ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ಹೇಳುತ್ತಿರುವ ಸುಳ್ಳುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ಕ್ಷಣ ಒಂದು ರೀತಿ ಇದ್ದರೆ ಮರು ಕ್ಷಣವೇ ಅವರು ಬದಲಾಗುತ್ತಾರೆ. ಅದು ಈಗ ಮನೆಯಲ್ಲಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಮಂಜು ಹಾಗೂ ಪ್ರಶಾಂತ್ ನಡುವೆ ಘನಘೋರ ಜಗಳವೇ ನಡೆದು ಹೋಗಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಪದೇಪದೇ ಮಂಜು ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಜನರನ್ನು ಮಂಜು ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಕೆಲವೊಮ್ಮೆ ಇದು ಯಶಸ್ವಿ ಆದರೆ, ಇನ್ನೂ ಕೆಲವೊಮ್ಮೆ ಇದು ಸಾಧ್ಯವಾಗಿಲ್ಲ. ದಿವ್ಯಾ ಸುರೇಶ್ ವಿಚಾರಕ್ಕಂತೂ ಸಾಕಷ್ಟು ಬಾರಿ ಮಂಜು ಹಾಗೂ ಪ್ರಶಾಂತ್ ನಡುವೆ ಜಗಳವಾಗಿದೆ.
ಮಂಜು ಅವರು ದಿವ್ಯಾ ಸುರೇಶ್ ಬಾಡಿಗಾರ್ಡ್ ಎಂದು ಹೇಳಿದರು. ನೀವು ಒಬ್ಬರಿಗೆ ಹೇಳುವಾಗ ಬೇರೆಯವರ ಹೆಸರು ತೆಗೆದುಕೊಳ್ಳುವುದು ಇಷ್ಟವಾಗುವುದಿಲ್ಲ ಎಂದರು. ಮಂಜು ದಿವ್ಯಾ ಬಾಡಿಗಾರ್ಡ್ ಎಂಬುದನ್ನು ನಾನು ಎಲ್ಲಿ ನಿಂತು ಬೇಕಾದರೂ ಹೇಳುತ್ತೇನೆ ಎಂದರು.
ಈ ವೇಳೆ ಮಂಜು ಬಂದು ನನ್ನ ಹೆಸರನ್ನು ಏಕೆ ತೆಗೆದುಕೊಳ್ಳುತ್ತೀಯಾ? ಎನ್ನುತ್ತಿದ್ದಂತೆ ಪ್ರಶಾಂತ್ ಪ್ಲೇಟ್ ತಿರುಗಿಸಿ ಬಿಟ್ಟರು. ನಾನು ನಿನ್ನ ಹೆಸರೇ ತೆಗೆದುಕೊಂಡಿಲ್ಲ ಎಂದು ನಿರಂತರವಾಗಿ ವಾದ ಮಾಡುತ್ತಲೇ ಬಂದರು. ಮಂಜುಗೆ ಕೋಪ ನೆತ್ತಿಗೇರಿತ್ತು. ನೀನು ಮೊದಲು ನೆಟ್ಟಗೆ ಇರು. ಆಮೇಲೆ ಬೇರೆಯವರಿಗೆ ಹೇಳೋಕೆ ಬಾ ಎಂದರು. ಕೊನೆಗೂ ಮನೆಯವರ ಸಮ್ಮುಖದಲ್ಲಿ ಈ ಜಗಳ ತಣ್ಣಗಾಯಿತು.
9ನೇ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. ಹೀಗಾಗಿ ಎಲ್ಲಾ ಸ್ಪರ್ಧಿಗಳು ಸೇಫ್ ಆದರು. ಮುಂದಿನ ವಾರದ ನಾಮಿನೇಷನ್ ಲಿಸ್ಟ್ನಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಇದ್ದಾರೆ. ಇವರಲ್ಲಿ ಒಬ್ಬರು ಮುಂದಿನ ವಾರ ಮನೆಯಿಂದ ಹೊರ ಹೋಗುತ್ತಾರೆ.
ಇದನ್ನೂ ಓದಿ: ಆಪ್ತ ಚಂದ್ರಚೂಡ್ ವಿರುದ್ಧವೇ ತಿರುಗಿಬಿದ್ದ ಪ್ರಶಾಂತ್ ಸಂಬರಗಿ; ಬಿಗ್ ಬಾಸ್ ಮನೆಯಲ್ಲಿ 36 ಗಂಟೆಗಳ ಉಪವಾಸ
ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ
(Manju Pavagada and Prashanth Sambargi conflict became worse in Bigg Boss Kannada)
Published On - 8:37 am, Mon, 3 May 21