ನಾವೆಲ್ಲರೂ ಮಾಲಾಶ್ರೀಗೆ ಬೆಂಬಲವಾಗಿ ನಿಂತುಕೊಳ್ತೀವಿ; ದೇವರಾಜ್​ ಭಾವುಕ ನುಡಿ

ರಾಜ್ಯದ ಎಲ್ಲಾ ಜನರನ್ನೂ, ಚಿತ್ರಪ್ರೇಮಿಗಳನ್ನೂ ಕೈಮುಗಿದು ಕೇಳಿಕೊಳ್ತೀನಿ. ದಯವಿಟ್ಟು ಕೊರೊನಾ ಸೋಂಕಿನ ವಿಚಾರ ನಿರ್ಲಕ್ಷಿಸಬೇಡಿ. ಮಾಸ್ಕ್ ಹಾಕಿಕೊಳ್ಳಿ, ಲಸಿಕೆ ಹಾಕಿಸಿಕೊಳ್ಳಿ ಎಂದು ದೇವರಾಜ್​ ಮನವಿ ಮಾಡಿದರು.

ನಾವೆಲ್ಲರೂ ಮಾಲಾಶ್ರೀಗೆ ಬೆಂಬಲವಾಗಿ ನಿಂತುಕೊಳ್ತೀವಿ; ದೇವರಾಜ್​ ಭಾವುಕ ನುಡಿ
ದೇವರಾಜ್​-ಕೋಟಿ ರಾಮು
Rajesh Duggumane

|

Apr 26, 2021 | 9:58 PM

ಸ್ಯಾಂಡಲ್​ವುಡ್​ ನಟಿ ಮಾಲಾಶ್ರೀ ಅವರ ಗಂಡ, ಖ್ಯಾತ ನಿರ್ಮಾಪಕ ಕೋಟಿ ರಾಮು (52) ಕೊರೊನಾದಿಂದ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದೆ. ಅಷ್ಟೇ ಅಲ್ಲ, ಸಾವಿನ ಬಗ್ಗೆ ಹಿರಿಯ ನಟ ದೇವರಾಜ್​ ಭಾವುಕರಾಗಿ ಮಾತನಾಡಿದ್ದಾರೆ.

ರಾಮು ಸಾವಿನ ಬಗ್ಗೆ ಟಿವಿ9 ಜತೆಗೆ ಮಾತಾಡಿರುವ ದೇವರಾಜ್​, ರಾಮು ಅವರು ಆಸ್ಪತ್ರೆ ಸೇರಿದ್ದೂ ಗೊತ್ತಿರಲಿಲ್ಲ. ನನಗೂ ಅವರಿಗೂ 30 ವರ್ಷಗಳ ಗೆಳೆತನ. ರಾಮು ಒಳ್ಳೆಯ ವ್ಯಕ್ತಿ, ನಿರ್ಮಾಪಕ. ಮಾಲಾಶ್ರೀಯೂ ನನಗೆ ಉತ್ತಮ ಗೆಳತಿ. ರಾಮು ನಿಧನ ಕನ್ನಡ ಸಿನಿಮಾ ಉದ್ಯಮಕ್ಕೆ ಇದು ದೊಡ್ಡ ನಷ್ಟ. 2 ತಿಂಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ. ಅದೇ ನನ್ನ ಕೊನೆಯ ಭೇಟಿ ಎಂದು ದೇವರಾಜ್​ ಹೇಳಿದ್ದಾರೆ.

ರಾಮು-ಮಾಲಾಶ್ರೀ ದಂಪತಿಗಳು ಚಿತ್ರರಂಗದಲ್ಲಿ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಅವರು ಅದ್ದೂರಿ ನಿರ್ಮಾಪಕ ಎಂದು ಹೆಸರುವಾಸಿಯಾಗಿದ್ದರು. ರಾಮು ಎಂದಿಗೂ ಕೇರ್​ಲೆಸ್ ಆಗಿ ಇರುತ್ತಾ ಇರಲಿಲ್ಲ. ಬೇರೆ ಭಾಷೆಗಳಿಗಿಂತಲೂ ಕನ್ನಡದ ಸಿನಿಮಾಗಳು ಕಡಿಮೆ ಆಗಬಾರದು ಎಂಬ ತುಡಿತ ಅವರದ್ದಾಗಿತ್ತು. ಅವರ ಗೆಳೆಯರಿಗೆ ಭರಿಸಲಾಗದ ನಷ್ಟವಿದು. ನಾವೆಲ್ಲರೂ ಮಾಲಾಶ್ರೀ ಜೊತೆಗೆ ಬೆಂಬಲವಾಗಿ ನಿಂತುಕೊಳ್ತೀವಿ ಎಂದು ದೇವರಾಜ್​ ಭರವಸೆ ನೀಡಿದರು.

ರಾಜ್ಯದ ಎಲ್ಲಾ ಜನರನ್ನೂ, ಚಿತ್ರಪ್ರೇಮಿಗಳನ್ನೂ ಕೈಮುಗಿದು ಕೇಳಿಕೊಳ್ತೀನಿ. ದಯವಿಟ್ಟು ಕೊರೊನಾ ಸೋಂಕಿನ ವಿಚಾರ ನಿರ್ಲಕ್ಷಿಸಬೇಡಿ. ಮಾಸ್ಕ್ ಹಾಕಿಕೊಳ್ಳಿ, ಲಸಿಕೆ ಹಾಕಿಸಿಕೊಳ್ಳಿ ಎಂದು ದೇವರಾಜ್​ ಮನವಿ ಮಾಡಿದರು.

ಇದನ್ನೂ ಓದಿ:  Producer Ramu Death: ಕೊರೊನಾ ಸೋಂಕಿನಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ನಿಧನ

ನನಗಾಗಿ ರಾಜಕುಮಾರ ಸಿನಿಮಾ ಟೈಟಲ್ ಬಿಟ್ಟುಕೊಟ್ಟಿದ್ರು; ನಿರ್ಮಾಪಕ ರಾಮು ನಿಧನ ಸುದ್ದಿ ಕೇಳಿ ಭಾವುಕರಾದ ಪುನೀತ್​  

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada