Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಯಶ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದ ದರ್ಶನ್; ಹಳೆಯ ವಿಡಿಯೋ ವೈರಲ್

ದರ್ಶನ್ ‘ಮೊದಲಾ ಸಲ’ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದರು. ಈ ವಿಡಿಯೋ ಈಗ ಫ್ಯಾನ್ ಪೇಜ್​ಗಳಲ್ಲಿ ವೈರಲ್ ಆಗಿದೆದೆ. ದರ್ಶನ್ ಹಾಗೂ ಯಶ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತಿದೆ. ಇದು ಸುಳ್ಳು ಎಂಬುದು ಆಗಾಗ ಸಾಬೀತು ಆಗುತ್ತಲೇ ಇರುತ್ತದೆ. ಈ ವಿಡಿಯೋ ಅದಕ್ಕೆ ಹೊಸ ನಿದರ್ಶನ.

VIDEO: ಯಶ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದ ದರ್ಶನ್; ಹಳೆಯ ವಿಡಿಯೋ ವೈರಲ್
ಯಶ್-ದರ್ಶನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 04, 2024 | 10:14 AM

ರಾಕಿಂಗ್ ಸ್ಟಾರ್ ಯಶ್ (Yash) ಅವರು ಭರ್ಜರಿ ಜನಪ್ರಿಯತೆ ಪಡೆದಿದ್ದಾರೆ. ಅವರ ಖ್ಯಾತಿ ಹೆಚ್ಚಾಗಿದೆ. ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಯಶ್ ಹಾಗೂ ದರ್ಶನ್ ಫ್ಯಾನ್ಸ್ ಮಧ್ಯೆ ಆಗಾಗ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಆದರೆ, ಈ ನಟರ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇದು ಇಂದು ನಿನ್ನೆಯ ಗೆಳೆತನ ಅಲ್ಲ. ತುಂಬಾನೇ ಹಳೆಯ ಫ್ರೆಂಡ್​ಶಿಪ್. ಅದಕ್ಕೆ ಈ ವಿಡಿಯೋ ಸಾಕ್ಷಿ.

ಯಶ್ ಅವರು 2008ರ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಅವರಿಗೆ ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. 2010ರಲ್ಲಿ ಅವರ ನಟನೆಯ ‘ಮೊದಲಾ ಸಲ’ ಸಿನಿಮಾ ಬಿಡುಗಡೆ ಕಂಡಿತು. ಈ ಚಿತ್ರಕ್ಕೆ ಪುರುಷೋತ್ತಮ್ ಅವರು ನಿರ್ದೇಶನ ಮಾಡಿದ್ದರು. ಬ್ರಮಾ ಅವರು ಈ ಸಿನಿಮಾಗೆ ನಾಯಕಿ. ಈ ಚಿತ್ರ 2010ರ ಡಿಸೆಂಬರ್ 8ರಂದು ರಿಲೀಸ್ ಆಯಿತು. ಈ ಸಿನಿಮಾಗೆ ದರ್ಶನ್ ಅವರು ಕ್ಲ್ಯಾಪ್ ಮಾಡಿದ್ದರು.

ದರ್ಶನ್ ಅವರು ‘ಮೊದಲಾ ಸಲ’ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದರು. ಈ ವಿಡಿಯೋ ಈಗ ಫ್ಯಾನ್ ಪೇಜ್​ಗಳಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಹಾಗೂ ಯಶ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತಿದೆ. ಇದು ಸುಳ್ಳು ಎಂಬುದು ಆಗಾಗ ಸಾಬೀತು ಆಗುತ್ತಲೇ ಇರುತ್ತದೆ. ದರ್ಶನ್ ಅವರನ್ನು ಒಟ್ಟಾಗಿ ತೆರೆಮೇಲೆ ನೋಡಬೇಕು ಎಂಬುದು ಕೆಲವರ ಆಸೆ.

2019ರ ಲೋಕಸಭೆ ಚುನಾವಣೆಯಲ್ಲಿ ಯಶ್ ಹಾಗೂ ದರ್ಶನ್ ಮೊದಲ ಬಾರಿಗೆ ಒಟ್ಟಿಗೆ ಬಂದು ಸುಮಲತಾ ಪರ ಪ್ರಚಾರ ಮಾಡಿದ್ದರು. ಈ ಚುನಾವಣೆಯಲ್ಲಿ ಅವರು ಗೆದ್ದರು. ಇವರ ಗೆಲುವಿಗೆ ಯಶ್ ಹಾಗೂ ದರ್ಶನ್ ಮಾಡಿದ ಪ್ರಚಾರವೂ ಸಹಕಾರಿ ಆಗಿತ್ತು. ಇವರಿಗೆ ಜೋಡೆತ್ತು ಎನ್ನುವ ಖ್ಯಾತಿ ಸಿಕ್ಕಿತು.

ದರ್ಶನ್-ಯಶ್ ಹಳೆಯ ವಿಡಿಯೋ

ಇತ್ತೀಚೆಗೆ ದರ್ಶನ್ ಹಾಗೂ ಯಶ್ ಹಾಗೂ ಒಟ್ಟಿಗೆ ಕಾಣಿಸಿಕೊಂಡರು. ಅಭಿಷೇಕ್ ಮದುವೆ ಬಳಿಕ ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡಿದ್ದರು. ಈ ಮೂಲಕ ಇಬ್ಬರ ಮಧ್ಯೆ ಏನೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿತ್ತು. ಈಗ ವೈರಲ್ ಆಗುತ್ತಿರುವ ಹಳೆಯ ವಿಡಿಯೋಗೆ ಮೆಚ್ಚುಗೆ ಸಿಗುತ್ತಿದೆ.

ಇದನ್ನೂ ಓದಿ: ‘ಈಗ ಪರಿಸ್ಥಿತಿ ಬೇರೆ ಇದೆ’; ಚುನಾವಣೆ ಪ್ರಚಾರಕ್ಕೆ ದರ್ಶನ್, ಯಶ್ ಬೆಂಬಲದ ಬಗ್ಗೆ ಸುಮಲತಾ ಮಾತು

ಯಶ್ ಅವರು ‘ಕೆಜಿಎಫ್ 2’ ಬಳಿಕ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. 2025ರ ಏಪ್ರಿಲ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ದರ್ಶನ್ ಅವರು ‘ಕಾಟೇರ’ ಸಿನಿಮಾದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸದ್ಯ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದು ಇದಕ್ಕೆ ‘ಡೆವಿಲ್’ ಶೀರ್ಷಿಕೆ ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ