AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರವಿಂದ್​ ಅವ್ರನ್ನು ಲವ್​ ಮಾಡ್ತಾ ಇದೀರಾ? ಮನೆಯವರ ಪ್ರಶ್ನೆಗೆ ನಾಚಿ ನೀರಾದ ದಿವ್ಯಾ ಉರುಡುಗ

ಆರಂಭದ ದಿನಗಳಲ್ಲಿ ಬಿಗ್​ ಬಾಸ್​ ಮನೆಯಲ್ಲಿ ಜೋಡಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನೀಡುವುದಕ್ಕೂ ಮೊದಲು ಇಬ್ಬರ ನಡುವೆ ಇದ್ದಿದ್ದು ಹಾಯ್-ಬಾಯ್​ ಗೆಳೆತನ.

ಅರವಿಂದ್​ ಅವ್ರನ್ನು ಲವ್​ ಮಾಡ್ತಾ ಇದೀರಾ? ಮನೆಯವರ ಪ್ರಶ್ನೆಗೆ ನಾಚಿ ನೀರಾದ ದಿವ್ಯಾ ಉರುಡುಗ
ದಿವ್ಯಾ ಉರುಡುಗ
ರಾಜೇಶ್ ದುಗ್ಗುಮನೆ
| Edited By: |

Updated on: Apr 27, 2021 | 7:58 AM

Share

ಅರವಿಂದ್​ ಕೆ.ಪಿ. ಹಾಗೂ ದಿವ್ಯಾ ಉರುಡುಗ  ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಆಪ್ತವಾಗಿದ್ದಾರೆ. ಇಬ್ಬರದ್ದೂ ಲವ್​ ಅನ್ನೋದು ವೀಕ್ಷಕರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಆದರೆ, ಅದನ್ನು ಹೇಳೋಕೆ ಈ ಜೋಡಿ ಹಿಂದೆ ಸರಿಯುತ್ತಿದೆ. ನಮ್ಮದು ಫ್ರೆಂಡ್​ಶಿಪ್​ ಎಂದು ಪದೇಪದೇ ಒತ್ತಿ ಹೇಳುತ್ತಿದೆ. ಈಗ ಮನೆಯವರು ಕೇಳಿದ ನೇರ ಪ್ರಶ್ನೆಗೆ ದಿವ್ಯಾ ಉರುಡುಗ ನಾಚಿ ನೀರಾಗಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ.

ಆರಂಭದ ದಿನಗಳಲ್ಲಿ ಬಿಗ್​ ಬಾಸ್​ ಮನೆಯಲ್ಲಿ ಜೋಡಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನೀಡುವುದಕ್ಕೂ ಮೊದಲು ಇಬ್ಬರ ನಡುವೆ ಇದ್ದಿದ್ದು ಹಾಯ್-ಬಾಯ್​ ಗೆಳೆತನ. ಆದರೆ, ಯಾವಾಗ ಜೋಡಿ ಟಾಸ್ಕ್​ ಪೂರ್ಣಗೊಂಡಿತ್ತೋ ಇಬ್ಬರ ಗೆಳೆತನ ಆರಂಭವಾಗಿತ್ತು. ಈ ಗೆಳೆತನ ನಿಧಾನವಾಗಿ ಪ್ರೀತಿಯಾಗಿ ಬದಲಾಗುತ್ತಿದೆ.

ವೀಕೆಂಡ್​ನಲ್ಲಿ ಇಬ್ಬರೂ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಮನೆಯಲ್ಲಿ ಸಮಯ ಸಿಕ್ಕಾಗೆಲ್ಲ ಇಬ್ಬರೂ ಹರಟುತ್ತಿದ್ದರು. ಇತ್ತೀಚೆಗೆ ವೀಕ್ಷಕರೊಬ್ಬರು ಕರೆ ಮಾಡಿ ನಿಮ್ಮಿಬ್ಬರ ಕೆಮಿಸ್ಟ್ರಿ ಉತ್ತಮವಾಗಿದೆ ಎಂದಾಗ ದಿವ್ಯಾ ಸಂತೋಷಕ್ಕೆ ಪಾರವೇ ಇರಲಿಲ್ಲ. ಈಗ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಹಾಗೂ ಅರವಿಂದ್​ಗೆ ನೇರ ಪ್ರಶ್ನೆ ಬಂದಿದೆ. ಈ ಪ್ರಶ್ನೆ ಕೇಳಿ ದಿವ್ಯಾ ನಾಚಿ ನೀರಾಗಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ಅಡುಗೆ ಮನೆಯಲ್ಲಿ ಕೂತಿದ್ದರು. ಆಗ ರಘು ನೇರವಾಗಿ, ನೀನು ನಿಜವಾಗಿಯೂ ಹೇಳು. ಅರವಿಂದ್​ನ ಲವ್​ ಮಾಡ್ತಾ ಇದೀಯೋ ಇಲ್ಲವೋ ಎನ್ನುವುದನ್ನು ಹೇಳು ಎಂದು ದಿವ್ಯಾಗೆ ಕೇಳಿದರು. ಇದಕ್ಕೆ ದಿವ್ಯಾ ನಾಚಿ ನೀರಾದರು. ನಗುತ್ತಲೇ ಅರವಿಂದ್​ ಎಂದರೆ ಇಷ್ಟ. ಮುಂದೇನಾಗುತ್ತೋ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಕ್ಯಾಪ್ಟನ್​ ಆದ ಮರುದಿನವೇ ಚಕ್ರವರ್ತಿಗೆ ದ್ರೋಹ ಬಗೆದ ರಘು; ಮಾಡಿದ ಸಹಾಯ ಇಷ್ಟು ಬೇಗ ಮರೆತೋಯ್ತಾ?

Bigg Boss Kannada: ಬಿಗ್​ ಬಾಸ್​ ಬೆಡ್​ರೂಂನಿಂದ ಬಂತು ಮುತ್ತಿನ ಶಬ್ದ! ಕೊಟ್ಟಿದ್ಯಾರು, ತೆಗೆದುಕೊಂಡಿದ್ಯಾರು?

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!