ಗೋವಾದಲ್ಲಿ ಕಾರು ಅಪಘಾತ; ಉದಯೋನ್ಮುಖ ನಟಿ ಈಶ್ವರಿ ದೇಶಪಾಂಡೆ ಮತ್ತು ಆಕೆಯ ಸ್ನೇಹಿತ ದುರ್ಮರಣ

| Updated By: shivaprasad.hs

Updated on: Sep 22, 2021 | 12:00 PM

Ishwari Deshpande: ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸಿದ್ದ ಉದಯೋನ್ಮುಖ ನಟಿ ಈಶ್ವರಿ ದೇಶಪಾಂಡೆ, ತಮ್ಮ ಚಿತ್ರಗಳು ಬಿಡುಗಡೆಯಾಗುವ ಮುನ್ನವೇ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಗೋವಾದಲ್ಲಿ ಕಾರು ಅಪಘಾತ; ಉದಯೋನ್ಮುಖ ನಟಿ ಈಶ್ವರಿ ದೇಶಪಾಂಡೆ ಮತ್ತು ಆಕೆಯ ಸ್ನೇಹಿತ ದುರ್ಮರಣ
ನಟಿ ಈಶ್ವರಿ ದೇಶಪಾಂಡೆ
Follow us on

ಮರಾಠಿ ಹಾಗೂ ಹಿಂದಿ ಚಿತ್ರರಂಗದ ಉದಯೋನ್ಮುಖ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 21) ಈಶ್ವರಿ ಹಾಗೂ ಅವರ ಸ್ನೇಹಿತ ಶುಭಮ್ ದಾಡ್ಗೆ ಗೋವಾದಲ್ಲಿ ಪ್ರಯಾಣಿಸುವಾಗ ಅಪಘಾತವಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಬರ್ದೇಜ್ ತಾಲೂಕಿನ ಅರ್ಪೋರಾ ಅಥವಾ ಹದ್ಫಡೆ ಗ್ರಾಮದ ಸಮೀಪ ಮುಂಜಾನೆ 5.30 ಸುಮಾರಿಗೆ ಕಾರು ಬಾಗಾ ಕ್ರೀಕ್​ಗೆ (ಬಾಗಾ ತೊರೆ) ಉರುಳಿಬಿದ್ದಿದೆ. ಕಾರು ಲಾಕ್ ಆಗಿದ್ದರಿಂದ ಅದರಿಂದ ಹೊರಬರಲು ಸಾಧ್ಯವಾಗದೇ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಇ-ಟೈಮ್ಸ್​ ವರದಿ ಮಾಡಿರುವ ಪ್ರಕಾರ, ಈಶ್ವರಿ ಹಾಗೂ ಶುಭಂ ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದರು. ಅವರು ಸೆಪ್ಟೆಂಬರ್ 15ರ ಬುಧವಾರ ಗೋವಾಕ್ಕೆ ಬಂದಿದ್ದರು. ನಟಿ ಮರಾಠಿ ಮತ್ತು ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇವೆರಡೂ ಇನ್ನೂ ಬಿಡುಗಡೆಯಾಗಿಲ್ಲ.

ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಗೋವಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸಂದರ್ಭದಲ್ಲಿ  ಶುಭಂ ದಾಡ್ಗೆ ಕಾರನ್ನು ಚಾಲನೆ ಮಾಡುತ್ತಿದ್ದರು. ಅಂಜುನಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಸೂರಜ್ ಗವಾಸ್ ನೀಡಿರುವ ಮಾಹಿತಿಯ ಪ್ರಕಾರ, “ಚಾಲಕನ ನಿಯಂತ್ರಣ ತಪ್ಪಿದ ಕಾರಣ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಿಯಂತ್ರಣ ಕಳೆದುಕೊಂಡ ನಂತರ, ಕಾರು ಎದುರಿನ ಕಾರಿಡಾರ್​ಗೆ ಕುಟ್ಟಿ, ಮುಂದಕ್ಕೆ ಹೋಗಿ ಸಣ್ಣ ತೊರೆಯೊಂದಕ್ಕೆ ಬಿದ್ದಿದೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತು. ಕಾರನ್ನು ಹೊರತೆಗೆಯುವ ವೇಳೆಗೆ ಈರ್ವರೂ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.

ಈಶ್ವರಿ ಮರಾಠಿಯ ‘ಪ್ರೇಮಚೆ ಸೈಡ್ ಎಫೆಕ್ಟ್ಸ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಲು ಸಿದ್ಧತೆ ನಡೆಸಿದ್ದರು.

ಇದನ್ನೂ ಓದಿ:

‘ರಾಧೆ ಶ್ಯಾಮ್’ ಸೆಟ್​ನಲ್ಲಿ ಪೂಜಾ ಹೆಗ್ಡೆ ನಡವಳಿಕೆಯಿಂದ ಪ್ರಭಾಸ್​ ಕಿರಿಕಿರಿಗೊಂಡಿದ್ದರೇ?; ಸುದ್ದಿಯ ಅಸಲಿಯತ್ತು ಇಲ್ಲಿದೆ

Deepika Padukone: ದೀಪಿಕಾ- ಸಿಂಧು ಬ್ಯಾಡ್ಮಿಂಟನ್ ಆಟ ಬಲು ಜೋರು; ಬಯೋಪಿಕ್ ಮಾಡ್ತೀರಾ ಎಂದು ಪ್ರಶ್ನಿಸಿದ ಫ್ಯಾನ್ಸ್

Payal Ghosh: ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ್ದ ನಟಿ ಪಾಯಲ್ ಘೋಷ್ ಮೇಲೆ ಹಲ್ಲೆ ಮತ್ತು ಆಸಿಡ್ ದಾಳಿಗೆ ಯತ್ನ

(Marathi actress Eshwari Deshpande and her friend Shubham dies in Car Accident in Goa)

Published On - 11:58 am, Wed, 22 September 21