Bigg Boss Kannada: ಬಿಗ್​ ಬಾಸ್​ ಬೆಡ್​ರೂಂನಿಂದ ಬಂತು ಮುತ್ತಿನ ಶಬ್ದ! ಕೊಟ್ಟಿದ್ಯಾರು, ತೆಗೆದುಕೊಂಡಿದ್ಯಾರು?

Bigg Boss Kannada Rajeev: ರಾಜೀವ್​ ಹೊರಹೋದ ನಂತರ ಬೆಡ್​ರೂಂಗೆ ಬಂದು ಶುಭಾ ಕಣ್ಣೀರು ಹಾಕುತ್ತಾ ಮಲಗಿದ್ದರು. ಆಗ ಅವರ ಬಳಿ ಬಂದ ದಿವ್ಯಾ ಉರುಡುಗ ಹಾಗೂ ಅರವಿಂದ್ ಸಮಾಧಾನದ ಮಾತುಗಳನ್ನು ಆಡಿದರು.

Bigg Boss Kannada: ಬಿಗ್​ ಬಾಸ್​ ಬೆಡ್​ರೂಂನಿಂದ ಬಂತು ಮುತ್ತಿನ ಶಬ್ದ! ಕೊಟ್ಟಿದ್ಯಾರು, ತೆಗೆದುಕೊಂಡಿದ್ಯಾರು?
ಬಿಗ್ ಬಾಸ್​ ಕನ್ನಡ ಸೀಸನ್​ 8
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Apr 26, 2021 | 4:24 PM

ಈ ಮೊದಲು ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಪ್ರೀತಿ-ಪ್ರೇಮ ಹುಟ್ಟಿಕೊಂಡಿವೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರ ಅವರು ಮದುವೆ ಆದ ಉದಾಹರಣೆ ಕೂಡ ಇದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್-ದಿವ್ಯಾ ಉರುಡುಗ ಹಾಗೂ ಮಂಜು ಪಾವಗಡ-ದಿವ್ಯಾ ಸುರೇಶ್​ ನಡುವೆ ಏನೋ ನಡೆಯುತ್ತಿದೆ ಎಂಬುದು ಪ್ರೇಕ್ಷಕರಿಗೆ ಅರ್ಥವಾಗಿದೆ. ಹೀಗಿರುವಾಗಲೆ ಬಿಗ್​ ಬಾಸ್​ ಮನೆಯ ಬೆಡ್​ರೂಂನಲ್ಲಿ ಮುತ್ತಿನ ಶಬ್ದ ಕೇಳಿದೆ.

ಎಂಟನೇ ವಾರದ ಎಪಿಸೋಡ್​ನಲ್ಲಿ ಬಿಗ್​ ಬಾಸ್ ಮನೆಯಿಂದ ರಾಜೀವ್​ ಹೊರ ಹೋಗಿದ್ದಾರೆ. ಅವರು ಮನೆಯಿಂದ ಹೊರ ಹೋಗಿರುವುದು ಸಾಕಷ್ಟು ಜನರಿಗೆ ಶಾಕ್​ ಮೂಡಿಸಿದೆ. ಅದರಲ್ಲೂ ರಾಜೀವ್​ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದ ಶುಭಾ ಪೂಂಜಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಗೋಲ್ಡನ್​ ಪಾಸ್​ ಟಾಸ್ಕ್​ನಲ್ಲಿ ಶುಭಾ ಹಾಗೂ ರಾಜೀವ್​ ಒಪ್ಪಂದ ಮಾಡಿಕೊಂಡಿದ್ದರು ಎನ್ನುವ ವಿಚಾರ ಭಾನುವಾರ (ಏಪ್ರಿಲ್​ 25) ಎಪಿಸೋಡ್​ನಲ್ಲಿ ಗೊತ್ತಾಗಿದೆ. ರಾಜೀವ್​ಗೆ ಗೋಲ್ಡ್​ ಪಾಸ್​ ಸಿಕ್ಕ ಹೊರತಾಗಿಯೂ  ಅದನ್ನು ಬಳಸಿಕೊಳ್ಳಲಿಲ್ಲ. ಇದು ಅವರು ಮನೆಯಿಂದ ಹೊರ ಹೋಗಲು ಪ್ರಮುಖ ಕಾರಣವಾಗಿತ್ತು.

ಈ ವಿಚಾರ ಶುಭಾಗೆ ತುಂಬಾನೇ ಬೇಸರ ತರಿಸಿದೆ. ಹೀಗಾಗಿ, ಅವರು ಬಿಟ್ಟು ಬಿಡದೆ ಅಳೋಕೆ ಶುರುಮಾಡಿದ್ದಾರೆ. ರಾಜೀವ್​ ಹೊರಹೋದ ನಂತರ ಬೆಡ್​ರೂಂಗೆ ಬಂದು ಶುಭಾ ಕಣ್ಣೀರು ಹಾಕುತ್ತಾ ಮಲಗಿದ್ದರು. ಆಗ ಅವರ ಬಳಿ ಬಂದ ದಿವ್ಯಾ ಉರುಡುಗ ಹಾಗೂ ಅರವಿಂದ್ ಸಮಾಧಾನದ ಮಾತುಗಳನ್ನು ಆಡಿದರು. ಆಗಲೂ ಶುಭಾ ಕಣ್ಣೀರು ನಿಂತಿಲ್ಲ.

ಈ ವೇಳೆ ದಿವ್ಯಾ ಪ್ರೀತಿಯಿಂದ ಶುಭಾ ಅವರನ್ನು ಎಳೆದುಕೊಂಡು ಮುತ್ತಿಟ್ಟರು. ಬೆಡ್​ರೂಂನಲ್ಲಿ ಕತ್ತಲಿತ್ತು. ಪಕ್ಕದಲ್ಲಿ ಅರವಿಂದ್ ಕೂಡ ಇದ್ದಿದ್ದರಿಂದ ಆರಂಭದಲ್ಲಿ ದಿವ್ಯಾ ಮುತ್ತು ಕೊಟ್ಟಿದ್ದು ಅರವಿಂದ್​ಗೆ ಎಂದು ಅನೇಕರಿಗೆ ಅನಿಸಿತ್ತು. ಆದರೆ, ಮತ್ತೊಮ್ಮೆ ರಿವೈಂಡ್​ ಮಾಡಿ ನೋಡಿದಾಗ ದಿವ್ಯಾ ಮುತ್ತುಕೊಟ್ಟಿದ್ದು ಶುಭಾಗೆ ಎನ್ನುವುದು ಗೊತ್ತಾಗಿದೆ.

ಇನ್ನು, ರಾಜೀವ್​ ಬಿಗ್​ ಬಾಸ್ ಮನೆಯಿಂದ ಹೊರ ಹೋಗಿರುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ಆಗುತ್ತಿದೆ.

ಇದನ್ನೂ ಓದಿ: Bigg Boss Kannada: ಬಿಗ್​​ಬಾಸ್ ಮನೆಯಿಂದ ರಾಜೀವ್​ ಹೊರ ಹೋಗಿದ್ದು ಎಷ್ಟು ಸರಿ? ಸಾಮಾಜಿಕ ಜಾಲತಾಣದಲ್ಲಿ ಜೋರಾಯ್ತು ಚರ್ಚೆ

Published On - 4:08 pm, Mon, 26 April 21

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ