Bigg Boss Kannada: ದಿವ್ಯಾಗಾಗಿ ಕರುನಾಡ ಜನತೆಯ ನಂಬಿಕೆ ಕಳೆದುಕೊಂಡ ಮಂಜು; ಈಗ ಕ್ಷಮೆ ಕೇಳಿ ಏನು ಪ್ರಯೋಜನ?

Manju Pavagada | Divya Suresh: ತಮ್ಮ ಹುಳುಕು ಬುದ್ಧಿ ಬಯಲಾದ ಮೇಲೆ ಮಂಜು ಮತ್ತು ದಿವ್ಯಾ ಸುರೇಶ್​ ಎಲ್ಲರ ಕ್ಷಮೆ ಕೇಳುತ್ತಿದ್ದಾರೆ. ಅವರಿಗೆ ಇನ್ಮುಂದೆ ಪ್ರೇಕ್ಷಕರಿಂದ ಕಡಿಮೆ ವೋಟ್​ಗಳು ಬಂದರೂ ಅಚ್ಚರಿ ಏನಿಲ್ಲ.

Bigg Boss Kannada: ದಿವ್ಯಾಗಾಗಿ ಕರುನಾಡ ಜನತೆಯ ನಂಬಿಕೆ ಕಳೆದುಕೊಂಡ ಮಂಜು; ಈಗ ಕ್ಷಮೆ ಕೇಳಿ ಏನು ಪ್ರಯೋಜನ?
ಮಂಜು ಪಾವಗಡ - ದಿವ್ಯಾ ಸುರೇಶ್​
Follow us
ಮದನ್​ ಕುಮಾರ್​
|

Updated on: Apr 20, 2021 | 4:08 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅತಿ ಹೆಚ್ಚು ಗಮನ ಸೆಳೆದ ಸ್ಪರ್ಧಿ ಎಂದರೆ ಅದು ಮಂಜು ಪಾವಗಡ. ಅವರು ಫೈನಲ್​ವರೆಗೂ ಆರಾಮಾಗಿ ಪೈಪೋಟಿ ನೀಡುವ ಸ್ಪರ್ಧಿ ಎಂಬುದು ಎಲ್ಲರ ಅಭಿಪ್ರಾಯ. ಅದಕ್ಕೆ ಕಾರಣ ಅವರ ವ್ಯಕ್ತಿತ್ವ. ಇಡೀ ಮನೆಯವರನ್ನು ನಗಿಸುತ್ತ, ಜನರಿಗೆ ಮನರಂಜನೆ ನೀಡುತ್ತಾರೆ ಈ ಕಾಮಿಡಿ ಕಲಾವಿದ. ಆದರೆ ಅವರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ದಿವ್ಯಾ ಸುರೇಶ್​ ಸಹವಾಸದಿಂದ ಮಂಜು ಇಂಥ ಒಂದು ಕೆಲಸಕ್ಕೆ ಕೈ ಹಾಕಿದ್ದಾರೆ.

ಇತ್ತೀಚೆಗೆ ಬಿಗ್​ ಬಾಸ್​ ನೀಡಿದ ಒಂದು ಟಾಸ್ಕ್​ನಲ್ಲಿ ಹುಡುಗರು ಹುಡುಗಿಯರಿಗೆ ಗುಟ್ಟಾಗಿ ಲವ್​ ಲೆಟರ್ ಬರೆಯಬೇಕಿತ್ತು. ತಮಗೆ ಬಂದ ಲೆಟರ್​ಗಳನ್ನು ಹುಡುಗಿಯರು ಮುಚ್ಚಿಟ್ಟುಕೊಳ್ಳಬೇಕಿತ್ತು. ವಾರ್ಡನ್​ ಕೈಗೆ ಆ ಲೆಟರ್​ಗಳು ಸಿಗದಂತೆ ಎಚ್ಚರಿಕೆ ವಹಿಸಬೇಕಿತ್ತು. ಅತಿ ಹೆಚ್ಚು ಪ್ರೇಮಪತ್ರ ಬರೆಯುವ ಹುಡುಗ ಮತ್ತು ಅತಿ ಹೆಚ್ಚು ಪ್ರೇಮಪತ್ರಗಳನ್ನು ಪಡೆದು ಮುಚ್ಚಿಟ್ಟುಕೊಳ್ಳುವ ಹುಡುಗಿಗೆ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತಿತ್ತು. ಲೆಟರ್​ ಪತ್ತೆ ಹಚ್ಚುವ ವಾರ್ಡನ್​ ಆಗಿ ನಿಧಿ ಸುಬ್ಬಯ್ಯ ನೇಮಕ ಆಗಿದ್ದರು. ಈ ಟಾಸ್ಕ್​ನಲ್ಲಿ ಮಂಜು ಮತ್ತು ದಿವ್ಯಾ ಇಡೀ ಮನೆಗೆ ದ್ರೋಹ ಮಾಡಿದ್ದಾರೆ.

ತಮ್ಮ ಲೆಟರ್​ಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ವಾರ್ಡನ್​ (ನಿಧಿ) ಜೊತೆ ದಿವ್ಯಾ ಒಳಸಂಚು ರೂಪಿಸಿದ್ದಾರೆ. ಬೇರೆಯವರು ಎಲ್ಲಿ ಪತ್ರಗಳನ್ನು ಮುಚ್ಚಿಟ್ಟಿದ್ದಾರೆ ಎಂಬ ಮಾಹಿತಿಯನ್ನು ನಿಧಿಗೆ ದಿವ್ಯಾ ಸೋರಿಕೆ ಮಾಡಿದ್ದಾರೆ. ಮನೆಯ ಇತರೆ ಸದಸ್ಯರಿಗೆ ಈ ರೀತಿ ನಂಬಿಕೆ ದ್ರೋಹ ಮಾಡುವುದಕ್ಕಿಂತಲೂ ಮುಂಚೆ ಈ ಬಗ್ಗೆ ಮಂಜು ಪಾವಗಡ ಜೊತೆ ಅವರು ಚರ್ಚೆ ಮಾಡಿದ್ದರು. ಹಾಗಾಗಿ ಈ ತಪ್ಪಿನಲ್ಲಿ ಮಂಜು ಕೂಡ ಪಾಲುದಾರರಾಗಿದ್ದಾರೆ.

ವೀಕ್ಷಕರೊಬ್ಬರು ಅನಿರೀಕ್ಷಿತವಾಗಿ ಬಿಗ್​ ಬಾಸ್​ ಮನೆಗೆ ದೂರವಾಣಿ ಕರೆ​ ಮಾಡಿ ಮಾತನಾಡಿದಾಗಲೇ ಈ ನಂಬಿಕೆ ದ್ರೋಹದ ರಹಸ್ಯ ಬಯಲಾಯಿತು. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಸೇರಿಕೊಂಡು ಮಾಡಿದ ಈ ಕೃತ್ಯಕ್ಕೆ ಎಲ್ಲರೂ ಛೀಮಾರಿ ಹಾಕಿದ್ದಾರೆ. ಮೋಸ ಮಾಡಿ ಆಟ ಆಡಿದ ಅವರಿಬ್ಬರ ಮೇಲೆ ಇನ್ನೆಂದೂ ತಮಗೆ ನಂಬಿಕೆ ಮೂಡುವುದಿಲ್ಲ ಎಂದು ಎಲ್ಲರೂ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ದಿವ್ಯಾ ಸುರೇಶ್​ ಮಾತು ಕೇಳಿಕೊಂಡು ಈ ಕುತಂತ್ರದಲ್ಲಿ ಮಂಜು ಕೂಡ ಎಲ್ಲರ ನಂಬಿಕೆ ಕಳೆದುಕೊಂಡಿದ್ದಾರೆ.

ಇದನ್ನೆಲ್ಲ ನೋಡುತ್ತಿರುವ ಪ್ರೇಕ್ಷಕರಿಗೆ ಮಂಜು ಮೇಲಿನ ನಂಬಿಕೆ ಹೊರಟುಹೋಗುವ ಸಾಧ್ಯತೆ ಇದೆ. ಹಾಗಾಗಿ ಅವರಿಗೆ ಇನ್ಮುಂದೆ ಪ್ರೇಕ್ಷಕರಿಂದ ಕಡಿಮೆ ವೋಟ್​ಗಳು ಬಂದರೂ ಅಚ್ಚರಿ ಏನಿಲ್ಲ. ತಮ್ಮ ಹುಳುಕು ಬುದ್ಧಿ ಬಯಲಾದ ಮೇಲೆ ಮಂಜು ಮತ್ತು ದಿವ್ಯಾ ಸುರೇಶ್​ ಎಲ್ಲರ ಕ್ಷಮೆ ಕೇಳುತ್ತಿದ್ದಾರೆ. ಆದರೆ ಬಿಗ್ ಬಾಸ್​ ನೋಡುತ್ತಿರುವ ಕನ್ನಡಿಗರು ಮತ್ತು ಬಿಗ್​ ಬಾಸ್ ಮನೆಯೊಳಗಿರುವ ಸ್ಪರ್ಧಿಗಳ ಎದುರಿನಲ್ಲಿ ನಂಬಿಕೆ ಕಳೆದುಕೊಂಡ ಬಳಿಕ ಕ್ಷಮೆ ಕೇಳಿ ಏನು ಉಪಯೋಗ?

ಇದನ್ನೂ ಓದಿ: Bigg Boss Elimination: ಈ ವಾರದ ಎಲಿಮಿನೇಷನ್​ಗೆ ಹೊಸ ಮಾರ್ಗ ಅನುಸರಿಸಿದ ಬಿಗ್​ ಬಾಸ್​!

ಮಂಜುಗೆ ನೇರವಾಗಿಯೇ ದ್ರೋಹ ಬಗೆದ ದಿವ್ಯಾ ಸುರೇಶ್​; ಈ ತಪ್ಪನ್ನು ಅವರು ಕ್ಷಮಿಸ್ತಾರಾ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್