‘ದಿ ಫ್ಯಾಮಿಲಿ ಮ್ಯಾನ್’ ನಟ ಮನೋಜ್ ಬಾಜಪೇಯಿ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಇತ್ತೀಚೆಗೆ ಅವರು ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ನಡೆದ ರಾಜಕೀಯದಿಂದ ಅವರು ಮೃತಪಟ್ಟರು ಎಂದು ಮನೋಜ್ ಅಭಿಪ್ರಾಯಪಟ್ಟಿದ್ದಾರೆ. ವೈಯಕ್ತಿಕವಾಗಿ ಸಾಕಷ್ಟು ನಷ್ಟವಾಗಿದೆ ಎಂದು ಮನೋಜ್ ಅವರು ಹೇಳಿದ್ದಾರೆ.
‘ನಾನು ಹಾಗೂ ಸುಶಾಂತ್ ಇಂಡಸ್ಟ್ರಿ ಪಾಲಿಟಿಕ್ಸ್ ಬಗ್ಗೆ ಮಾತನಾಡುತ್ತಿದ್ದೆವು. ಯಾವಾಗಲೂ ದಪ್ಪ ಚರ್ಮ ಹೊಂದಿರಬೇಕು ಇಲ್ಲದಿದ್ದರೆ ಇವರು ನಿನ್ನ ಕೊಂದು ತೆಗೆಯುತ್ತಾರೆ ಎಂದು ಅವನಿಗೆ ಎಚ್ಚರಿಸಿದ್ದೆ. ನಾನು ಸಾಕಷ್ಟು ರಿಜೆಕ್ಷನ್ಗಳನ್ನು ನೋಡಿದ್ದೇನೆ. ನನ್ನದು ಒರಟು ಚರ್ಮ. ನನ್ನ ಅನೇಕ ಗೆಳೆಯರಿಗೆ ನನ್ನ ರೀತಿಯ ಗುಣ ಇಲ್ಲ. ನನ್ನಂತೆ ಅವರು ರಿಜೆಕ್ಷನ್ಗಳನ್ನು ಎದುರಿಸಲು ಸಾಧ್ಯವಾಗಿಲ್ಲ’ ಎಂದಿದ್ದಾರೆ ಮನೋಜ್ ಬಾಜಪೇಯಿ.
‘ಸುಶಾಂತ್ ಯಾವಾಗಲೂ ಮೂಡಿ ಆಗಿದ್ದ. ಅಶುತೋಶ್ ರಾಣಾ, ರಣವೀರ್ ಶೋರೆ, ಸುಶಾಂತ್ ಸಿಂಗ್ ಹಾಗ ನಾನು ಒಂದೇ ರೀತಿ ಆಲೋಚಿಸುತ್ತಿದ್ದೆವು. ನಾವು ಆಗಾಗ ಭೇಟಿ ಮಾಡುತ್ತಿದ್ದೆವು. ಕೊವಿಡ್ ಬರುವುದಕ್ಕೂ ಮೊದಲು ಸುಶಾಂತ್ ನನಗೆ ಕರೆ ಮಾಡಿ, ನೀವು ಮಾಡುವ ಮಟನ್ ಕರಿ ತಿನ್ನಬೇಕು ಎನಿಸುತ್ತಿದೆ ಎಂದಿದ್ದರು. ಮುಂದೆ ಯಾವಾಗದರೂ ಮಾಡಿದರೆ ನನ್ನನ್ನು ಕರೆಯಿರಿ ಎಂದಿದ್ದರು’ ಎಂಬುದಾಗಿ ಹಳೆಯ ಘಟನೆ ಬಗ್ಗೆ ಮನೋಜ್ ಹೇಳಿದ್ದಾರೆ.
ಇದನ್ನೂ ಓದಿ:ಕನ್ಫ್ಯೂಸ್ ಆಗ್ಬೇಡಿ; ಸುಶಾಂತ್ ಸಿಂಗ್ ರೀತಿ ಕಾಣಿಸುತ್ತಾರೆ ಈ ಯುವಕ
‘ಅವನಿಗೆ ಏನಾಗಿದೆ ಎಂದು ಯಾರಿಗೂ ತಿಳಿದಿಲ್ಲ. ನಾವು ಎಲ್ಲವನ್ನೂ ಊಹಿಸಬಹುದಷ್ಟೇ. ನಾನು ಅವನ ಜೊತೆ ಕೆಲಸ ಮಾಡಿದ್ದೇನೆ. ಅವನು ಈ ರೀತಿಯ ಹುಡುಗನಲ್ಲ. ಅವನು ಯಾವಾಗಲೂ ಓದುತ್ತಾ ಇರುತ್ತಿದ್ದ. ಸೆಟ್ ಒಳಗೂ, ಹೊರಗೂ ಇದೇ ರೀತಿ ಇರುತ್ತಿದ್ದ’ ಎಂದಿದ್ದಾರೆ ಮನೋಜ್.
‘ಅವನಿಗೆ ಫಿಸಿಕ್ಸ್ ಬಗ್ಗೆ ಸಾಕಷ್ಟು ಜ್ಞಾನ ಇತ್ತು. ಆಧ್ಯತ್ಮದ ಬಗ್ಗೆ ಮಾತನಾಡುತ್ತಿದ್ದ. ಅದನ್ನು ಕ್ವಾಂಟಂ ಫಿಸಿಕ್ಸ್ ಜೊತೆ ಹೋಲಿಕೆ ಮಾಡುತ್ತಿದ್ದ. ಅವನಿಗೆ ಅದ್ಭುತ ಜ್ಞಾನ ಇತ್ತು. ಅವನಿಗೆ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಸಿಬಿಐ ಕೂಡ ತನಿಖೆ ನಡೆಸುತ್ತಲೇ ಇದೆ. ಅವನು ಸತ್ತಾಗ ನಾನು ಮೂರು ತಿಂಗಳು ದುಃಖದಲ್ಲೇ ಇದ್ದೆ’ ಎಂದಿದ್ದಾರೆ ಅವರು. ಮನೋಜ್ ಅವರು ‘ದಿ ಫ್ಯಾಮಿಲಿ ಮ್ಯಾನ್ 3’ ಸೀರಿಸ್ನಲ್ಲಿ ಬ್ಯುಸಿ ಆಗಬೇಕಿದೆ. ಈ ವರ್ಷ ಈ ಸೀರಿಸ್ ಬರುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ