Rishi Kapoor Death Anniversary: ಸ್ವಂತ ಮಗನ ಗಾಸಿಪ್ ಸುದ್ದಿಯನ್ನು ಮುಗಿಬಿದ್ದು ಓದುತ್ತಿದ್ದ ರಿಷಿ ಕಪೂರ್; ಕಾರಣ ಏನು?
ಇಂದು (ಏ.30) ನಟ ರಿಷಿ ಕಪೂರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ. ಈ ಸಂದರ್ಭದಲ್ಲಿ ಅವರ ಬಗೆಗಿನ ಅನೇಕ ವಿಚಾರಗಳನ್ನು ಮೆಲುಕು ಹಾಕಲಾಗುತ್ತಿದೆ.
ಬಾಲಿವುಡ್ನ ಖ್ಯಾತ ನಟ ರಿಷಿ ಕಪೂರ್ ಅವರು ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದಿದೆ. 2020ರ ಏ.30ರಂದು ಅವರು ನಿಧನರಾದರು. ಎರಡು ವರ್ಷಗಳ ಕಾಲ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಮೃತರಾದರು ಎಂದು ಸುದ್ದಿ ಹೊರಬಿದ್ದ ದಿನ ಇಡೀ ಭಾರತೀಯ ಚಿತ್ರರಂಗಕ್ಕೆ ಶಾಕ್ ಆಗಿತ್ತು. ಇಂದು ಅವರ ಮೊದಲ ವರ್ಷದ ಪುಣ್ಯ ಸ್ಮರಣೆ. ಈ ಸಂದರ್ಭದಲ್ಲಿ ರಿಷಿ ಕಪೂರ್ ಬಗೆಗಿನ ಅನೇಕ ವಿಚಾರಗಳನ್ನು ಮೆಲುಕು ಹಾಕಲಾಗುತ್ತಿದೆ. ತಮ್ಮ ವಿಶೇಷ ವ್ಯಕ್ತಿತ್ವದ ಕಾರಣಕ್ಕಾಗಿ ರಿಷಿ ಆಗಾಗ ಹೈಲೈಟ್ ಆಗುತ್ತಿದ್ದರು.
ರಿಷಿ ಕಪೂರ್ ಪುತ್ರ ರಣಬೀರ್ ಕಪೂರ್ ಅವರು ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನ ಆಗಾಗ ಹಳ್ಳ ಹಿಡಿದು ಹೋಗಿದ್ದುಂಟು. ಈ ಬಗ್ಗೆ ರಿಷಿ ಕಪೂರ್ಗೆ ಬೇಸರ ಆಗಿದ್ದು ಸಹಜ. ಅದೇನೇ ಇರಲಿ, ಸ್ವಂತ ಮಗನ ಬಗ್ಗೆ ಬರುತ್ತಿದ್ದ ಗಾಸಿಪ್ ಸುದ್ದಿಯನ್ನು ರಿಷಿ ಕಪೂರ್ ಮುಗಿಬಿದ್ದು ಓದುತ್ತಿದ್ದರು ಎಂಬುದು ಅಚ್ಚರಿಯ ಸಂಗತಿ.
ಸಾಮಾನ್ಯವಾಗಿ ಸೆಲೆಬ್ರಿಟಿಗಳ ಕುಟುಂಬದವರು ಗಾಸಿಪ್ ಸುದ್ದಿಗಳಿಗೆ ಬೆಲೆ ಕೊಡುವುದಿಲ್ಲ. ಅವುಗಳನ್ನು ನಿರ್ಲಕ್ಷ್ಯ ಮಾಡುವುದೇ ಉತ್ತಮ ಎಂದು ನಿರ್ಧರಿಸಿಬಿಟ್ಟಿರುತ್ತಾರೆ. ಆದರೆ ರಿಷಿ ಕಪೂರ್ ಈ ಮಾತಿಗೆ ವಿರುದ್ಧ. ತಮ್ಮ ಪುತ್ರ ರಣಬೀರ್ ಕಪೂರ್ ಬಗ್ಗೆ ಬರುತ್ತಿದ್ದ ಎಲ್ಲ ಗಾಸಿಪ್ ಬರಹಗಳನ್ನು ಅವರು ಓದುತ್ತಿದ್ದರಂತೆ. ಹಾಗಂತ ಅವುಗಳನ್ನು ಓದುತ್ತಾ ಅವರು ಎಂಜಾಯ್ ಮಾಡುತ್ತಿರಲಿಲ್ಲ. ಅವರ ಉದ್ದೇಶವೇ ಬೇರೆ ಆಗಿತ್ತು.
ಎಲ್ಲರಿಗೂ ತಿಳಿದಿರುವಂತೆ ರಣಬೀರ್ ಕಪೂರ್ ಪ್ರೀತಿ ಪ್ರೇಮದ ವಿಚಾರದಲ್ಲಿ ಪದೇಪದೇ ಕೈ ಸುಟ್ಟುಕೊಂಡಿದ್ದಾರೆ. ಮೊದಲ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡುತ್ತಿದ್ದ ಅವರು ನಂತರ ಬ್ರೇಕಪ್ ಮಾಡಿಕೊಂಡರು. ಬಳಿಕ ಕತ್ರಿನಾ ಕೈಫ್ ಜೊತೆ ಅವರ ಲವ್ಸ್ಟೋರಿ ಶುರು ಆಯಿತು. ಅದು ಕೂಡ ಹೆಚ್ಚು ದಿನ ಉಳಿಯಲಿಲ್ಲ. ನಂತರ ಆಲಿಯಾ ಭಟ್ ಜೊತೆ ಓಡಾಡಲು ಆರಂಭಿಸಿದರು.
ಇತ್ತ ರಿಷಿ ಕಪೂರ್ಗೆ ತಮ್ಮ ಮಗ ಏನು ಮಾಡುತ್ತಿದ್ದಾನೆ ಎಂಬುದೇ ತಿಳಿಯುತ್ತಿರಲಿಲ್ಲ. ಮಗನ ಚಲನವಲನಗಳ ಬಗ್ಗೆ ಒಂದು ಕಣ್ಣು ಇಡಬೇಕು ಎಂಬ ಕಾರಣಕ್ಕೆ ಅವರು ಗಾಸಿಪ್ ಕಾಲಂಗಳನ್ನು ಓದುತ್ತಿದ್ದರಂತೆ. ಅದರ ಮೂಲಕ ರಣಬೀರ್ ಕಪೂರ್ ಏನೇನು ಮಾಡುತ್ತಿದ್ದಾರೆ? ಎಲ್ಲಿಗೆ ಹೋಗುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ರಿಷಿ ಕಪೂರ್ ತಿಳಿದುಕೊಳ್ಳುತ್ತಿದ್ದರು. ಈ ವಿಚಾರವನ್ನು ಅವರು ಅಭಿಷೇಕ್ ಬಚ್ಚನ್ ಜೊತೆ ಹಂಚಿಕೊಂಡಿದ್ದರು.
ಇದನ್ನೂ ಓದಿ: 74ರ ಪ್ರಾಯದ ರಣಧೀರ್ ಕಪೂರ್ಗೆ ಕೊವಿಡ್; ಕರೀನಾ ಕುಟುಂಬದಲ್ಲಿ ಹೆಚ್ಚಿದ ಆತಂಕ
ಸಹ ನಟರಿಗೆ ಅಮಿತಾಭ್ ಎಂದಿಗೂ ಕ್ರೆಡಿಟ್ ಕೊಡುತ್ತಿರಲಿಲ್ಲ; ಪುಸ್ತಕದಲ್ಲಿ ಹೊರಬಿತ್ತು ಬಿಗ್ ಬಿ ಸ್ವಾರ್ಥ ಮುಖ