AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಬಿಗ್​​ಬಾಸ್ ಮನೆಯಿಂದ ರಾಜೀವ್​ ಹೊರ ಹೋಗಿದ್ದು ಎಷ್ಟು ಸರಿ? ಸಾಮಾಜಿಕ ಜಾಲತಾಣದಲ್ಲಿ ಜೋರಾಯ್ತು ಚರ್ಚೆ

Bigg Boss Kannada 8 Rajeev: ಮನೆಯಿಂದ ಹೊರ ಹೋಗುವವರ ವಿಟಿ ತೋರಿಸಲಾಯಿತು. ಈ ವೇಳೆ ರಾಜೀವ್​ ಅವರ ವಿಡಿಯೋ ಬಂತು. ಇದು ಮನೆಯವರಿಗೆ ಶಾಕ್​ ಆಯಿತು.

Bigg Boss Kannada: ಬಿಗ್​​ಬಾಸ್ ಮನೆಯಿಂದ ರಾಜೀವ್​ ಹೊರ ಹೋಗಿದ್ದು ಎಷ್ಟು ಸರಿ? ಸಾಮಾಜಿಕ ಜಾಲತಾಣದಲ್ಲಿ ಜೋರಾಯ್ತು ಚರ್ಚೆ
ರಾಜೀವ್​
ರಾಜೇಶ್ ದುಗ್ಗುಮನೆ
|

Updated on:Apr 30, 2021 | 4:04 PM

Share

Bigg Boss Kannada Season 8: ಬಿಗ್​ ಬಾಸ್ ಮನೆಯಿಂದ 8ನೇ ವಾರದ ಎಲಿಮಿನೇಷನ್​ನಲ್ಲಿ ಕ್ರಿಕೆಟರ್​ ಹಾಗೂ ನಟ ರಾಜೀವ್​ ಎಲಿಮಿನೇಟ್​​ ಆಗಿದ್ದಾರೆ. ಇದು ಮನೆಯವರಿಗೆ ಶಾಕ್​ ಆಗಿದೆ. ರಾಜೀವ್​ ಫ್ಯಾಮಿಲಿಗೆ ಬ್ಯಾಕ್​ಬೋನ್​ ರೀತಿ ಇದ್ದ ಎಂದು ನಿಧಿ ಅಭಿಪ್ರಾಯಪಟ್ಟಿದ್ದಾರೆ. ಗೋಲ್ಡನ್​ ಪಾಸ್​ ಬಳಸದೆ ಇರುವುದು ಅತಿದೊಡ್ಡ ತಪ್ಪಾಯ್ತು ಎಂದು ಕೆಲವರು ಹೇಳಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ರಾಜೀವ್​​ ಹೊರ ಹೋದ ಬಗ್ಗೆ ಚರ್ಚೆ ಜೋರಾಗಿದೆ.

ಸುದೀಪ್​ ಇಲ್ಲದೆ ಎಂಟನೇ ವಾರದ ಎಲಿಮಿನೇಷನ್​ ನಡೆದಿದೆ. ಪ್ರತಿ ಸ್ಪರ್ಧಿಗೆ ಭಿನ್ನ ಭಿನ್ನ ಟಾಸ್ಕ್​ ನೀಡುವ ಮೂಲಕ ಎಲಿಮಿನೇಷನ್​ನಿಂದ ಬಚಾವ್ ಮಾಡಲಾಯಿತು. ಕೊನೆಗೆ ಮನೆಯಿಂದ ಹೊರ ಹೋಗುವವರ ವಿಟಿ ತೋರಿಸಲಾಯಿತು. ಈ ವೇಳೆ ರಾಜೀವ್​ ಅವರ ವಿಡಿಯೋ ಬಂತು. ಇದು ಮನೆಯವರಿಗೆ ಶಾಕ್​ ಆಯಿತು.

ಮನೆಯಲ್ಲಿ ಇನ್ನೂ ತುಂಬಾನೇ ವೀಕ್​ ಕ್ಯಾಂಡಿಡೇಟ್​ ಇದ್ದಾರೆ. ಹೀಗಿರುವಾಗ ರಾಜೀವ್ ಮನೆಯಿಂದ ಹೊರ ಹೋಗಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ವೀಕ್ಷಕರು ಕೇಳಿಕೊಳ್ಳುತ್ತಿದ್ದಾರೆ. ಶಮಂತ್​ ಕಳೆದವಾರ ಎಲಿಮಿನೇಟ್​ ಆಗಿದ್ದರು. ಅದೃಷ್ಟವಶಾತ್​ ಅವರು ಬಚಾವ್​ ಆಗಿದ್ದರು. ಅಲ್ಲದೆ, ಮನೆಯಲ್ಲಿ ಈಗ ಅವರು ಮುಂದುವರಿಯುತ್ತಿದ್ದಾರೆ. ಅವರು ಹೋಗದೆ ಶಮಂತ್ ಉಳಿದುಕೊಂಡಿದ್ದು ಕೂಡ ಚರ್ಚೆ ಆಗುತ್ತಿದೆ.

ರಾಜೀವ್​ ಹೋದ ಬಗ್ಗೆ ಚರ್ಚೆ ಮಾಡಿ ಅರ್ಥವಿಲ್ಲ ಎನ್ನುವುದನ್ನು ರಘು ನೇರವಾಗಿ ಹೇಳಿದರು. ನಮಗೆ ಅವರು ಇಷ್ಟ, ಅವರು ಹೋಗಬಾರದಿತ್ತು ಎಂದು ಹೇಳುವುದು ಸರಿಯಲ್ಲ. ಇದನ್ನು ವೀಕ್ಷಕರು ನಿರ್ಧಾರ ಮಾಡುತ್ತಾರೆ. ನಮ್ಮ ಕೈಲಿ ಏನೂ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ಚರ್ಚೆಗೆ ತೆರೆ ಎಳೆದರು.

ಪ್ರತಿವಾರವೂ ನಾಮಿನೇಷನ್​ ನಡೆಯುತ್ತದೆ. ನಾಮಿನೇಷನ್​ ಆದವರಿಗೆ ವೋಟ್​ ಹಾಕುವ ಅವಕಾಶ ಪ್ರೇಕ್ಷಕರಿಗೆ ಇರುತ್ತದೆ. ಯಾರಿಗೆ ಕಡಿಮೆ ವೋಟ್​ ಬರುತ್ತದೆಯೋ ಅವರು ಮನೆಯಿಂದ ಹೊರ ಹೋಗಲೇಬೇಕು.

ಇದನ್ನೂ ಓದಿ: Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

Bigg Boss Kannada Elimination: ಓವರ್​ ಕಾನ್ಫಿಡೆನ್ಸ್​ ಮುಳುವಾಯ್ತು; ಬಿಗ್​ ಬಾಸ್​ನಿಂದ ರಾಜೀವ್​ ಔಟ್

Published On - 11:35 am, Mon, 26 April 21

ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ