Meghana Raj: ನಟಿ ಮೇಘನಾ ರಾಜ್​ ಮಗುವಿನ ಆರೋಗ್ಯದ ಬಗ್ಗೆ ತೀವ್ರವಾಗಿ ಆತಂಕಗೊಂಡಿದ್ದೇಕೆ?

Meghana Raj: ನಟಿ ಮೇಘನಾ ರಾಜ್​ ಮಗುವಿನ ಆರೋಗ್ಯದ ಬಗ್ಗೆ ತೀವ್ರವಾಗಿ ಆತಂಕಗೊಂಡಿದ್ದೇಕೆ?
ಮಗು ಸಿಂಬಾ ಜತೆ ಮೇಘನಾ ರಾಜ್​

ಕೊರೊನಾ ವೈರಸ್​ ಮೊದಲನೇ ಅಲೆ ಕಾಣಿಸಿಕೊಂಡಾಗ ನಟಿ ಮೇಘನಾ ರಾಜ್​ಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಈಗ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದೆ. ಸಾಕಷ್ಟು ನಟ-ನಟಿಯರಿಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಳ್ಳುತ್ತಿದೆ. ಈ ವೇಳೆ ಅವರಿಗೆ ಮತ್ತೆ ಕೊರೊನಾ ಪಾಸಿಟಿವ್​ ಕಾಣಿಸಿಕೊಳ್ಳುವ ಭಯ ಕಾಡಿತ್ತು. ಹೀಗಾಗಿ, ಅವರು ಮಗುವಿನ ಆರೋಗ್ಯದ ಬಗ್ಗೆಯೂ ಹೆಚ್ಚು ಆತಂಕಗೊಂಡಿದ್ದರಂತೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಗೆಳೆಯರ ಜತೆ ನಾನು ಸಂಪರ್ಕದಲ್ಲಿದ್ದೆ. ಆದರೆ, ಅವರಿಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಹೀಗಾಗಿ, ನಾನು […]

Rajesh Duggumane

|

Apr 21, 2021 | 8:02 PM

ಕೊರೊನಾ ವೈರಸ್​ ಮೊದಲನೇ ಅಲೆ ಕಾಣಿಸಿಕೊಂಡಾಗ ನಟಿ ಮೇಘನಾ ರಾಜ್​ಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಈಗ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದೆ. ಸಾಕಷ್ಟು ನಟ-ನಟಿಯರಿಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಳ್ಳುತ್ತಿದೆ. ಈ ವೇಳೆ ಅವರಿಗೆ ಮತ್ತೆ ಕೊರೊನಾ ಪಾಸಿಟಿವ್​ ಕಾಣಿಸಿಕೊಳ್ಳುವ ಭಯ ಕಾಡಿತ್ತು. ಹೀಗಾಗಿ, ಅವರು ಮಗುವಿನ ಆರೋಗ್ಯದ ಬಗ್ಗೆಯೂ ಹೆಚ್ಚು ಆತಂಕಗೊಂಡಿದ್ದರಂತೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಗೆಳೆಯರ ಜತೆ ನಾನು ಸಂಪರ್ಕದಲ್ಲಿದ್ದೆ. ಆದರೆ, ಅವರಿಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಹೀಗಾಗಿ, ನಾನು ಸೆಲ್ಫ್​ ಕ್ವಾರಂಟೈನ್​ ಆದೆ. ನನ್ನ ಮಗು ಹಾಗೂ ಪಾಲಕರ ಆರೋಗ್ಯದ ಬಗ್ಗೆ ನೆನೆದು ತುಂಬಾನೇ ಭಯಗೊಂಡಿದ್ದೆ. ನನ್ನಲ್ಲಿ ಯಾವುದೇ ಕೊರೊನಾ ಲಕ್ಷಣ ಕಾಣಿಸಿಲ್ಲ. ಆದಾಗ್ಯೂ, ನಾನು ಕೊರೊನಾ ಪರೀಕ್ಷೆಗೆ ಒಳಪಟ್ಟೆ. ಈ ವೇಳೆ ನೆಗೆಟಿವ್​ ಬಂದಿದೆ. ನಾನು ಈಗ ಆರೋಗ್ಯಯುತವಾಗಿದ್ದೇನೆ. ಮಗು ಹಾಗೂ ಪಾಲಕರ ಆರೋಗ್ಯದ ಬಗ್ಗೆ ಇದ್ದ ಆತಂಕ ದೂರವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು, ಈ ಮೊದಲಿನ ಕೊರೊನಾ ಕರಾಳ ಅನುಭವದ ಬಗ್ಗೆಯೂ ಮೇಘನಾ ರಾಜ್​ ಬರೆದುಕೊಂಡಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ನನಗೆ, ನನ್ನ ತಂದೆ-ತಾಯಿಗೆ ಕೊರೊನಾ ಕಾಣಿಸಿಕೊಂಡಿತ್ತು. ಈ ವೇಳೆ ನಾವು ತೀವ್ರ ತೊಂದರೆ ಅನುಭವಿಸಿದ್ದೆವು ಎಂದಿದ್ದಾರೆ.

ಇನ್ನು, ಕೊರೊನಾ ಹರಡಲು ತಡೆಯಲೂ ಮೇಘನಾ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಇದನ್ನು ಹರಡದಂತೆ ತಡೆಯಿರಿ. ನಮ್ಮಿಂದ ಬೇರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Meghana Raj: ಮೇಘನಾ ರಾಜ್ ಪೋಸ್ಟ್ ಮೂಡಿಸಿದ ಕುತೂಹಲ; ಫೆಬ್ರವರಿ 12ಕ್ಕೆ ಚಿರಂಜೀವಿ ಸರ್ಜಾ ಮಗುವಿನ ನಾಮಕರಣ?

Meghana Raj | ಸಿಂಬಾ ಎಂದು ಜೂ.ಚಿರುವನ್ನು ಪರಿಚಯಿಸಿದ ಮೇಘನಾ ರಾಜ್.. ಪ್ರೇಮಿಗಳ ದಿನದಂದೇ ಚಿರು ಪುತ್ರನ ವಿಡಿಯೋ ರಿವಿಲ್

Follow us on

Related Stories

Most Read Stories

Click on your DTH Provider to Add TV9 Kannada