ಮನೋಜ್ ಬಾಜಪೇಯಿ ‘ದಿ ಫ್ಯಾಮಿಲಿ ಮ್ಯಾನ್ 3’ಗೆ ಪಡೆಯುವ ಸಂಭಾವನೆ ಎಷ್ಟು?

ದಿ ಫ್ಯಾಮಿಲಿ ಮ್ಯಾನ್​  ಮೊದಲ ಮತ್ತು ಎರಡನೇ ಸೀಸನ್​ಗೆ ಮನೋಜ್​ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ಮಾಹಿತಿ ಪ್ರಕಾರ, ಮೂರನೇ ಸೀಸನ್​ಗೆ ಸಂಭಾವನೆಯನ್ನು ಡಬಲ್​ ಮಾಡಿಕೊಂಡಿದ್ದಾರೆ!

ಮನೋಜ್ ಬಾಜಪೇಯಿ ‘ದಿ ಫ್ಯಾಮಿಲಿ ಮ್ಯಾನ್ 3’ಗೆ ಪಡೆಯುವ ಸಂಭಾವನೆ ಎಷ್ಟು?
ಮನೋಜ್​ ಬಾಜಪೇಯಿ
Edited By:

Updated on: Jun 12, 2021 | 5:45 PM

ಅಮೇಜಾನ್​ ಪ್ರೈಮ್​ನಲ್ಲಿ ಇತ್ತೀಚೆಗೆ ರಿಲೀಸ್​ ಆದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದನ್ನು ನೋಡಿದ ನಂತರದಲ್ಲಿ ಮನೋಜ್​ ನಟನೆಯನ್ನು ಹೊಗಳದೇ ಇರುವವರೇ ಇಲ್ಲ. ಈಗ ‘ದಿ ಫ್ಯಾಮಿಲಿ ಮ್ಯಾನ್​ ಸೀಸನ್​ 3’ ಬರೋಕೆ ಸಿದ್ಧತೆ ನಡೆಯುತ್ತಿದ್ದು, ಮನೋಜ್​ ಹೆಚ್ಚು ಸಂಭಾವನೆಗೆ ಬೆಡಿಕೆ ಇಟ್ಟಿದ್ದಾರಂತೆ.

ದಿ ಫ್ಯಾಮಿಲಿ ಮ್ಯಾನ್​  ಮೊದಲ ಮತ್ತು ಎರಡನೇ ಸೀಸನ್​ಗೆ ಮನೋಜ್​ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ಮಾಹಿತಿ ಪ್ರಕಾರ, ಮೂರನೇ ಸೀಸನ್​ಗೆ ಸಂಭಾವನೆಯನ್ನು ಡಬಲ್​ ಮಾಡಿಕೊಂಡಿದ್ದಾರೆ ಮನೋಜ್​!

ಹೌದು, ಪ್ರತಿ ಎಪಿಸೋಡ್​ಗೆ ಮನೋಜ್​ 2.25ರಿಂದ 2.50 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಎರಡನೇ ಸೀಸನ್​ನಂತೆ ಮೂರನೇ ಸೀಸನ್​ನಲ್ಲೂ 9 ಎಪಿಸೋಡ್​ ಇರಲಿದೆ ಎಂದುಕೊಂಡರೆ ಮನೋಜ್​ ಸಂಭಾವನೆ 20ರಿಂದ 22.5 ಕೋಟಿ ರೂಪಾಯಿ ಆಗಲಿದೆ.

ಮನೋಜ್​ ಬಾಜಪೇಯಿ, ದಿ ಫ್ಯಾಮಿಲಿ ಮ್ಯಾನ್ ಸರಣಿಯಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಪ್ರೇಕ್ಷಕರಿಗೂ ಅವರ ಪಾತ್ರ ಇಷ್ಟವಾಗಿದೆ​. ಈ ಕಾರಣಕ್ಕೆ ಅವರಿಗೆ ಹೆಚ್ಚು ಸಂಭಾವನೆ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ನಿರ್ಮಾಣ ಸಂಸ್ಥೆಯ ಲೆಕ್ಕಾಚಾರ. ಈ ಕಾರಣಕ್ಕೆ ವೇತನ ಹೆಚ್ಚಿಸೋಕೆ ನಿರ್ಮಾಣ ಸಂಸ್ಥೆ ಒಪ್ಪಿಕೊಂಡಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ರಿಲೀಸ್​ಗೂ ಮೊದಲೇ ವಿವಾದ ಸೃಷ್ಟಿಸಿತ್ತು. ಟ್ರೇಲರ್​ ನೋಡಿದ ಅನೇಕರು ತಮಿಳರನ್ನು ಉಗ್ರರ ರೀತಿ ತೋರಿಸಲಾಗಿದೆ, ಈ ವೆಬ್​ ಸೀರಿಸ್​ ತೆರೆಕಾಣಬಾರದು ಎಂದು ವಾದ ಮಂಡಿಸಿದ್ದರು. ವೆಬ್​ ಸೀರಿಸ್​ ತೆರೆಕಂಡ ನಂತರವೂ ಒಂದಿಬ್ಬರು ಈ ಬಗ್ಗೆ ಕೊಂಕು ತೆಗೆದಿದ್ದರು. ಇದಕ್ಕೆ ಮನೋಜ್​ ಬಾಜಪೇಯಿ ಸ್ಪಷ್ಟನೆ ನೀಡಿದ್ದು, ‘ನಾವೆಲ್ಲರೂ ಜವಾಬ್ದಾರಿಯುತ ಜನರು. ನಾವು ನಮ್ಮ ದೇಶದ ಪ್ರತಿ ಸಂಸ್ಕೃತಿಯನ್ನು ಗೌರವಿಸುತ್ತೇವೆ. ಹೀಗಾಗಿ, ಇದು ಪ್ಯಾನ್​ ಇಂಡಿಯಾ ಶೋ ಆಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ’ ಎಂದಿದ್ದಾರೆ.

ಇದನ್ನೂ ಓದಿ:

Samantha Akkineni: ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಸಮಂತಾ, ಮನೋಜ್ ಬಾಜಪೇಯಿ ಪಡೆದ ಸಂಭಾವನೆ ಎಷ್ಟು?

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?

Published On - 4:43 pm, Sat, 12 June 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us