AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಪರ ಪ್ರಚಾರ ಮಾಡಿ ಎಂದು ಯಶ್ ಬಳಿ ಕೇಳೋಕೆ ಮನಸ್ಸು ಒಪ್ಪುತ್ತಿಲ್ಲ ಎಂದ ಸುಮಲತಾ

ಯಶ್ ಹಾಗೂ ದರ್ಶನ್ ಕಳೆದ ಬಾರಿಯ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ಮಾಡಿದಾಗ ಕೆಲವು ಪಕ್ಷಗಳು ಅವರ ವಿರುದ್ಧ ಟೀಕೆ ಮಾಡಿದ್ದವು. ರಾಜಕೀಯದ ನಿಜವಾದ ಅನುಭವ ಪಡೆದ ಯಶ್ ಅವರು ಆ ಬಗ್ಗೆ ಬೇಸರ ಮಾಡಿಕೊಂಡಿದ್ದರು. ಈ ವಿಚಾರವನ್ನು ಸುಮಲತಾ ರಿವೀಲ್ ಮಾಡಿದ್ದಾರೆ.

ನನ್ನ ಪರ ಪ್ರಚಾರ ಮಾಡಿ ಎಂದು ಯಶ್ ಬಳಿ ಕೇಳೋಕೆ ಮನಸ್ಸು ಒಪ್ಪುತ್ತಿಲ್ಲ ಎಂದ ಸುಮಲತಾ
ಯಶ್-ಸುಮಲತಾ
ರಾಜೇಶ್ ದುಗ್ಗುಮನೆ
|

Updated on:Mar 04, 2024 | 2:46 PM

Share

ನಟಿ, ಸಂಸದೆ ಸುಮಲತಾ (Sumalatha Ambareesh) ಅವರು ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ರೆಡಿ ಆಗಿದ್ದಾರೆ. ಬಿಜೆಪಿಯಿಂದ ತಮಗೆ ಟಿಕೆಟ್ ಸಿಗಲಿದೆ ಎನ್ನುವ ಭರವಸೆಯಲ್ಲಿ ಅವರು ಇದ್ದಾರೆ. ಕಳೆದ ಬಾರಿ ಅವರ ಪರವಾಗಿ ಯಶ್ ಹಾಗೂ ದರ್ಶನ್ ಪ್ರಚಾರ ಮಾಡಿದ್ದರು. ಈಗಾಗಲೇ ದರ್ಶನ್ ಅವರು ಸುಮಲತಾ ಪರ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ. ಯಶ್ ಬಗ್ಗೆ ಇಷ್ಟು ದಿನ ಸ್ಪಷ್ಟನೆ ಸಿಕ್ಕಿರಲಿಲ್ಲ. ಈ ಕುರಿತು ಸುಮಲತಾ ಮಾತನಾಡಿದ್ದಾರೆ. ಯಶ್ ನಿಲುವು ಏನಿರಬಹುದು ಎಂಬುದನ್ನು ಅವರು ವಿವರಿಸಿದ್ದಾರೆ.

ಕಳೆದ ಬಾರಿ ಯಶ್ ಹಾಗೂ ದರ್ಶನ್ ಅವರು ಸುಮಲತಾ ಪರ ಪ್ರಚಾರ ಮಾಡಿದಾಗ ಕೆಲವು ಪಕ್ಷಗಳು ಅವರ ವಿರುದ್ಧ ಟೀಕೆ ಮಾಡಿದ್ದವು. ಮಾಜಿ ಸಿಎಂ ಕುಮಾರಸ್ವಾಮಿ ಬಳಕೆ ಮಾಡಿದ ಪದಗಳು ಅವರಿಗೆ ನೋವು ತಂದಿತ್ತು. ರಾಜಕೀಯದ ನಿಜವಾದ ಅನುಭವ ಪಡೆದ ಯಶ್ ಅವರು ಆ ಬಗ್ಗೆ ಬೇಸರ ಮಾಡಿಕೊಂಡಿದ್ದರಂತೆ. ಈ ವಿಚಾರವನ್ನು ಸುಮಲತಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: 100% ಮಂಡ್ಯ ಟಿಕೆಟ್​​ ನನಗೆ ಸಿಗಲಿದೆ: ವಿಶ್ವಾಸದಲ್ಲಿ ಸುಮಲತಾ ಅಂಬರೀಶ್

‘ಚುನಾವಣೆ ಪ್ರಚಾರಕ್ಕೆ ಹೋಗಲ್ಲ ಎಂದು ಯಶ್ ಹೇಳಿದ್ದಾರೆ. ಇದು ನಿಜವೇ’ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಸುಮಲತಾ ಉತ್ತರಿಸಿದ್ದಾರೆ. ‘ಯಶ್ ಈ ಮಾತನ್ನು ಮಾಧ್ಯಮದ ಬಳಿ ಈಗ ಹೇಳಿರಬಹುದು. ನನ್ನ ಬಳಿ ಈ ಮೊದಲೇ ಈ ಬಗ್ಗೆ ಮಾತನಾಡಿದ್ದರು. ಚುನಾವಣೆ ಮುಗಿದ ಬಳಿಕ ಮೂರ್ನಾಲ್ಕು ಬಾರಿ ಈ ವಿಚಾರ ಚರ್ಚೆಗೆ ಬಂದಿತ್ತು. ರಾಜಕಾರಣ ಎಂದರೆ ಇಷ್ಟು ಕಹಿ ಇರುತ್ತದೆಯೇ, ಇಷ್ಟೊಂದು ಟಿಕೆ ಇರುತ್ತದೆಯೇ ಎಂದು ಬೇಸರ ಮಾಡಿಕೊಂಡಿದ್ದರು. ನಿಮ್ಮ ಚುನಾವಣೆಯಲ್ಲಿ ಆ ಬಗ್ಗೆ ಗೊತ್ತಾಯ್ತು ಎಂದಿದ್ದರು. ಅವರು ಪ್ಯಾನ್ ಇಂಡಿಯಾ ಸ್ಟಾರ್. ಅವರು ಸಖತ್ ಬ್ಯುಸಿ ಆಗಿದ್ದಾರೆ. ಅವರಿಂದ ಮತ್ತೆ ಇದನ್ನು ನಿರೀಕ್ಷಿಸೋಕೆ ನನ್ನ ಮನಸ್ಸು ಒಪ್ಪುತ್ತಿಲ್ಲ’ ಎಂದಿದ್ದಾರೆ ಅವರು.

‘ಯಶ್ ಬರ್ತೀನಿ ಎಂದರೆ ನನಗಿಂತ ಖುಷಿ ಪಡೋರು ಯಾರೂ ಇಲ್ಲ. ಬರಲ್ಲ ಅಂದ್ರೂ ನನಗೇನು ಬೇಸರ ಇಲ್ಲ. ಕಳೆದ ಬಾರಿ  ಅಂಬರೀಷ್ ಅವರ ಗೌರವದ ಮೇಲೆ ಪ್ರಚಾರಕ್ಕೆ ಬಂದಿದ್ದರು. ನಾನು ಅವರನ್ನು ಕರೆದಿಲ್ಲ’ ಎಂದಿದ್ದಾರೆ ಸುಮಲತಾ. ಈ ಮೂಲಕ ಹಲವು ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:58 am, Mon, 4 March 24