ನನ್ನನ್ನು ವೇಶ್ಯೆ ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು; ಭಯಾನಕ ಘಟನೆ ಬಗ್ಗೆ ಹೇಳಿಕೊಂಡ ಚಕ್ರವರ್ತಿ

ಓರ್ವ ಕಾನ್ಸ್​ಟೇಬಲ್​ ನನ್ನನ್ನು ಬದುಕಿಸಿದ. ಅಲ್ಲಿಂದ ಬಂದು ನಾನು ನೇರವಾಗಿ ಹಿಮಾಲಯಕ್ಕೆ ಹೋದೆ. ನಂತರ ಬೆಂಗಳೂರಿಗೆ ಬಂದೆ ಎಂದು ಚಕ್ರವರ್ತಿ ಚಂದ್ರಚೂಡ್​ ಹೇಳಿದ್ದಾರೆ.

ನನ್ನನ್ನು ವೇಶ್ಯೆ ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು; ಭಯಾನಕ ಘಟನೆ ಬಗ್ಗೆ ಹೇಳಿಕೊಂಡ ಚಕ್ರವರ್ತಿ
ಚಕ್ರವರ್ತಿ ಚಂದ್ರಚೂಡ
Rajesh Duggumane

| Edited By: Madan Kumar

Apr 29, 2021 | 7:31 AM

ಚಕ್ರವರ್ತಿ ಚಂದ್ರಚೂಡ್​ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದವರು. ಈ ಬಗ್ಗೆ ಅವರು ಮನೆಯಲ್ಲಿ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ ಕೂಡ. ಈಗ ಅವರು ಭಯಾನಕ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಜೀವನದಲ್ಲಿ ನಡೆದ ಈ ಘಟನೆ ಕೇಳಿ ಎಲ್ಲರೂ ಶಾಕ್​ ಆಗಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆ ಬಗ್ಗೆ ಹೇಳಬೇಕು. ಆಗ ಚಕ್ರವರ್ತಿ ಎದ್ದು ನಿಂತರು. ನಾನು ಚೆನ್ನೈ ರೈಲ್ವೆ ನಿಲ್ದಾಣದಲ್ಲಿದ್ದೆ. ಮೂರು ದಿನಗಳ ಕಾಲ ಹಸಿದುಕೊಂಡಿದ್ದೆ. ಮನೆಯ ಸಂಪರ್ಕ ಕಡಿತವಾಗಿತ್ತು. ಆಗ ನನಗೆ ಓರ್ವನ ಪರಿಚಯ ಆಯ್ತು. ಅವನು ನನ್ನನ್ನು ಕರೆದುಕೊಂಡು ಹೋಗಿ ವೇಶ್ಯರ ಮನೆಗೆ ಕೆಲಸಕ್ಕೆ ಬಿಟ್ಟಿದ್ದ. ಅಲ್ಲಿ 127 ಜನ ಇದ್ರು. ಇದೇ ವೇಳೆ 14 ವರ್ಷದ ಹುಡುಗಿಯನ್ನು ಅವಳದೇ ಚಿಕ್ಕಪ್ಪ ಮಾರಿ ಹೋಗಿದ್ದ. ನನಗೂ ಅವಳಿಗೂ ಪರಿಚಯ ಆಯಿತು ಎಂದು ಮಾತು ಆರಂಭಿಸಿದರು ಚಂದ್ರಚೂಡ್​.

ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು ಎಂದು ಬಾಲಕಿ ನನ್ನ ಬಳಿ ಅಂಗಲಾಚಿದಳು. ವೇಸ್ಟ್​ ತುಂಬಿಸಿಕೊಂಡು ಹೋಗುವ ಗಾಡಿಯಲ್ಲಿ ಇಬ್ಬರೂ ಹೊರಟೆವು. ರೈಲ್ವೆ ನಿಲ್ದಾಣಕ್ಕೆ ಹೋದೆವು. ದುಡ್ಡು ಕೂಡ ಇರಲಿಲ್ಲ. ಬೆಂಗಳೂರಿಗೆ ಹೋಗುವ ರೈಲು ಏರಿದೆವು. ಬಂಗಾರ ಪೇಟೆ ಬಳಿ ನಮ್ಮನ್ನು ಹಿಡಿದರು. ಇಬ್ಬರಿಗೂ ಸರಿಯಾಗಿ ಹೊಡೆದರು. ಅವಳು ಸತ್ತಳು. ನಾನು ಬದುಕಿದೆ ಎಂದು ಚಕ್ರವರ್ತಿ ಭಯಾನಕ ಘಟನೆ ಬಿಚ್ಚಿಟ್ಟಿದ್ದಾರೆ.

ಓರ್ವ ಕಾನ್ಸ್​ಟೇಬಲ್​ ನನ್ನನ್ನು ಬದುಕಿಸಿದ. ಅಲ್ಲಿಂದ ಬಂದು ನಾನು ನೇರವಾಗಿ ಹಿಮಾಲಯಕ್ಕೆ ಹೋದೆ. ಎರಡು ವರ್ಷ ಅಲ್ಲಿದ್ದೆ. ನಂತರ ಬೆಂಗಳೂರಿಗೆ ಬಂದೆ. ಆಗ ಪತ್ರಕರ್ತ, ಹೋರಾಟಗಾರನಾಗಿ ರೂಪುಗೊಂಡೆ. ವೇಶ್ಯೆಯರಿಗಾಗಿ ಏನಾದರೂ ಮಾಡಬೇಕು ಎಂದುಕೊಂಡೆ. 25 ವೇಶ್ಯಯರನ್ನು ಸೇರಿಸಿ ರವೀಂದ್ರ ಕಲಾಕ್ಷೆತ್ರದಲ್ಲಿ ನಾಟಕವಾಡಿಸಿದೆ ಎಂದು ತಮ್ಮ ಜೀವನದಲ್ಲಿ ನಡೆದ ಘಟನೆ ಬಗ್ಗೆ ಚಕ್ರವರ್ತಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  Bigg Boss Kannada: ಬಿಗ್​ ಬಾಸ್​ ಬೆಡ್​ರೂಂನಿಂದ ಬಂತು ಮುತ್ತಿನ ಶಬ್ದ! ಕೊಟ್ಟಿದ್ಯಾರು, ತೆಗೆದುಕೊಂಡಿದ್ಯಾರು?

ಬಿಗ್​ ಬಾಸ್​ ಎದುರು ಶುಭಾ ಪೂಂಜಾ ಇಟ್ಟ ಬೇಡಿಕೆ ನೋಡಿ ಮನೆಯವರಿಗೆ ಅಳಬೇಕೋ ನಗಬೇಕೋ ಗೊತ್ತಾಗ್ತಿಲ್ಲ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada