ಜನಪ್ರಿಯ ಮಲಯಾಳಂ ಸಿನಿಮಾ ನಿರ್ದೇಶಕ ಕೆಜಿ ಜಾರ್ಜ್ ನಿಧನ

KG George: ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಕೆಜಿ ಜಾರ್ಜ್ ನಿಧನ ಹೊಂದಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಹೊಸ ಅಲೆಯನ್ನು ನಿರ್ದೇಶಕರಲ್ಲಿ ಕೆಜಿ ಜಾರ್ಜ್ ಪ್ರಮುಖರು.

ಜನಪ್ರಿಯ ಮಲಯಾಳಂ ಸಿನಿಮಾ ನಿರ್ದೇಶಕ ಕೆಜಿ ಜಾರ್ಜ್ ನಿಧನ
ಕೆಜಿ ಜಾರ್ಜ್

Updated on: Sep 24, 2023 | 5:18 PM

ಮಲಯಾಳಂ (Malayalam) ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ಸಿನಿಮಾ ನಿರ್ದೇಶಕ ಕೆಜಿ ಜಾರ್ಜ್ ಇಂದು (ಸೆಪ್ಟೆಂಬರ್ 24) ರಂದು ನಿಧನ ಹೊಂದಿದ್ದಾರೆ. ಕೊಚ್ಚಿಯ ಹೊರವಲಯದಲ್ಲಿ ಕಕ್ಕನಾಡ್​ನ ವೃದ್ಧಾಶ್ರಮದಲ್ಲಿ ಜಾರ್ಜ್ ನಿಧನ ಹೊಂದಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. 1972ರಲ್ಲಿ ಚಿತ್ರರಂಗಕ್ಕೆ ಸಹಾಯಕ ನಿರ್ದೇಶಕರಾಗಿ ಕಾಲಿಟ್ಟ ಜಾರ್ಜ್ ಆ ನಂತರ ಹಲವು ಅತ್ಯುತ್ತಮ ಮಲಯಾಳಂ ಸಿನಿಮಾಗಳನ್ನು ನೀಡಿದ್ದಾರೆ.

1946ರಲ್ಲಿ ಜನಿಸಿದ ಕೆಜಿ ಜಾರ್ಜ್, ಪುಣೆಯ ಫಿಲಂ ಇನ್​ಸ್ಟಿಟ್ಯೂಟ್​ನಲ್ಲಿ ಸಿನಿಮಾ ಕುರಿತು ಡಿಪ್ಲೋಮಾ ಕೋರ್ಸ್ ಮಾಡಿದ್ದರು. 1972ರಲ್ಲಿ ಸಹಾಯಕ ನಿರ್ದೇಶಕನಾಗಿ ಮಲಯಾಳಂ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದ ಕೆಜಿ ಜಾರ್ಜ್ ಮೂರು ದಶಕಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿದ್ದು, ಹಲವು ಅತ್ಯುತ್ತಮ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ.

ಇದನ್ನೂ ಓದಿ:ಸೈಮಾ 2023: ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾ, ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ

ಹೊಸ ಮಾದರಿಯ ಸಿನಿಮಾ ನಿರ್ದೇಶಕ, ಕತೆ ಹೇಳುವಿಕೆಯನ್ನು ಮಲಯಾಳಂ ಚಿತ್ರರಂಗಕ್ಕೆ ಕೆಜಿ ಜಾರ್ಜ್ ಪರಿಚಯಿಸಿದರು. ಅಲ್ಲಿ ವರೆಗೂ ಇದ್ದ ಸೂತ್ರಗಳನ್ನು ಮುರಿದು ಹೊಸ ಮಾದರಿಗಳನ್ನು ಕಟ್ಟಿದರು. ಕಲ್ಟ್ ಎನ್ನಬಹುದಾದ ಹಲವು ಸಿನಿಮಾಗಳನ್ನು ಜಾರ್ಜ್ ಮಲಯಾಳಂ ಚಿತ್ರರಂಗಕ್ಕೆ ನೀಡಿದ್ದಾರೆ. ತನಿಖೆ ಆಧರತ ಕತೆಯುಳ್ಳ ‘ಯುವನಿಕ್ಕಾ’, ರಾಜಕೀಯ ಸಟೈರ್ ಮಾದರಿ ಕತೆ ಹೊಂದಿರುವ ‘ಪಂಚಾವದಿ ಪಲಂ’, ಸೈಕಾಲಾಜಿಕಲ್ ಥ್ರಿಲ್ಲರ್ ‘ಇರಕ್ಕಲ್’ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳನ್ನು ಜಾರ್ಜ್ ನೀಡಿದ್ದಾರೆ.

ಜಾರ್ಜ್ ನಿಧನಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಮ್ಮುಟಿ ಅವರ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದ ಜಾರ್ಜ್, ಅವರೊಟ್ಟಿಗೆ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಜಾರ್ಜ್​ ಅವರು 1998 ರಲ್ಲಿ ನಿರ್ದೇಶಿಸಿದ ‘ಎಲವಂಕೋಡು ದೇಶಂ’ ಬಳಿಕ ಇನ್ಯಾವುದೇ ಸಿನಿಮಾ ನಿರ್ದೇಶನ ಮಾಡಲಿಲ್ಲ. ಜಾರ್ಜ್ ನಿಧನಕ್ಕೆ ಮಮ್ಮುಟಿ, ಪೃಥ್ವಿರಾಜ್ ಸುಕುಮಾರನ್, ರಂಜಿತ್ ಸೇರಿದಂತೆ ಇನ್ನು ಮಲಯಾಳಂ ಚಿತ್ರರಂಗದ ಇನ್ನೂ ಹಲವು ಗಣ್ಯರು ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ