ಎಂಟು ತಿಂಗಳ ಬಳಿಕ ನಟನೆಗೆ ಮರಳಲು ರೆಡಿ ಆದ ಮಲಯಾಳಂ ನಟ ಮಮ್ಮುಟ್ಟಿ

ಮಮ್ಮುಟ್ಟಿ ಅವರು ಕಳೆದ ಎಂಟು ತಿಂಗಳಿಂದ ನಟನೆಯಿಂದ ದೂರ ಇದ್ದರು. ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡೂ ಇರಲಿಲ್ಲ. ಇದಕ್ಕೆ ಕಾರಣ ಏನು ಎಂಬ ವಿಚಾರ ರಿವೀಲ್ ಆಗಿರಲಿಲ್ಲ. ಕೆಲವರು ಇದನ್ನು ಕ್ಯಾನ್ಸರ್ ಎಂದು ಕೂಡ ಹೇಳಿದ್ದರು. ಅವರು ಇದರಿಂದ ಹೀಲ್ ಆಗಿದ್ದಾರೆ.

ಎಂಟು ತಿಂಗಳ ಬಳಿಕ ನಟನೆಗೆ ಮರಳಲು ರೆಡಿ ಆದ ಮಲಯಾಳಂ ನಟ ಮಮ್ಮುಟ್ಟಿ
ಮಮ್ಮುಟ್ಟಿ
Edited By:

Updated on: Sep 29, 2025 | 3:00 PM

ಎಂಟು ತಿಂಗಳ ನಂತರ ಮಲಯಾಳಂ ನಟ ಮಮ್ಮುಟ್ಟಿ (Mammootty) ನಟನೆಗೆ ಮರಳುತ್ತಿದ್ದಾರೆ. ಮಹೇಶ್ ನಾರಾಯಣನ್ ಅವರ ಬಿಗ್ ಬಜೆಟ್ ಚಿತ್ರ ‘ಪ್ಯಾಟ್ರಿಯಾಟ್’ನಲ್ಲಿ ಮಮ್ಮುಟ್ಟಿ ಮತ್ತೆ ನಟಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕ ಆ್ಯಂಟೋ ಜೋಸೆಫ್ ಸ್ವತಃ ತಮ್ಮ ಫೇಸ್‌ಬುಕ್​ ಅಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ. ಅನಾರೋಗ್ಯದ ಕಾರಣ ಮಮ್ಮುಟ್ಟಿ ಹಲವು ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಅವರು ನಟನೆಗೆ ಮರಳುತ್ತಿರುವ ಬಗ್ಗೆ ಫ್ಯಾನ್ಸ್​ಗೆ ಖುಷಿ ಇದೆ.

ಮಮ್ಮುಟ್ಟಿ ಅವರು ಕಳೆದ ಎಂಟು ತಿಂಗಳಿಂದ ನಟನೆಯಿಂದ ದೂರ ಇದ್ದರು. ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡೂ ಇರಲಿಲ್ಲ. ಇದಕ್ಕೆ ಕಾರಣ ಏನು ಎಂಬ ವಿಚಾರ ರಿವೀಲ್ ಆಗಿರಲಿಲ್ಲ. ಕೆಲವರು ಇದನ್ನು ಕ್ಯಾನ್ಸರ್ ಎಂದು ಕೂಡ ಹೇಳಿದ್ದರು. ಅವರು ಇದರಿಂದ ಹೀಲ್ ಆಗಿದ್ದಾರೆ. ಚೆನ್ನೈನಲ್ಲಿ ಟ್ರೀಟ್​ಮೆಂಟ್ ಪಡೆದರು. ಅವರು ನಟನೆಗೆ ಮರಳುತ್ತಿರುವುದು ಖುಷಿಯ ವಿಚಾರ.

‘ನನ್ನ ಪ್ರೀತಿಯ ಮಮ್ಮುಟ್ಟಿ ಬರುತ್ತಿದ್ದಾರೆ. ಅವರು ಅಕ್ಟೋಬರ್ 1ರಿಂದ ಮಹೇಶ್ ನಾರಾಯಣನ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಅವರು ತೆಗೆದುಕೊಂಡಿದ್ದು ಒಂದು ಸಣ್ಣ ವಿರಾಮ. ಮಮ್ಮುಟ್ಟಿ ಹೈದರಾಬಾದ್​ನಲ್ಲಿ ಶೂಟಿಂಗ್​ಗೆ ಸೇರುತ್ತಾರೆ. ಪ್ರಾರ್ಥನೆಯಲ್ಲಿ ಸೇರಿಕೊಂಡು ನಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರಿಗೆ ಹೃತ್ಪೂರ್ವಕ ಕೃತಜ್ಞತೆ ಮತ್ತು ಪ್ರೀತಿ’ ಎಂದು ಆಂಟೋ ಜೋಸೆಫ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ
ನಾನು ಬಾಲ್ಯದಲ್ಲಿ ಕುಂದಾಪುರದ ಬಗ್ಗೆ ಕೇಳಿದ ಕಥೆ ಸಿನಿಮಾ ಆಗಿದೆ; JR NTR
‘ಇನ್ಮುಂದೆ ಈ ರೀತಿಯ ವಿಡಿಯೋ ಬರಲ್ಲ’ ಎಂದ ಮಮ್ಮಿ ಅಶೋಕ್
‘ಬಿಗ್ ಬಾಸ್’ ಮನೆ ಪ್ರವೇಶಿಸಿದ ಎಲ್ಲಾ ಸ್ಪರ್ಧಿಗಳ ಫೋಟೋ, ಹೆಸರು, ವಿವರ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

‘ಪ್ಯಾಟ್ರಿಯಾಟ್’ ಚಿತ್ರವು ಮಮ್ಮುಟ್ಟಿ, ಮೋಹನ್ ಲಾಲ್, ಕುಂಚಾಕೊ ಬೋಬನ್, ಫಹಾದ್ ಫಾಸಿಲ್, ನಯನತಾರಾ ಮತ್ತು ಇತರ ದೊಡ್ಡ ತಾರೆಯರು ನಟಿಸಿರುವ ದೊಡ್ಡ ಬಜೆಟ್ ಚಿತ್ರವಾಗಿದೆ. ಮಮ್ಮುಟ್ಟಿ ಮತ್ತು ಮೋಹನ್ ಲಾಲ್ 16 ವರ್ಷಗಳ ನಂತರ ದೊಡ್ಡ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹರಿಕೃಷ್ಣನ್ಸ್ ಚಿತ್ರದ ನಂತರ ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ಕುಂಚಾಕೊ ಬೋಬನ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರವೂ ಇದಾಗಿದೆ. ಈ ಸಿನಿಮಾದ ಶೆ.60ರಷ್ಟು ಶೂಟ್ ಪೂರ್ಣಗೊಂಡಿದೆ.

ಇದನ್ನೂ ಓದಿ: ಮಮ್ಮೂಟ್ಟಿ ನಟನೆಯ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ವೀಕ್ಷಿಸಿದ್ದೀರಾ?

ಮಮ್ಮುಟ್ಟಿ ಮಲಯಾಳಂನ ಹಿರಿಯ ನಟ. ಅವರು ಕಂಬ್ಯಾಕ್ ಮಾಡುತ್ತಿರುವ ಬಗ್ಗೆ ಫ್ಯಾನ್ಸ್​ಗೂ ಖುಷಿ ಇದೆ. ಅವರು ಬರುತ್ತಿರುವುದನ್ನು ಸಂಭ್ರಮಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.