗಿ ಮಹೇಶ್​ ಬಾಬು ಅವರು ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಶೀರ್ಷಿಕೆ ಬಹಿರಂಗ ಆಗಿರದ ಈ ಸಿನಿಮಾ ಬಗ್ಗೆ ಒಂದು ತಾಜಾ ಗಾಸಿಪ್​ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ಮಹೇಶ್​ ಬಾಬು (Mahesh Babu) ಅವರಿಗೆ 8 ಗೆಟಪ್​ಗಳು ಇರಲಿವೆ ಎಂದು ಹೇಳಲಾಗುತ್ತಿದೆ.

ರಾಜಮೌಳಿ ನಿರ್ದೇಶನ ಮಾಡುವ ಸಿನಿಮಾಗಳಲ್ಲಿ ಹೀರೋಗಳ ಗೆಟಪ್​ಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಅದಕ್ಕಾಗಿ ಹೀರೋಗಳು ಹಗಲಿರುಳು ಕಷ್ಟಪಡಬೇಕು. ಅದಕ್ಕೆ ಈಗ ಮಹೇಶ್​ ಬಾಬು ಕೂಡ ಬದ್ಧರಾಗಿದ್ದಾರೆ. ಈ ಸಿನಿಮಾಗಾಗಿ ಲುಕ್​ ಟೆಸ್ಟ್​ ನಡೆಯುತ್ತಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ 8 ಗೆಟಪ್​ಗಳನ್ನು ಈಗಾಗಲೇ ಫೈನಲ್​ ಮಾಡಲಾಗಿದೆ ಎಂದು ಗಾಸಿಪ್​ ಹರಡಿದೆ. ಇದನ್ನು ಕೇಳಿ ಮಹೇಶ್​ ಬಾಬು ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ ಮಹೇಶ್​ ಬಾಬು; ಇದು ರಾಜಮೌಳಿ ಆದೇಶ

ಇದು ಮಹೇಶ್​ ಬಾಬು ನಟನೆಯ 29ನೇ ಸಿನಿಮಾ. ಹಾಗಾಗಿ ತಾತ್ಕಾಲಿಕವಾಗಿ ‘SSMB 29’ ಎಂದು ಕರೆಯಲಾಗುತ್ತಿದೆ. ಈ ಚಿತ್ರದಲ್ಲಿನ ಮಹೇಶ್​ ಬಾಬು ಅವರ ಯಾವುದೇ ಗೆಟಪ್​ ಬಹಿರಂಗ ಆಗುವಂತಿಲ್ಲ. ಹಾಗಾಗಿ ರಾಜಮೌಳಿ ಅವರು ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ಇನ್ಮುಂದೆ ಮಹೇಶ್​ ಬಾಬು ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ ಎಂದು ರಾಜಮೌಳಿ ಅವರು ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಮುಹೂರ್ತಕ್ಕೆ ದಿನಾಂಕ ನಿಗದಿ

ನಿರೀಕ್ಷಿಸಿದ ರೀತಿಯಲ್ಲಿ ‘ಗುಂಟೂರು ಖಾರಂ’ ಸಿನಿಮಾ ಕಲೆಕ್ಷನ್​ ಮಾಡಲಿಲ್ಲ. ಹಾಗಾಗಿ ಮಹೇಶ್​ ಬಾಬು ಅವರು ಮುಂದಿನ ಸಿನಿಮಾದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ರಾಜಮೌಳಿ ಜೊತೆ ಅವರು ಕೈ ಜೋಡಿಸುತ್ತಿರುವುದರಿಂದ ಸಹಜವಾಗಿಯೇ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಎಲ್ಲರೂ ಊಹಿಸಿದ್ದಾರೆ. ಹಾಗಂತ ಆ ಗೆಲುವು ಸುಲಭಕ್ಕೆ ದಕ್ಕುವುದಿಲ್ಲ. ಮಹೇಶ್​ ಬಾಬು ಅವರು ಈ ಚಿತ್ರಕ್ಕೆ ವರ್ಷಗಟ್ಟಲೆ ಕಾಲ್​ಶೀಟ್​ ನೀಡಲಿದ್ದಾರೆ. ಆದಷ್ಟು ಬೇಗ ಈ ಚಿತ್ರತಂಡದಿಂದ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಆಸ್ಕರ್​ ಪುರಸ್ಕೃತ ಮ್ಯೂಸಿಕ್​ ಕಂಪೋಸರ್​ ಎಂಎಂ ಕೀರವಾಣಿ ಅವರು ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.