AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೋರ’ ಸಿನಿಮಾ ಹಾಡು ಬಿಡುಗಡೆ ಮಾಡಿದ ಮಹರ್ಷಿ ಆನಂದ ಗುರೂಜಿ; ಈ ಚಿತ್ರಕ್ಕೆ ಸುನಾಮಿ ಕಿಟ್ಟಿ ಹೀರೋ

‘ಒರಟ’ ಸಿನಿಮಾ ಖ್ಯಾತಿಯ ಶ್ರೀ ಅವರು ‘ಕೋರ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುನಾಮಿ ಕಿಟ್ಟಿ ಅವರು ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಚರಿಶ್ಮಾ ಅಭಿನಯಿಸಿದ್ದಾರೆ. ಪಿ. ಮೂರ್ತಿ ಅವರು ಬಂಡವಾಳ ಹೂಡುವುದರ ಜೊತೆಗೆ ಖಳನಾಗಿ ನಟಿಸಿದ್ದಾರೆ. ಈ ಸಿನಿಮಾ ಹಾಡನ್ನು ಮಹರ್ಷಿ ಆನಂದ ಗುರೂಜಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

‘ಕೋರ’ ಸಿನಿಮಾ ಹಾಡು ಬಿಡುಗಡೆ ಮಾಡಿದ ಮಹರ್ಷಿ ಆನಂದ ಗುರೂಜಿ; ಈ ಚಿತ್ರಕ್ಕೆ ಸುನಾಮಿ ಕಿಟ್ಟಿ ಹೀರೋ
ಕೋರ ಸಿನಿಮಾದ ಸಾಂಗ್​ ರಿಲೀಸ್​ ಕಾರ್ಯಕ್ರಮ
Follow us
ಮದನ್​ ಕುಮಾರ್​
|

Updated on: Mar 03, 2024 | 5:14 PM

ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದ ಸುನಾಮಿ ಕಿಟ್ಟಿ (Tsunami Kitty) ಅವರು ‘ಕೋರ’ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ‘ಬಾನಿನಿಂದ..’ ಹಾಡು ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆ ಆಯಿತು. ‘ರತ್ನಮ್ಮ‌ ಮೂವೀಸ್’ ಬ್ಯಾನರ್​ನಲ್ಲಿ ಪಿ. ಮೂರ್ತಿ ಅವರು ನಿರ್ಮಿಸಿರುವ ಈ ಸಿನಿಮಾಗೆ ಒರಟ ಶ್ರೀ ನಿರ್ದೇಶನ ಮಾಡಿದ್ದಾರೆ. ‘ಕೋರ’ (Kora) ಚಿತ್ರದ ಹಾಡನ್ನು ಮಹರ್ಷಿ ಆನಂದ ಗುರೂಜಿ (Maharshi Anand Guruji) ರಿಲೀಸ್​ ಮಾಡಿದ್ದಾರೆ. ಗೊಲ್ಲಹಳ್ಳಿ ಶಿವಪ್ರಸಾದ್ ಬರೆದ ಈ ಗೀತೆಗೆ ರವೀಂದ್ರ ಸೊರಗಾವಿ ಧ್ವನಿ ನೀಡಿದ್ದಾರೆ. ಬಿ.ಆರ್. ಹೇಮಂತ್ ಕುಮಾರ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ನಿರ್ಮಾಪಕ ಪಿ. ಮೂರ್ತಿ ಅವರು ಟೈಟಲ್​ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಕೋರ’ ಎಂದರೆ ಬುಡಕಟ್ಟು ಜನಾಂಗದ ಹೆಸರು ಎಂದು ಅವರು ಹೇಳಿದ್ದಾರೆ. ‘ನಮ್ಮ ಸಿನಿಮಾ ಶೂಟಿಂಗ್​ ಮುಕ್ತಾಯವಾಗಿ ಬಿಡುಗಡೆ ಹಂತಕ್ಕೆ ತಲುಪಿದ್ದೇವೆ. ಏಪ್ರಿಲ್ ತಿಂಗಳಲ್ಲಿ ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಒರಟ ಶ್ರೀ ಅವರ ನಿರ್ದೇಶನದಲ್ಲಿ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ಸುನಾಮಿ ಕಿಟ್ಟಿ ಹಾಗೂ ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾಗಾಗಿ ತುಂಬ ಕಷ್ಟಪಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ನಮ್ಮ ಚಿತ್ರದ ಶೂಟಿಂಗ್​ ಬಹುತೇಕ ಆಗಿರುವುದು ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಮುತ್ತ ಇರುವ ಕಾಡಿನಲ್ಲಿ. ಆ ಲೊಕೇಷನ್​ಗಳಲ್ಲಿ ಅನುಕೂಲ ಕಡಿಮೆ. ಅಂಥ ಜಾಗಗಳಲ್ಲೂ ಯಾವುದೇ ತೊಂದರೆ ಇಲ್ಲದೆ ಶೂಟಿಂಗ್​ ನಡೆಯಲು ತಂಡದ ಸಹಕಾರವೇ ಮುಖ್ಯ ಕಾರಣ. ಹೇಮಂತ್ ಕುಮಾರ್ ಅವರ ಸಂಗೀತದಲ್ಲಿ ಎಲ್ಲ ಹಾಡುಗಳು ಚೆನ್ನಾಗಿ ಮೂಡಿಬಂದಿದೆ. ‘ಬಾನಿನಿಂದ..’ ಗೀತೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರ ಆಗುತ್ತದೆ. ಇದನ್ನು ಅನಾವರಣ ಮಾಡಿದ ಆನಂದ್ ಗುರೂಜಿ ಅವರಿಗೆ ಧನ್ಯವಾದ’ ಎಂದು ನಿರ್ಮಾಪಕರು ಹೇಳಿದ್ದಾರೆ.

ಇದನ್ನೂ ಓದಿ: ಅದ್ಧೂರಿಯಾಗಿ ಬಿಡುಗಡೆ ಆಯ್ತು ‘ಪರವಶ’ ಪೋಸ್ಟರ್, ರವಿಚಂದ್ರ ಪಾತ್ರವೇನು?

ಪಿ. ಮೂರ್ತಿ ಅವರ ಹುಟ್ಟುಹಬ್ಬದ ದಿನ ಈ ಹಾಡು ಬಿಡುಗಡೆ ಆಗಿದೆ. ಹಾಗಾಗಿ ಸುನಾಮಿ ಕಿಟ್ಟಿ ಅವರು ಶುಭಾಶಯ ತಿಳಿಸುವುದರೊಂದಿಗೆ ಮಾತು ಆರಂಭಿಸಿದರು. ‘ನನ್ನನ್ನು ಹೀರೋ ಮಾಡಿದ ಪಿ. ಮೂರ್ತಿ ಅವರಿಗೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯ ಕೂಡ. ರಿಯಾಲಿಟಿ ಶೋಗಳ ಮೂಲಕ ಪರಿಚಿತನಾದ ನನಗೆ ಕರ್ನಾಟಕದ ಜನರು ನೀಡಿದ ಪ್ರೀತಿ ಅಪಾರವಾಗಿದೆ. ಅದೇ ಪ್ರೀತಿ ಈ ಸಿನಿಮಾಗೂ ಸಿಗಲಿ’ ಎಂದು ಸುನಾಮಿ ಕಿಟ್ಟಿ ಹೇಳಿದರು. ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ಕಲಾವಿದರಾದ ಎಂ.ಕೆ. ಮಠ, ಮುನಿ, ಮ್ಯೂಸಿಕ್​ ಡೈರೆಕ್ಟರ್​ ಹೇಮಂತ್ ಕುಮಾರ್, ಗೀತರಚನಕಾರ ಗೊಲ್ಲಹಳ್ಳಿ ಶಿವಪ್ರಸಾದ್, ಛಾಯಾಗ್ರಾಹಕ ಸೆಲ್ವಂ, ಗಾಯಕ ರವೀಂದ್ರ ಸೊರಗಾವಿ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಇದನ್ನೂ ಓದಿ: ‘ಕೋರ’ ಚಿತ್ರದ ಟೀಸರ್​ ನೋಡಿ ಅಭಿಪ್ರಾಯ ಹಂಚಿಕೊಂಡ ‘ಒರಟ’ ಪ್ರಶಾಂತ್​

ಈ ಸಿನಿಮಾದಲ್ಲಿ ವಿಭಿನ್ನ ಕಥಾಹಂದರ ಇದೆ ಎಂದು ಹೇಳಿರುವ ನಿರ್ದೇಶಕ ಒರಟ ಶ್ರೀ ಅವರು ಹೇಳಿದ್ದಾರೆ. ‘ನಮ್ಮ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳಿವೆ. ಅವರು ಕೊಡುವ ಹಣಕ್ಕೆ ಮೋಸ ಆಗುವುದಿಲ್ಲ. ಸುನಾಮಿ ಕಿಟ್ಟಿ ಈ ಸಿನಿಮಾದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಅವರಿಗೆ ಚರಿಶ್ಮಾ ಜೋಡಿ ಆಗಿದ್ದಾರೆ. ನಿರ್ಮಾಪಕ‌ ಪಿ. ಮೂರ್ತಿ ವಿಲನ್​ ಆಗಿ ನಟಿಸಿದ್ದಾರೆ’ ಎಂದು ಒರಟ ಶ್ರೀ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ