ಆಪ್ತ ಚಂದ್ರಚೂಡ್ ವಿರುದ್ಧವೇ ತಿರುಗಿಬಿದ್ದ ಪ್ರಶಾಂತ್ ಸಂಬರಗಿ; ಬಿಗ್ ಬಾಸ್ ಮನೆಯಲ್ಲಿ 36 ಗಂಟೆಗಳ ಉಪವಾಸ
ಕ್ಯಾಪ್ಟನ್ಸಿ ಅಭ್ಯರ್ಥಿ ಆಯ್ಕೆಗೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಅರವಿಂದ್ ಕೆ.ಪಿ., ಪ್ರಶಾಂತ್ ಸಂಬರಗಿ ಹಾಗೂ ಪ್ರಿಯಾಂಕಾ ತಿಮ್ಮೇಶ್ ಈ ಟಾಸ್ಕ್ನಲ್ಲಿದ್ದರು.
ಪ್ರಶಾಂತ್ ಸಂಬರಗಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡವರು. ಎಲ್ಲಿ ಅನ್ಯಾಯ ಕಾಣುತ್ತದೆಯೋ ಅದರ ವಿರುದ್ಧ ನಾನು ಹೋರಾಡಿದ್ದೇನೆ. ಇದನ್ನು ಬಿಗ್ ಬಾಸ್ ಮನೆಯಲ್ಲೂ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಅವರು ಹೇಳಿದ್ದರು. ಈ ಕೆಲಸವನ್ನು ಪ್ರಶಾಂತ್ ಚಾಚೂ ತಪ್ಪದೆ ಮಾಡುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಕೆಲವೊಮ್ಮೆ ಇದು ಅತೀ ಎನಿಸಿದ್ದೂ ಇದೆ. ಈಗಲೂ ಹಾಗೆಯೇ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಪ್ರಶಾಂತ್ ಸಂಬರಗಿ 36 ಗಂಟೆಗಳ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಕ್ಯಾಪ್ಟನ್ಸಿ ಅಭ್ಯರ್ಥಿ ಆಯ್ಕೆಗೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಅರವಿಂದ್ ಕೆ.ಪಿ., ಪ್ರಶಾಂತ್ ಸಂಬರಗಿ ಹಾಗೂ ಪ್ರಿಯಾಂಕಾ ತಿಮ್ಮೇಶ್ ಈ ಟಾಸ್ಕ್ನಲ್ಲಿದ್ದರು. ನಿಯಮದ ಅನುಸಾರ ಮಲಗಿಕೊಂಡು ಬಾಲ್ ದೂಕಿ ಒಂದು ತುದಿಯಿಂದ ಅದನ್ನು ಮತ್ತೊಂದು ತುದಿಗೆ ಕೊಂಡೊಯ್ಯ ಬೇಕಿತ್ತು. ಈ ಆಟದಲ್ಲಿ ಮೊದಲು ಪ್ರಶಾಂತ್ ಗೆದ್ದಿದ್ದಾರೆ ಎಂದು ಘೋಷಣೆ ಮಾಡಲಾಯಿತು. ನಂತರ ಅರವಿಂದ್ಗೆ ವಿಜಯದ ಮಾಲೆ ಹಾಕಲಾಯಿತು.
ಇದನ್ನು ಪ್ರಶಾಂತ್ ಸಂಬರಗಿ ಬಳಿ ಸಹಿಸಿಕೊಳ್ಳೋಕೆ ಆಗಲಿಲ್ಲ. ಕ್ಯಾಮೆರಾ ಮುಂದೆ ಬಂದ ಅವರು, ಕೊನೆಯ ಆಟದಲ್ಲಿ ಮೊದಲು ನನ್ನನ್ನು ವಿಜೇತನೆಂದು ಘೋಷಣೆ ಮಾಡಿದರು. ನಂತರ ಚರ್ಚೆ ಮಾಡಿ ನಾನು ಸೋತೆ ಅಂತ ಹೇಳಿದ್ದರು. ಈ ಮೂಲಕ ನನಗೆ ಕ್ಯಾಪ್ಟನ್ಸಿ ಟಾಸ್ಕ್ ಆಡೋಕೆ ಅವಕಾಶ ಕೊಟ್ಟಿಲ್ಲ. ಇದನ್ನು ಖಂಡಿಸಿ ನಾನು 36 ಗಂಟೆಗಳ ಕಾಲ ಊಟ ಮಾಡುತ್ತಿಲ್ಲ. ಮನೆಯಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ವಿರುದ್ಧವಾಗಿ ಈ ಪ್ರತಿಭಟನೆ ಎಂದರು.
ನಂತರ ಮನೆಯ ಒಳಗೆ ಬಂದ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಹರಿಹಾಯ್ದರು. ನೀನು ಅಲ್ಲಿ ಸರಿಯಾಗಿ ಮಾತನಾಡಿಲ್ಲ. ಆ ಕಾರಣಕ್ಕೇ ಹೀಗೆಲ್ಲ ಆಯಿತು ಎಂದು ಪ್ರಶಾಂತ್ ಆರೋಪಿಸಿದರು. ನಂತರ ಮಾತು ಮುಂದುವರಿಸಿ, ಒಬ್ಬರಿಗೆ ಇಷ್ಟೊಂದು ಫೇವರಿಸಂ ಇರುತ್ತದೆಯೇ? ಬಿಗ್ ಬಾಸ್ ಊಟ ಮಾಡಿ ಎನ್ನುವರೆಗೆ ನಾನು ಊಟ ಮಾಡಲು ಮಾಡಲ್ಲ ಎಂದು ಶಪಥ ಮಾಡಿದರು.
ಈ ಮೊದಲು ಪ್ರಶಾಂತ್ ಕಳಪೆ ಪಟ್ಟ ಹೊತ್ತು ಬಿಗ್ ಬಾಸ್ ಜೈಲಿನೊಳಗೆ ಹೋಗಿದ್ದರು. ಉದ್ದೇಶಪೂರ್ವಕವಾಗಿಯೇ ಕಳಪೆ ಪಟ್ಟ ನೀಡಲಾಗಿದೆ ಎಂದು ಆರೋಪಿಸಿ ಅವರು ಒಂದು ದಿನ ಉಪವಾಸ ಮಾಡಿದ್ದರು.
ಇದನ್ನೂ ಓದಿ: ನನ್ನನ್ನು ವೇಶ್ಯೆ ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು; ಭಯಾನಕ ಘಟನೆ ಬಗ್ಗೆ ಹೇಳಿಕೊಂಡ ಚಕ್ರವರ್ತಿ
ಶುಭಾ ಪೂಂಜಾ ಮೇಲೆ ಕಣ್ಣಿಟ್ಟ ಪ್ರಶಾಂತ್ ಸಂಬರಗಿ; ವೀಕೆಂಡ್ನಲ್ಲಿ ಕಾದಿದೆ ಟ್ವಿಸ್ಟ್