Troll Song: ‘ಜೋಡೆತ್ತು ಒಟ್ಟಾಗಿ ನಿಂತ್ರೆ ಗೆಲುವು ಅಕ್ಕಂದೇ’; ‘ಯುಐ’ ಹಾಡಿನಲ್ಲಿ ಟ್ರೋಲ್​ ಆಗುವ ಸಾಹಿತ್ಯ

‘ಯುಐ’ ಸಿನಿಮಾದ ‘ಟ್ರೋಲ್​ ಸಾಂಗ್​’ ಬಿಡುಗಡೆ ಆಗಿದೆ. ‘ಕರಿಮಣಿ ಮಾಲಿಕ ನೀನಲ್ಲ’ ರೀತಿಯೇ ಈ ಹೊಸ ಹಾಡು ಕೂಡ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸೋಶಿಯಲ್​ ಮೀಡಿಯಾದ ಟ್ರೋಲ್​ ಆದ ವಿಚಾರಗಳೇ ಈ ಹಾಡಿನ ಜೀವಾಳ. ಉಪೇಂದ್ರ ಅಭಿಮಾನಿಗಳಿಗೆ ‘ಟ್ರೋಲ್​ ಸಾಂಗ್​’ ತುಂಬ ಇಷ್ಟ ಆಗಿದೆ. ಕಮೆಂಟ್​ಗಳ ಮೂಲಕ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Troll Song: ‘ಜೋಡೆತ್ತು ಒಟ್ಟಾಗಿ ನಿಂತ್ರೆ ಗೆಲುವು ಅಕ್ಕಂದೇ’; ‘ಯುಐ’ ಹಾಡಿನಲ್ಲಿ ಟ್ರೋಲ್​ ಆಗುವ ಸಾಹಿತ್ಯ
ಟ್ರೋಲ್​ ಸಾಂಗ್​
Follow us
ಮದನ್​ ಕುಮಾರ್​
|

Updated on: Mar 04, 2024 | 5:24 PM

ನಟ, ನಿರ್ದೇಶಕ ಉಪೇಂದ್ರ (Upendra) ಏನಾದರೂ ಮಾಡ್ತಾರೆ ಎಂದರೆ ಅದು ಡಿಫರೆಂಟ್​ ಆಗಿರಲೇಬೇಕು. ಅಭಿಮಾನಿಗಳ ನಿರೀಕ್ಷೆಯಂತೆಯೇ ಅವರು ಎಲ್ಲವನ್ನೂ ಭಿನ್ನವಾಗಿ ಪ್ರಸೆಂಟ್​ ಮಾಡ್ತಾರೆ. ಈಗ ಉಪೇಂದ್ರ ಅವರು ‘ಯುಐ’ (UI Movie) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹು ವರ್ಷಗಳ ಬಳಿಕ ಅವರು ನಿರ್ದೇಶನ ಮಾಡಿ ನಟಿಸುತ್ತಿರುವ ಸಿನಿಮಾ ಎಂಬ ಕಾರಣಕ್ಕೆ ‘ಯುಐ’ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿದೆ. ‘ಟ್ರೋಲ್​ ಸಾಂಗ್​’ (Troll Song) ಎಂಬ ಈ ಗೀತೆಯಲ್ಲಿ ಜೋಡೆತ್ತುಗಳ ಬಗ್ಗೆಯೂ ಪ್ರಸ್ತಾಪ ಇದೆ. ಅಷ್ಟೇ ಅಲ್ಲ, ‘ತಗಡು’ ಎಂಬ ಪದ ಕೂಡ ಬಳಕೆ ಆಗಿದೆ!

ಉಪೇಂದ್ರ ಅವರ ಸಿನಿಮಾಗಳಲ್ಲಿ ಹಾಡುಗಳಿಗೆ ಸಖತ್​ ಸ್ಕೋಪ್​ ಇರುತ್ತದೆ. ಈಗ ‘ಟ್ರೋಲ್​ ಸಾಂಗ್​’ ಕೂಡ ಹೊಸ ಟ್ರೆಂಡ್​ ಸೃಷ್ಟಿ ಮಾಡುತ್ತಿದೆ. ‘ಲಹರಿ ಫಿಲ್ಮ್ಸ್​’ ಮೂಲಕ ಈ ಹಾಡು ಬಿಡುಗಡೆ ಆಗಿದೆ. ಬಿ. ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ. ನರೇಶ್​ ಕುಮರ್ ಎಚ್​.ಎನ್​. ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಅಂಶಗಳನ್ನೇ ಇಟ್ಟುಕೊಂಡು ಇಡೀ ಸಾಹಿತ್ಯ ಬರೆಯಲಾಗಿದೆ.

‘ಟ್ರೋಲ್​ ಆಗತ್ತೆ ಇದು ಟ್ರೋಲ್​ ಆಗತ್ತೆ.. ಇನ್​ಸ್ಟಾದಲ್ಲಿ ತುಂಬ ರೀಲ್ಸ್​ ಆಗತ್ತೆ. ಕೆಲ್ಸ ಇಲ್ಲದವ್ರಿಗೆ ಟೈಮ್​ ಪಾಸ್​ ಆಗತ್ತೆ..’ ಎಂದು ಶುರುವಾಗುವ ಹಾಡಿನಲ್ಲಿ ರೀಷ್ಮಾ ನಾಣಯ್ಯ ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಸದ್ಯಕ್ಕಂತೂ ಈ ಹಾಡಿನಲ್ಲಿ ಬಳಕೆ ಆಗಿರುವ ಪದಗಳ ಬಗ್ಗೆ ಚರ್ಚೆ ಆಗುತ್ತಿದೆ. ಬೆಳ್ಳುಳ್ಳಿ ಕಬಾಬ್​, ಒನ್​ ಮೋರ್​ ಒನ್​ ಮೋರ್​, ಹೆಂಗ್​ ಪುಂಗ್​ ಲಿ, ಆಲ್​ ರೈಟ್​ ಮುಂದಕ್ಕೆ ಹೋಗೋಣ ಎಂಬಿತ್ಯಾದಿ ಪದಪುಂಜಗಳು ರಾರಾಜಿಸಿವೆ.

‘ಯುಐ’ ಸಿನಿಮಾದ ‘ಟ್ರೋಲ್​ ಸಾಂಗ್​’:

‘ಒಟ್ಟಾಗಿ ನಿಂತ್ರೆ, ನಾವು ಜೋಡೆತ್ತಂಗೆ, ಗೆಲುವು ಅಕ್ಕಂದೇ..’ ಎಂಬ ಸಾಲಿನ ಮೂಲಕ ರಾಜಕೀಯದ ವಿಷಯವನ್ನು ಕೂಡ ‘ಟ್ರೋಲ್​ ಸಾಂಗ್​’ನಲ್ಲಿ ಎಳೆದು ತರಲಾಗಿದೆ. ಇಡೀ ರಾಜ್ಯಕ್ಕೆ ಖುಷಿ ಕೊಡೋ ಸುದ್ದಿ ಇದೆ. ಮರ ಯಾಕೆ, ಮನಸ್ಸು ಅಷ್ಟೇ ಏನಂತೀರ? ಲಾರಿ ಡ್ರೈವರಾ, ನನ್ನ ಲವ್ವರಾ. ಲವ್ವಲ್ಲಿ ಗುಮ್ಮಿಸಿಕೊಂಡು ತಗಡು ಆಗೋಗಾ ಅವನು. ಹೀಗೆ ಎಲ್ಲಿಂದ ಎಲ್ಲಿಗೋ ಸಾಗುತ್ತದೆ ‘ಟ್ರೋಲ್​ ಸಾಂಗ್​’ನ ಸಾಹಿತ್ಯ.

ಇದನ್ನೂ ಓದಿ: ‘ಉಪೇಂದ್ರ ನನ್ನ ಫೇವರಿಟ್​ ನಿರ್ದೇಶಕ’: ಕಾರಣ ಸಹಿತ ವಿವರಿಸಿದ ಪ್ರಶಾಂತ್​ ನೀಲ್​

ಐಶ್ವರ್ಯಾ ರಂಗರಾಜನ್​, ಹರ್ಷಿಕಾ ದೇವನಾಥ್​, ಅನೂಪ್​ ಭಂಡಾರಿ, ಬಿ. ಅಜನೀಶ್​ ಲೋಕನಾಥ್​ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಹಿಂದಿ ಹಾಗೂ ತೆಲುಗಿನಲ್ಲೂ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಆಯಾ ಭಾಷೆಯ ನೇಟಿವಿಟಿಗೆ ಹೊಂದಿಕೆ ಆಗುವ ರೀತಿ ‘ಟ್ರೋಲ್​ ಸಾಂಗ್​’ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ