ಮತ್ತೆ ಮಹೇಶ್ ಬಾಬು ಫಾರಿನ್ ಟ್ರಿಪ್: ಇನ್ನಷ್ಟು ತಡ ಆಗಲಿದೆ ‘ವಾರಾಣಸಿ’ ಶೂಟಿಂಗ್

ಸಿನಿಮಾದ ಕೆಲಸಗಳಲ್ಲಿ ಮಹೇಶ್ ಬಾಬು ಎಷ್ಟೇ ಬ್ಯುಸಿ ಆಗಿದ್ದರೂ ಫ್ಯಾಮಿಲಿಗೆ ಸಮಯ ಕೊಡುವುದನ್ನು ತಪ್ಪಿಸಲ್ಲ. ಈಗ ಅವರು ‘ವಾರಾಣಸಿ’ ಸಿನಿಮಾಗೆ ಮೊದಲ ಹಂತದ ಶೂಟಿಂಗ್ ಮುಗಿಸಿ ಫಾರಿನ್ ಟ್ರಿಪ್ ತೆರಳಿದ್ದಾರೆ. ಮಹೇಶ್ ಬಾಬು ಅವರು ವಿದೇಶದಿಂದ ವಾಪಸ್ ಬಂದ ನಂತರವೇ ಮುಂದಿನ ಹಂತದ ಶೂಟಿಂಗ್ ಆರಂಭ ಆಗಲಿದೆ.

ಮತ್ತೆ ಮಹೇಶ್ ಬಾಬು ಫಾರಿನ್ ಟ್ರಿಪ್: ಇನ್ನಷ್ಟು ತಡ ಆಗಲಿದೆ ‘ವಾರಾಣಸಿ’ ಶೂಟಿಂಗ್
Mahesh Babu

Updated on: Nov 30, 2025 | 8:04 AM

ನಟ ಮಹೇಶ್ ಬಾಬು ಅವರ ‘ವಾರಾಣಸಿ’ (Varanasi) ಸಿನಿಮಾ ಟೈಟಲ್ ಕೆಲವೇ ದಿನಗಳ ಹಿಂದೆ ಲಾಂಚ್ ಆಯಿತು. ಈ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ರಾಜಮೌಳಿ ನಿರ್ದೇಶನದ ಸಿನಿಮಾ ಎಂಬ ಕಾರಣದಿಂದ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಎಲ್ಲರಿಗೂ ಗೊತ್ತಿರುವಂತೆ ರಾಜಮೌಳಿ (SS Rajamouli) ಅವರ ಸಿನಿಮಾ ಕೆಲಸಗಳು ವರ್ಷಗಟ್ಟಲೆ ನಡೆಯುತ್ತವೆ. ಉತ್ತಮ ಗುಣಮಟ್ಟದ ಸಿನಿಮಾವನ್ನು ಜನರಿಗೆ ನೀಡಬೇಕು ಎಂಬ ಕಾರಣಕ್ಕೆ ಅವರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಈಗ ‘ವಾರಾಣಸಿ’ ಸಿನಿಮಾದ ಕೆಲಸ ಇನ್ನಷ್ಟು ತಡ ಆಗುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಮಹೇಶ್ ಬಾಬು (Mahesh Babu) ಅವರ ಫಾರಿನ್ ಟ್ರಿಪ್!

ಮಹೇಶ್ ಬಾಬು ಅವರು ಸಿನಿಮಾದ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಫ್ಯಾಮಿಲಿಗೆ ಸಮಯ ಕೊಡುವುದನ್ನು ತಪ್ಪಿಸಲ್ಲ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು, ಕುಟುಂಬದ ಜೊತೆ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಾರೆ. ಈಗಾಗಲೇ ‘ವಾರಾಣಸಿ’ ಸಿನಿಮಾಗೆ ಮೊದಲ ಹಂತದ ಶೂಟಿಂಗ್ ಮುಗಿಸಿರುವ ಮಹೇಶ್ ಬಾಬು ಅವರು ಫ್ಯಾಮಿಲಿ ಜೊತೆ ವಿದೇಶಕ್ಕೆ ತೆರಳಿದ್ದಾರೆ.

ಈ ಮೊದಲು ‘ವಾರಾಣಸಿ’ ಸಿನಿಮಾ ಕೆಲಸ ಶುರು ಆಗುವುದಕ್ಕೂ ಮುನ್ನ ರಾಜಮೌಳಿ ಅವರು ತಮಾಷೆ ಮಾಡಿದ್ದರು. ಮಹೇಶ್ ಬಾಬು ಅವರ ಪಾಸ್​ಪೋರ್ಟ್​ ತಮ್ಮ ವಶದಲ್ಲಿ ಇದೆ ಎಂಬರ್ಥದಲ್ಲಿ ಫೋಟೋ ಪೋಸ್ಟ್ ಮಾಡಿದ್ದರು. ಪದೇ ಪದೇ ಫಾರಿನ್ ಟ್ರಿಪ್​​ಗೆ ಹೋಗುವ ಮಹೇಶ್ ಬಾಬು ಅವರನ್ನು ತಾವು ಬಂಧಿಸಿರುವ ರೀತಿಯಲ್ಲಿ ಅವರು ಪೋಸ್ ನೀಡಿದ್ದರು.

ಅದೇನೇ ಇರಲಿ, ಮಹೇಶ್ ಬಾಬು ಅವರು ಹೆಂಡತಿ-ಮಕ್ಕಳ ಜೊತೆ ಫಾರಿನ್ ಟ್ರಿಪ್​ ತೆರಳುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಅವರು ‘ವಾರಾಣಸಿ’ ಸಿನಿಮಾದ ಕೆಲಸಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಅವರು ಮರಳಿ ಬಂದ ನಂತರವೇ ಶೂಟಿಂಗ್ ಪುನಾರಂಭ ಆಗಲಿದೆ. ಹಾಗಾಗಿ ಚಿತ್ರೀಕರಣ ತಡ ಆಗಲಿದೆ. ‘ಆರ್​ಆರ್​ಆರ್’ ಯಶಸ್ಸಿನ ಬಳಿಕ ರಾಜಮೌಳಿ ಮಾಡುತ್ತಿರುವ ಸಿನಿಮಾ ಆದ್ದರಿಂದ ‘ವಾರಾಣಸಿ’ ಮೇಲೆ ಹೈಪ್ ಕ್ರಿಯೇಟ್ ಆಗಿದೆ.

ಇದನ್ನೂ ಓದಿ: ದೇವರ ಮೇಲೆ ನಂಬಿಕೆ ಇಲ್ಲದಿದ್ದರೂ ರಾಜಮೌಳಿಗೆ ದೊಡ್ಡ ಗೆಲುವು ಸಿಕ್ಕಿದೆ: ಆರ್​ಜಿವಿ ಬೆಂಬಲ

ಇನ್ನು, ಈ ಸಿನಿಮಾದ ಟೈಟಲ್ ಕೂಡ ವಿವಾದಕ್ಕೆ ಕಾರಣ ಆಗುತ್ತಿದೆ. ‘ವಾರಾಣಸಿ’ ಶೀರ್ಷಿಕೆಯನ್ನು 2 ವರ್ಷಗಳ ಹಿಂದೆಯೇ ತಾವು ನೋಂದಣಿ ಮಾಡಿಸಿಕೊಂಡಿರುವುದಾಗಿ ನಿರ್ದೇಶಕ ಸಿ.ಹೆಚ್. ಸುಬ್ಬಾ ರೆಡ್ಡಿ ಅವರು ಹೇಳಿದ್ದಾರೆ. ಹಾಗಾಗಿ ರಾಜಮೌಳಿ ಅವರು ಈ ಶೀರ್ಷಿಕೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ‘Rajamouli’s Varanasi’ ಎಂದು ಶೀರ್ಷಿಕೆಯನ್ನು ಬದಲಿಸಿಕೊಳ್ಳಬಹುದು ಎಂದು ಊಹಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.