ಬಿಗ್ ಬಾಸ್ ಮನೆಗೆ ಸೇರಿದ ದಿನದಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ತುಂಬಾನೇ ಆಪ್ತವಾಗಿದ್ದಾರೆ. ಇಬ್ಬರೂ ಪರಸ್ಪರ ಫ್ಲರ್ಟ್ ಮಾಡಿಕೊಳ್ಳುತ್ತಾ ಹಾಯಾಗಿ ಮನೆಯಲ್ಲಿ ದಿನ ಕಳೆಯುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಸಾಕಷ್ಟು ಮನಸ್ತಾಪಗಳು ಹುಟ್ಟಿಕೊಳ್ಳುತ್ತಿವೆ. ಅಷ್ಟೇ ಅಲ್ಲ, ದಿವ್ಯಾಗೆ ಸಹಾಯ ಮಾಡೋಕೆ ಹೋಗಿ ಮಂಜು ಸಂಕಷ್ಟ ಎದುರಿಸಿದ್ದಾರೆ. ದಿವ್ಯಾ ಸುರೇಶ್ ಹಾಕಿರೋ ಟ್ರ್ಯಾಪ್ನಲ್ಲಿ ಸಿಲುಕಿರುವ ವಿಚಾರ ಮಂಜುಗೆ ಸ್ಪಷ್ಟವಾಗುತ್ತಿದೆ. ಆದರೆ, ಅದರಿಂದ ಹೊರ ಬರೋದು ಹೇಗೆ ಎಂಬುದು ಮಾತ್ರ ತಿಳಿಯುತ್ತಿಲ್ಲ.
ಮಂಜು ಹಾಗೂ ದಿವ್ಯಾ ಪರಸ್ಪರ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದಾರೆ. ಆದರೆ, ಅವರ ನಡುವೆ ಇರುವುದು ಗೆಳೆತನವೋ ಅಥವಾ ಪ್ರೀತಿಯೋ ಎನ್ನುವ ವಿಚಾರ ಅವರಿಗೂ ಇನ್ನೂ ಸ್ಪಷ್ಟವಾದಂತೆ ಕಾಣುತ್ತಿಲ್ಲ. ಪ್ರತೀ ವಿಚಾರದಲ್ಲೂ ದಿವ್ಯಾ ಅವರನ್ನು ಮಂಜು ವಹಿಸಿಕೊಂಡು ಬರುತ್ತಿದ್ದಾರೆ. ಇದು ಈಗ ಮಂಜುಗೆ ಕಂಟಕವಾಗಿದೆ.
ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ದಿವ್ಯಾ ಸುರೇಶ್ ಮೋಸ ಮಾಡಿದ್ದರು. ಇದಕ್ಕೂ ಮೊದಲು ಮಂಜು ಅವರ ಸಲಹೆ ಕೂಡ ಪಡೆದುಕೊಂಡಿದ್ದರು. ಈ ವಿಚಾರದಲ್ಲಿ ಮನೆಯವರು ಬೇಸರಗೊಂಡಿದ್ದಾರೆ. ಹೀಗಾಗಿ, ಯಾರೊಬ್ಬರೂ ಮಂಜು ಹಾಗೂ ದಿವ್ಯಾ ಬಳಿ ಸರಿಯಾಗಿ ಮಾತನಾಡುತ್ತಿಲ್ಲ.
ಇದು ಮಂಜುಗೆ ತೀವ್ರ ಬೇಸರ ತರಿಸಿದೆ. ದಿವ್ಯಾ ಈ ವಿಚಾರಕ್ಕೆ ಪದೇಪದೇ ಬೇಸರಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಿವ್ಯಾ ಹಾಗೂ ಮಂಜು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನೀನು ಏಕೆ ಪದೇ ಪದೇ ಬೇಸರ ಮಾಡಿಕೊಳ್ಳುತ್ತೀಯಾ? ನೀನು ಬೇಸರಗೊಂಡರೆ ನಾನೂ ಬೇಸರಕ್ಕೆ ತುತ್ತಾಗುತ್ತೇನೆ. ನನಗೆ ಇತ್ತೀಚೆಗೆ ಏನು ಮಾಡುತ್ತಿದ್ದೇನೆ ಎಂಬುದೇ ತಿಳಿಯುತ್ತಿಲ್ಲ ಎಂದಿದ್ದಾರೆ. ಈ ಮೂಲಕ ದಿವ್ಯಾ ಅವರನ್ನು ಸಮಾಧಾನ ಮಾಡುವ ಭರದಲ್ಲಿ ಅವರ ನಿಜವಾದ ಪರ್ಫಾರ್ಮೆನ್ಸ್ ಮಿಸ್ ಆಗುತ್ತಿದೆ. ಇದು ಅವರ ಗಮನಕ್ಕೂ ಬಂದಿದೆ. ದಿವ್ಯಾ ಹಾಕಿರುವ ಟ್ರ್ಯಾಪ್ನಿಂದ ಹೊರಗೆ ಬರೋದೋ ಹೇಗೆ ಎಂಬುದು ಮಾತ್ರ ಅವರಿಗೆ ತಿಳಿಯುತ್ತಿಲ್ಲ.
ಇದನ್ನೂ ಓದಿ: Bigg Boss Kannada: ದಿವ್ಯಾಗಾಗಿ ಕರುನಾಡ ಜನತೆಯ ನಂಬಿಕೆ ಕಳೆದುಕೊಂಡ ಮಂಜು; ಈಗ ಕ್ಷಮೆ ಕೇಳಿ ಏನು ಪ್ರಯೋಜನ?